ನನ್ನ ಮುಟ್ಟಿನ ರಕ್ತ ನೀಲಿ ಅಲ್ಲ-ಕೆಂಪು

Koppal  ಅದೊಂದು ಸಂಜೆ ಮನೆಯಲ್ಲಿ ಎಲ್ಲಾರು ಜೊತೆಯಾಗಿ ರಸಮಂಜರಿ ಕಾರ್ಯಕ್ರಮವನ್ನು ನೋಡುತ್ತಿದ್ದೆವು. ಈ ಕಾರ್ಯಕ್ರಮವೆಂದರೆ, ನಮ್ಮೆಲ್ಲಾರಿಗೂ, ಇಷ್ಟ. ಈ ಕಾರ್ಯಕ್ರಮ ಬಂತೆಂದರೆ ಸಾಕು, ಮನೆ ಗಂಡಸರು ಕುಡಿಯೋದು ಬಿಟ್ಟು, ಕಟ್ಟೆಯಲ್ಲಿ ಹರಟೆ ಒಡೆಯೋದು ಬಿಟ್ಟು ಟಿ.ವಿ ನೋಡೊಕೆ ಬಂದುಬಿಡುತ್ತಿದ್ದರು. ಮನೆಯವರು, ಅಕ್ಕಪಕ್ಕದವರು, ಎಲ್ಲಾರೂ ಸೇರಿ ನೋಡುವಂತಹದ್ದು ಇದೊಂದೆ ಕಾರ್ಯಕ್ರಮಕ್ಕೆ. ನೀವೇನೆ ಹೇಳಿ ಇಂತಹ ದೃಶ್ಯ ನೋಡೋಕೆ ಚೆಂದ. ಒಂದು ದಿನ ಹಳೇ ಹಾಡು ಕೇಳುತ್ತಾ ಇರುವಾಗಲೇ ಹಾಳದ್ದು ಕರೆಂಟು ಹೋಗಿಬಿಟ್ಟಿತು. ಅಯ್ಯೋ..ಅನ್ನುವಷ್ಟರಲ್ಲಿ ಕರೆಂಟು ಬಂತು ಆದರೆ, ಆ ಹಾಡೇ ಮುಗಿದು ಯಾವುದೋ ಒಂದ ಜಾಹಿರಾತು ಬರುತ್ತಿತ್ತು. ಎಲ್ಲಾರ ಮೂಖದಲ್ಲಿ ಬೇಸರ. ಆ ಹಾಡು ತಪ್ಪಿಹೋಯಿತಲ್ಲ ಅಂತ ಆದರೆ, ಈ ಕಮಲ ಮಾತ್ರ ಕೆಂಡದಂತಹ ಕೋಪ ಮಾಡಿಕೊಂಡು ಟಿ.ವಿ. ನೋಡುತ್ತಿದ್ದಳು. ಏನು ಅಂತ ಅಮ್ಮ ಕೇಳಿದರೆ, ನೋಡಮ್ಮ ಈ ಟಿವಿಯವರು ಎಷ್ಟು ಸುಳ್ಳು ಹೇಳ್ತಾರೆ ಅಂತ ಶುರು ಮಾಡಿದಳು. ಎಷ್ಟೇ ಆಗಲಿ, ಅವಳು ಸ್ವಲ್ಪ ಓದಿಕೊಂಡಿರೋಳು, ಅಮ್ಮನ ಮಗಳು ಬೇರೆ ಸಾನೆ ಮುದ್ದು ಮಾಡಿ ಬೇಳಿಸ್ತಿದ್ದರು, ಅಮ್ಮ ಮತ್ತೆ ಕೇಳಿದಳು ಏನೆ ಅದು ಸುಳ್ಳು, ಯಾಕೆ ನಿನಗೆ ಕೋಪ ಅಂತದ್ದೇನು ನಿನಗೆ ಕೋಪ ಬರಿಸುವಂತಹ ಚಿತ್ರ ಬಂದುಬಿಡ್ತು? ಅಂತ ಅಮ್ಮ ರೇಗಿಸಿಕೊಂಡೆ ಕೇಳಿದಳು. ಟಿ.