ನಕಲಿ ಟ್ವೀಟ್‌ ಮಾಡಿರುವ ಅನಾಮದೇಯರ ವಿರುದ್ದ ಸಚಿವ ಬಿ.ಶ್ರೀರಾಮುಲು ದೂರು

#COVID19 ತರಹದ ಗಂಭೀರ ವಿಷಯದಲ್ಲಿ, ನನ್ನ ಹೆಸರು ಬಳಸಿ #FakeNews (ಸುಳ್ಳು ಸುದ್ದಿ) ಹರಡುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು@CPBlr  ಅವರಿಗೆ ಮನವಿ ಮಾಡಲಾಗಿದೆ. ಇಂತಹ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೆ ಹೊರತು, ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಬೇಡಿ

 

ದಿನಾ೦ಕ:10.03.2020 ರಂದು ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರಿನಲ್ಲಿ ನಾನು ಟ್ವೀಟ್‌ ಮಾಡಿರುವ ರೀತಿಯಲ್ಲಿ ಕೆಲವು ವಿಷಯಗಳನ್ನು(ಗ೦ಜಲ ಕುಡಿಯುವುದು ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೋನಾ ವೈರಸ್‌ನ ತಡೆಗಟ್ಟಬಹುದು)
ಎಂಬುದಾಗಿ “namma nechchina mukyamantri . ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯ” ಎಂಬ ಫೇಸ್‌ಬುಕ್‌ ಖಾತೆ ಮತ್ತು ಉರಿತೈತೆ ಎಂಬ ಸಾಮಾಜಿಕ ಜಾಲ ತಾಣಗಳ ಖಾತೆಗಳಲ್ಲಿ ಕೆಲವು ಅನಾಮದೇಯ ದುಷ್ಕರ್ಮಿಗಳು ಪ್ರಕಟಿಸಿರುತ್ತಾರೆ.

ಸದರಿ ದಿನದಂದು ಈ ವಿಷಯವನ್ನು ನಾನು ಟ್ವೀಟ್‌ ಮಾಡಿರುವುದಿಲ್ಲ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವುದಿಲ್ಲ.. ಇದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವನಾಗಿರುವ ನನ್ನ ಮೇಲೆ ರಾಜ್ಯದ ಸಾಮಾನ್ಯ ಜನರಲ್ಲಿ  ಕೆಟ್ಟ ಅಭಿಪ್ರಾಯ ವ್ಯಕ್ತವಾಗಿರುವುದಲ್ಲದೆ ತಪ್ಪು ಸಂದೇಶ ತಲುಪಿಸಿದಂತಾಗಿರುತ್ತದೆ. ನನ್ನ ತೇಜೋವಧೆ ಮಾಡುವ ಹಾಗೂ ಜನರಿಗೆ ನನ್ನ ಬಗ್ಗೆ ತಪ್ಪು ಸಂದೇಶ ತಲುಪಿಸುವ ದುರುದ್ಧೇಶದಿಂದ ಕೆಲವು ಕಿಡಿಗೇಡಿಗಳು ನಕಲಿ ಹಾಗೂ ತಪ್ಪು ಸಂದೇಶಗಳನ್ನು ನಾನೇ ಪ್ರಕಟಿಸುತ್ತಿರುವುದಾಗಿ ಜನರಲ್ಲಿ ಬಾವಿಸುವಂತೆ ಮಾಡುವ ಮೂಲಕ ನನ್ನ ವೈಯಕ್ತಿಕ ತೇಜೋವಧೆ ಮಾಡುವ ದುರುದ್ಧೇತವಾಗಿರುತ್ತದೆ. ಇದರಿಂದ ನನ್ನ ಘನತೆಗ ಕು೦ದುಂಟಾಗಿದ್ದು, ಜನರಲ್ಲಿ ತಪ್ಪು ಅಭಿಪ್ರಾಯ ವ್ಯಕ್ತವಾಗಿರುತ್ತದೆ. ಆದ್ದರಿಂದ, ತಾವು ಈ ಬಗ್ಗೆ ಕೂಡಲೇ ಪರಿಶೀಲಿಸಿ, ನನ್ನ ಹೆಸರಿನಲ್ಲಿ ನಕಲು ಟ್ವೀಟ್‌ ಮಾಡಿರುವ ಅನಾಮದೇಯರ ಎರುದ್ಧ ನಿಯಮಾನುಸಾರ ಸಂಬಂಧಪಟ್ಟವರ ವಿರುದ್ಧ ಕಾನೂನು ರೀತ್ಯ
ಕ್ರಮ ಜರುಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ತಮ್ಮನ್ನು ಕೋರುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

Please follow and like us:
error