fbpx

ಧಾರವಾಡ ಮಾಧ್ಯಮ ಪ್ರತಿನಿಧಿಗಳ ವರದಿ ನೆಗೆಟಿವ್

ಧಾರವಾಡ:ನಗರದ ಜಿಲ್ಲಾಸ್ಪತ್ರೆಯಲ್ಲಿ ಧಾರವಾಡ ಮಾಧ್ಯಮದವರಿಗೆ ನಡೆಸಿದ ಕೊವೀಡ್ ತಪಾಸಣಾ ವರದಿಗಳು ನೆಗೆಟಿವ್ ಬಂದಿದೆ…

ಒಟ್ಟು ಧಾರವಾಡ ದ ೫೭ ಮಾಧ್ಯಮ ಪ್ರತಿನಿಧಿಗಳು ಕೋವಿಡ್ ತಪಾಸಣೆ ಮಾಡಿಸಿಕೊಂಡಿದ್ದರು. ಅವರ ಗಂಟಲು‌ ದ್ರವವನ್ನು ಪರೀಕ್ಷೆ ಮಾಡಲು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಎಲ್ಲಾ ಮಾಧ್ಯಮ ಪ್ರತಿನಿಧಿಗಳ ವರದಿ ನೆಗೆಟಿವ್ ಬಂದಿದ್ದರಿಂದ ಧಾರವಾಡ ಮಾಧ್ಯಮದವರು ನಿಟ್ಟುಸಿರು ಬಿಡುವಂತಾಗಿದೆ..

ಮುಂಬೈ ಬೆಂಗಳೂರು ಸೇರಿದಂತೆ ಹಲವೆಡೆ ಕಾರ್ಯನಿರತ ಪತ್ರಕರ್ತರಲ್ಲಿ ಸೋಂಕು ಕಂಡು‌ಬಂದಿತ್ತು. ಇದರಿಂದ ಎಚ್ವೆತ್ತುಕೊಂಡಿದ್ದ ರಾಜ್ಯ ಸರ್ಕಾರ ರಾಜ್ಯದ ಎಲ್ಲಾ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ತಪಾಸಣೆ ನಡೆಸಲು ಸೂಚನೆ ನೀಡಿತ್ತು…

ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಎಪ್ರೀಲ್ 23 ರಂದು ಎಲ್ಲಾ 57 ಜನ ಮಾಧ್ಯಮ ಪ್ರತಿನಿಧಿಗಳ ಕೋವಿಡ್ ತಪಾಸಣೆ‌ ನಡೆಸಲಾಗಿತ್ತು ಆ ಎಲ್ಲಾ ವರದಿಗಳು ಇದೀಗ ನೆಗೆಟಿವ್ ಬಂದಿವೆ.

Please follow and like us:
error
error: Content is protected !!