ವಿ. ನೋಡೊಕೆ ಬಂದವರಿಗೆಲ್ಲಾ ಆಶ್ಚರ್ಯ ! ಏನು ಸುಳ್ಳು ಹೇಳಿದರು ಈ ಟಿವಿಯವರು ಅಂತ ತಲೆ ಕೆರೆದುಕೊಳ್ಳುತ್ತದ್ದರು. ಆಗ ಕಮಲ ಹೇಳಿದಳು ನೋಡಮ್ಮ ನಾವು ಪ್ರತಿ ತಿಂಗಳು ಮುಟ್ಟಾಗುತ್ತೀವಲ್ಲ.. ಅಂತ ಹೇಳುವಷ್ಟರಲ್ಲೇ ಶ್..! ಬಾಯಿ ಮುಚ್ಚೆ ಎಲ್ಲಿ, ಏನು ಮಾತಾಡಬೇಕೆಂಬ ಜ್ಙಾನ ಇಲ್ಲ ನಿನಗೆ . ಇನ್ನು ಸ್ವಲ್ಪ ಹೊತ್ತಲ್ಲಿ ಮಾನ ಮಾರ್ಯದೆ ಎಲ್ಲಾ ತೆಗಿತಿದ್ದೆ ಅಲ್ವೆ! ಅಯ್ಯೋ ಅಮ್ಮ ನಾನು ಅಲ್ಲ ನಿಮ್ಮ ಮಾನ ಮಾರ್ಯದೆ ತೆಗಿತಿರೋದು, ಈ ಟಿವಿಯವರು. ಅಮ್ಮ ತಲೆಕೆರೆಯುತ್ತಾ ಏ ॒ಸರಿ ಏನು ಹೇಳು ಏನದು. ಅಲ್ಲ ಅಮ್ಮ ಗಟ್ಟಿಯಾಗಿ ಗದರಿ ನನ್ನ ಬಾಯಿ ಮಾತ್ರ ಮುಚ್ಚಿಸಿದೆಯಲ್ವ ಹಾಗೇಯೇ ಈ ಜಾಹಿರಾತು ಮಾಡ್ತರಾಲ್ಲ ಅವರ ಬಾಯಿ ಮುಚ್ಚಿಸು ನೋಡೊಣ, ಯಾಕೆ ಆಗೊಲ್ವ . ಅವರು ಸುಳ್ಳು ಹೇಳುತ್ತಿರುವುದು, ನಾವು ಪ್ರತಿ ತಿಂಗಳು ಮುಟ್ಟಾಗುತ್ತೀವಿ ಅಲ್ವ ಆಗ ನಮಗೆ ರಕ್ತ ತಾನೇ ಹೋಗೋದು? ಹೌದು ಅದನ್ನ ಈಗ ಯಾಕೆ ಇಷ್ಟು ಜನರ ಎದಿರು ಕೇಳಿ ಮಾನ ಕಳೆದುಕೊಳ್ಳುತ್ತಿದ್ದೀಯಾ? ಅಯ್ಯೋ ನನ್ನ ಕರ್ಮ. ಎಂದು ಅಮ್ಮ ಗೊಳಾಡುತ್ತಾ ತಲೆ ಮೇಲೆ ಕೈ ಇಟ್ಟುಕೊಂಡು ಕೂತಳು. ಅಮ್ಮ ಇರು ಸ್ವಲ್ಪ ನಾನು ಹೇಳುತ್ತಿರೋದನ್ನ ಸ್ವಲ್ಪ ಕೇಳಿಸಿಕೊ, ಮುಟ್ಟಿನ ರಕ್ತದ ಬಣ್ಣ ನೀಲಿ ಅಂತೆ ಇದು ಸರಿನಾ? ಆ ಪ್ಯಾಡ್ ಬಳಸಿ ಬಳಸಿ ಮಲಗಿದರೆ ರಾತ್ರಿವರೆಗೂ ಆರಮಾವಾಗಿ ನಿದ್ದೆ ಮಾಡ್ತೀವಿ ಅಂತೆ ನಿಜನಾ? ಕಡಿಮೆ ಬೆಲೆಗೆ ಸಿಗುತ್ತಂತೆ, ಕಲೆ ಕೂಡ ಆಗೊಲ್ಲ ಅಂತ ಹೌದಾ? ನೋಡಮ್ಮ ಎಷ್ಟು ಸುಳ್ಳು ಹೇಳುತ್ತಿದ್ದಾರೆ. ಎಲ್ಲಾರು ಅವಳ ಮುಖವನ್ನು ಆಶ್ಚರ್ಯದಿಂದ ನೋಡಿದ್ದು ಅಲ್ಲದೆ, ಬೇರೆ ಯಾವ ವಿಷಯ ಅಷ್ಟಾಗಿ ತೆಲೆಕೆಡಿಸಿಕೊಳ್ಳದಿದ್ದರು, ಆ ಬಣ್ಣದ ಬಗ್ಗೆ ಎಲ್ಲಾರೀಗೂ ಗೊಂದಲ ಪ್ರಶ್ನೆ. ಹೌದು ಯಾಕೆ ಇದನ್ನ ಸುಳ್ಳು ಹೇಳುತ್ತಿದ್ದಾರೆ. ನಮಗೆ ಯಾಕೆ ಇಷ್ಟು ದಿನ ಇದರಕಡೆ ಗಮನವೇ ಇರಲಿಲ್ಲ. ಎಂದು ಎಲ್ಲಾರೂ ಅವಳಿಗೆ ಸಪೋರ್ಟ ಆಗಿ ನಿಂತರು, ಆಗ ಯಾವ ಮಾನ ಮಾರ್ಯದೆ ಕೆಲಸಕ್ಕೆ ಬರಲಿಲ್ಲ. ಸತ್ಯ ಯಾವುದು ಸುಳ್ಳು ಯಾವುದು ಎಂಬುದಷ್ಟೇ ಬೇಕಿತ್ತು. ಆಗ ಕಮಲಳನ್ನೇ ಕೇಳಿದರು ನಿನಗೆ ಏನು ಗೊತ್ತು ಈ ಸ್ಯಾನಿಟಿರಿ ಪ್ಯಾಡ್ ಬಗ್ಗೆಹೇಳ್ತೀನಿ ಇರಿ, ಈ ಸ್ಯಾನಿಟಿರಿ ಪ್ಯಾಡ್‌ಲ್ಲಿ ಮರದ ಹೊಟ್ಟು, ಬ್ಲೀಚ್, ಪೊಲಿಮಾಯಿಲ್ ಜೆಲ್, ಪ್ಲಾಸ್ಟೀಕ್ ಫರಫ್ಯೂಮ್ ಎಂಬ ಇನ್ನಿತರ ಕೆಮಿಕಲ್ ಗಳನ್ನು ಉಪಯೋಗಿಸಿ ಒಂದು ಸ್ಯಾನಿಟಿರಿ ಪ್ಯಾಡ್‌ನ್ನು ತಯಾರು ಮಾಡಿ ನಮಗೆ ಹಂಚುತ್ತಾರೆ. ಇವೆಲ್ಲಾವನ್ನು ಹಾಕುವುದರಿಂದಲೇ ನಮ್ಮ ರಕ್ತ ಅಲ್ಲೇ ಹೀರಿಕೊಂಡು, ಮುದ್ದಯಾಗಿ ಇರುತೆ. ಆದರೆ ಪ್ಯಾಡ್ ಬಳಸಿದ ನಂತರ ಕೆಲವರು ಭೂಮಿಯಲ್ಲಿ ಹೂತು ಹಾಕುತ್ತಾರೆ. ಇನ್ನು ಕೆಲವರು ಸುಡುತ್ತಾರೆ, ನದಿಗಳಲ್ಲಿ, ಕಾಲುವೆಗಳಲ್ಲಿ, ಗಟಾರಗಳಲ್ಲಿ, ಶೌಚಾಲಯಗಳಲ್ಲಿ ಬಿಸಾಡುತ್ತಾರೆ. ಇದೆಲ್ಲಾ ಮಾಡುವುದರಿಂದ ಭೂಮಿಯಲ್ಲಿ ಈ ಪ್ಲಾಸ್ಟೀಕ್ ಹೋಗುವುದರಿಂದ, ಸುಡುವುದರಿಂದ ಗಾಳಿಯಲ್ಲಿ ಮಲಿನವಾದಾಗ ಗಾಳಿಯಿಂದ ಉಸಿರಾಡುತ್ತೇವೆ.ಇದರಿಂದ ಭೂಮಿಗೂ ನಮಗೂ ಯಾವುದೇ ರೀತಿಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಾರಣ ಒಂದು ಪ್ಲಾಸ್ಟೀಕ್ ಭೂಮಿಯಲ್ಲಿ ಕರಗಲು ಸುಮಾರು ೮೦೦ ವರ್ಷಗಳ ಕಾಲ ಬೇಕಾಗುತ್ತದೆ. ಹಾಗಾಗಿ ಬಹಳ ಹಾನಿಕಾರಕ ಮನುಷ್ಯರಿಗೂ, ಪ್ರಾಣಿ,ಪಕ್ಷಿ, ಹಾಗೂ ಭೂಮಿಗೂ ಕೂಡ.