ನನ್ನನ್ನು ಶೀಘ್ರವೇ ವಿಜಯಿ ಎಂಬುದಾಗಿ ಘೋಷಿಸಲಾಗುತ್ತದೆ : ಬೈಡನ್

ವಿಲ್ಮಿಂಗ್ಟನ್ (ಅಮೆರಿಕ), ನ. 6: ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಸೋಲಿಸುವೆ ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ ಗುರುವಾರ ಹೇಳಿದ್ದಾರೆ. ನನ್ನನ್ನು ಶೀಘ್ರವೇ ವಿಜಯಿ ಎಂಬುದಾಗಿ ಘೋಷಿಸಲಾಗುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.ಜನರು ಸಮಾಧಾನದಿಂದ ಇರಬೇಕು ಹಾಗೂ ಫಲಿತಾಂಶ ಶೀಘ್ರವೇ ತಿಳಿಯುತ್ತದೆ ಎಂದು ಅವರು ನುಡಿದರು.‘‘ಈಗಿನ ಚುನಾವಣಾ ಸ್ಥಿತಿಗತಿಯ ಬಗ್ಗೆ ನಮಗೆ ಸಂತೃಪ್ತಿಯಿದೆ. ಮತ ಎಣಿಕೆ ಮುಗಿದಾಗ ಸೆನೆಟರ್ ಕಮಲಾ ಹ್ಯಾರಿಸ್ (ಉಪಾಧ್ಯಕ್ಷ ಅಭ್ಯರ್ಥಿ) ಮತ್ತು ನನ್ನನ್ನು ವಿಜಯಿ ಎಂಬುದಾಗಿ ಘೋಷಿಸಲಾಗುತ್ತದೆ ಎನ್ನುವುದರಲ್ಲಿ ನಮಗೆ ಯಾವ ಸಂಶಯವೂ ಇಲ್ಲ’’ ಎಂದು ಡೆಲಾವೆರ್ ನಗರದ ವಿಲ್ಮಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೈಡನ್ ಹೇಳಿದರು.

Please follow and like us:
error