ಧರ್ಮ, ಸಂಸ್ಕೃತಿ, ಗೋವಿನ ಹೆಸರಿನಲ್ಲಿ ಭಯ ಹುಟ್ಟಿಸುವುದು ‘ಭಯೋತ್ಪಾದನೆ’ಯಲ್ಲದಿದ್ದರೆ ಅದು ಮತ್ತೇನು?

ಹೊಸದಿಲ್ಲಿ, ನ.3: ಧರ್ಮ, ಸಂಸ್ಕೃತಿ ಹಾಗು ನೈತಿಕತೆಯ  ಹೆಸರಿನಲ್ಲಿ ಭಯವನ್ನು ಹುಟ್ಟು ಹಾಕುವುದು ಭಯೋತ್ಪಾದನೆಯಲ್ಲ ಎನ್ನುವುದಾದರೆ ‘ಭಯೋತ್ಪಾದನೆ’ ಎಂದರೇನು ಎಂದು ಬಹುಭಾಷಾ ನಟ ಪ್ರಕಾಶ್ ರೈ ಪ್ರಶ್ನಿಸಿದ್ದಾರೆ. 

ಈ ಬಗ್ಗೆ ಅವರ ಟ್ವೀಟೊಂದನ್ನು ಮಾಡಿದ್ದಾರೆ. ಹಿಂದೂ ಭಯೋತ್ಪಾದನೆ ಇಲ್ಲ ಎನ್ನಲಾಗದು ಎಂದು ನಟ ನಿರ್ದೇಶಕ ಕಮಲ್ ಹಾಸನ್ ಹೇಳಿಕೆ ನೀಡಿದ್ದ ಒಂದು ದಿನದ ನಂತರ ಪ್ರಕಾಶ್ ರೈ ಈ ಹೇಳಿಕೆ ನೀಡಿದ್ದಾರೆ.

“ನೈತಿಕತೆಯ ಹೆಸರಿನಲ್ಲಿ ನನ್ನ ದೇಶದ ಬೀದಿಗಳಲ್ಲಿ ಜೋಡಿಗಳಿಗೆ ಹಲ್ಲೆ ನಡೆಸುವುದು, ನಿಂದಿಸುವುದು ಭಯೋತ್ಪಾದನೆ ಅಲ್ಲದಿದ್ದರೆ… ಗೋಹತ್ಯೆಯ ಶಂಕೆಯಲ್ಲಿ ಕಾನೂನನ್ನು ಕೈಗೆತ್ತಿಕೊಂಡು ಜನರನ್ನು ಕೊಲ್ಲುವುದು ಭಯೋತ್ಪಾದನೆ ಅಲ್ಲದಿದ್ದರೆ…. ಅಸಮ್ಮತಿಯ ಸಣ್ಣ ಧ್ವನಿಯನ್ನು ಅಡಗಿಸಲು ನಿಂದನೆಗಳ ಟ್ರೋಲ್, ಬೆದರಿಕೆಗಳನ್ನು ಒಡ್ಡುವುದು ಭಯೋತ್ಪಾದನೆ ಅಲ್ಲದಿದ್ದರೆ…. ಭಯೋತ್ಪಾದನೆ ಎಂದರೆ ಏನು.. ಸುಮ್ಮನೆ ಕೇಳುತ್ತಿದ್ದೇನೆ” ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

Please follow and like us:
error

Related posts