ನವಜಾತ ಶಿಶುವನ್ನು ಬಿಸಾಕಿ ಹೋದ ಹೃದಯಹೀನ ಪೋಷಕರು

ಹನುಮಸಾಗರ : ಪೋಷಕರು ಬೇಡವಾದ ನವಜಾತ ಶಿಶುವೊಂದು ಪತ್ತೆಯಾಗಿರುವ ಹೃದಯವಿದ್ರಾವಕ ಘಟನೆ ಕೊಪ್ಪಳದಲ್ಲಿ ಜರುಗಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ

ಹನುಮಸಾಗರ ಪಟ್ಟಣದ ಹಳೆ ಪ್ರಾಥಮಿಕ ಆಸ್ಪತ್ರೆ ಬಳಿ ನವಜಾತ ಶಿಶು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ 7 ಗಂಟೆಗೆ ಸಾವನ್ನಪ್ಪಿದ ಗಂಡು ನವಜಾತ ಶಿಶುವನ್ನು ಪಟ್ಟಣದ ಆಸ್ಪತ್ರೆಯ ಶಡ್ ಬಳಿ ಎಸೆದುಹೋಗಿದ್ದರು, ಜನರು ಅದನ್ನು ನೋಡಲು ಮುಗಿಬಿದಿದ್ದರು. ಯಾರೋ ಪಾಪಿಗಳು ಶಿಶು ಬೇಡವಾಗಿದ್ದರಿಂದ ಅದನ್ನು ಪ್ಲಾಸ್ಟಿಕ್ ನಲ್ಲಿ ಸುತ್ತಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ. ಶಿಶು ಯಾರದ್ದು ಎಂದು ಇನ್ನು ತಿಳಿದು ಬಂದಿಲ್ಲ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Please follow and like us:
error