ನಾವು ಮುಟ್ಟಾದಾಗ ಸ್ಯಾನಿಟಿರಿ ಪ್ಯಾಡ್‌ನ್ನು ಬಳಸುವುದರಿಂದ, ನಮ್ಮ ತೊಡೆ ಸಂದಿಗಳಲ್ಲಿ ಗಾಯಗಳು, ಸೋಂಕುಗಳು, ಬಿಳಿಮುಟ್ಟಿನ ತೊಂದರೆಗಳು ಬರಲು ಶುರುವಾಗುತ್ತದೆ. ನಮಗೆ ಇದು ಗೋತ್ತೇ ಆಗುವುದಿಲ್ಲ. ಇದನ್ನೂ ಗಮನಿಸದೇ ನಾವು ನಮ್ಮ ಮುಂದಿನ ಪೀಳಿಗೆಗೆ ಬರೀ ಪ್ಲಾಸ್ಟೀಕ್ ಮಾತ್ರ ಬಿಟ್ಟು ಹೋಗಿ ಅವರ ಆರೋಗ್ಯ ಹಾಗೂ ಪರಿಸರವನ್ನು ನಾಶ ಮಾಡುತ್ತಿದ್ದೇವೆ.ಹೆಚ್ಚಿನದಾಗಿ ಮುಟ್ಟಿನ ರೂಪದಲ್ಲಿ ಬರುವ ಬಣ್ಣ ನೀಲಿ ಎಂದು ಹೇಳುತ್ತಾರಲ್ವ! ನಮ್ಮನ್ನೇನು ಅಷ್ಟು ಮುಟ್ಟಾಳರನ್ನಾಗಿ ಅಂದುಕೊಂಡಿದ್ದಾರಾ? ಈ ಜಾಹಿರಾತಿನವರು. ಅವರು ಬಿಡಿ ನಮ್ಮ ಟಿ.ವಿ. ಮಾಧ್ಯಮದವರಿಗೆ ಏನಾಗಿದೆ. ಇದನ್ನು ನೋಡಿ ಪ್ರಶ್ನೆ ಮಾಡಬೇಕಾದವರೆ, ಇದನ್ನ ಒಪ್ಪಿ ಈ ಜಾಹಿರಾತಿಗೆ ಅವಕಾಶ ಕೊಟ್ಟರೆ, ನೋಡುವವರ ಮನಸ್ಥಿತಿ ಹೇಗಾಗಬಹದು, ಮಕ್ಕಳು ನೋಡುತ್ತಿರುತ್ತಾರೆ ಅವರ ಬುದ್ದಿಮಟ್ಟದ ಸ್ಥಿತಿ ಹೇಗಾಗಬಹದು. ಇದು ನಾನು ಸುಮ್ಮನೆ ಊಹಿಸಿಕೊಂಡು ಹೇಳುತ್ತಿಲ್ಲ. ಒಂದು ದಿನ ೮ ನೇ ತರಗತಿಯ ಶಾಲೆಯ ಹುಡುಗರಿಗೆ ಈ ಜಾಹಿರತಿನ ಬಗ್ಗೆ ಪ್ರಶ್ನೆ ಕೇಳಿದ್ದೆ, ಈ ಜಾಹಿರಾತು ನೋಡಿದರೆ, ನಿಮಗೆ ಏನು ಅನಿಸುತ್ತೆ? ಅಂತ ಕೇಳಿದರೆ, ಆ ಮಕ್ಕಳು ಹೇಳಿದ್ದು, ನಾವು ನೋಡೊಲ್ಲ ಚೇಂಜ್ ಮಾಡ್ತೇವೆ ಚಾನಲ್. ಮತ್ತೊಬ್ಬ ಅದೇನೋ ಪ್ಯಾಡ್ ಅಂತೆ, ನೀಲಿ ಬಣ್ಣ ಹೆಣ್ಣುಮಕ್ಕಳ ದೇಹದಲ್ಲಿ ಇರುತ್ತೆ ಅಂತೆ, ಮತ್ತೊಬ್ಬ ನಮಗೇಕೆ ನೀಲಿ ಬಣ್ಣ ಬರೊಲ್ಲ. ಹೀಗೆ ಅವರು ಹೇಳುವ ಉತ್ತರ ಕೇಳಿ ಅಯ್ಯೋ ಪಾಪ ಅನಿಸಿತ್ತು. ಜೊತೆಗೆ ಈ ಜಾಹಿರಾತಿನವರ ಮೇಲೆ ನನಗೆ ಕೋಪ ಕೂಡ ಬಂದಿತ್ತು. ಹೀಗೆ ಎಷ್ಟು ಜನರ ಬುದ್ಧಿಯನ್ನು ಹೀಗೆ ಭ್ರಮೆಯಲ್ಲಿ ಇರಿಸುತ್ತಾರೆ? ತಮಾಷೆ ಎಂದರೆ, ಸಿನಿಮಾದವರಿಗೆ, ದಾರವಾಹಿದವರಿಗೆ, ಪೋಲಿಸ್, ರೌಡಿ ಎಲ್ಲಾರಿಗೂ ಈ ಆಕ್ಸಿಡೆಂಟ್ ಆದಾಗ, ಯಾರನ್ನಾದರೂ ಚಾಕು ತೆಗೆದುಕೊಂಡು ಕೊಲೆ ಮಾಡಿದಾಗಾ, ಯರಾದರೂ ವಿಷ ಕುಡಿದು, ಬಾಯಿಯಿಂದ ವಾಂತಿ ಮಾಡಿದಾಗ, ಅದು ಯಾವುದೋ ಬ್ಲೆಡ್ ಕ್ಯಾನ್ಸರ್ ಬಂದು ಬಾಯಿಯಿಂದ ವಾಂತಿಯನ್ನುಕೆಂಪು ಬಣ್ಣದಿಂದಲೇ ಆರಾಮವಾಗಿ ತೋರಿಸಿಬಹದು. ಆದರೆ, ನಾವು ಪ್ರತಿ ತಿಂಗಳು ಮುಟ್ಟಾದಾಗ ಹೊರ ಬರುವ ಕೆಂಪು ಬಣ್ಣ ತೋರಿಸಲು ಕಷ್ಟ.! ಯಾಕೆ ಈ ಬಣ್ಣ ಪ್ರತಿಯೊಬ್ಬರಿಗೂ ಗೊತ್ತಿರುವುದಿಲ್ಲ ಎನ್ನುವ ಭ್ರಮೆ ಇದೆಯಾ? ಅಥಾವ ಇದರ ಬಗ್ಗೆ ಯಾರು ಇದುವರೆಗೂ ಪ್ರಶ್ನೆ ಮಾಡಿಲ್ಲವೆಂಬ ಅತೀ ಬುದ್ದಿವಂತಿಕೆ ಇರಬಹುದೇ! ಸತ್ಯ ಏನೆಂದರೆ, ನಾವು ಮುಟ್ಟಾದಾಗ ಬರುವ ಬಣ್ಣ ನೀಲಿ ಅಲ್ಲ ಕೆಂಪು. ಈ ಬಣ್ಣವನ್ನೇ ತೋರಿಸಿದರೆ ಏನಾಗುತ್ತೆ. ಯಾಕಿಷ್ಟು ಮುಚ್ಚು ಮರೆ, ಯಾಕಿಷ್ಟು ಹಗಲು ಕಂಡ ಬಾವಿಗೆ ಬಿಳೊದು. ಇಷ್ಟು ವರ್ಷಗಳ ಸುಳ್ಳುಗಳಿಗೆ ಯಾರೂ ಇದರ ಬಗ್ಗೆ ತಲೆಕೆಡಿಸಕೊಂಡಿಲ್ಲ ಬಿಡಿ ಎಂಬ ಉಡಫೆ ಇರಬಹದಾ!ಣ್ಣಗಳಿಗೆ ಇಲ್ಲದ್ದು ನಾಚಿಕೆ ಮುಜುಗರ ಈ ಮನುಷ್ಯರಿಗೆ ಯಾಕೆ ನಾಚಿಕೆ ಮುಜುಗರ! ನಮ್ಮೊಳಗಿನ ಕೀಳರಿಮೆಯನ್ನು ಹೊರಹಾಕಿ ಪ್ರಶ್ನೆ ಮಾಡಬೇಕಾಗಿದೆ. ಮೌನ ಮುರಿದು ಮಾತಾಡಬೇಕಿದೆ. ಸತ್ಯ ಮಾತ್ರ ಹೇಳಬೇಕಿದೆ.-ಜ್ಯೋತಿ ಹಿಟ್ನಾಳ್

Please follow and like us:
error