ದೇಶಾದ್ಯಂತ ಮಾ.25ರ ತನಕ ಎಲ್ಲ ರೈಲು ಸೇವೆ ಬಂದ್

ಹೊಸದಿಲ್ಲಿ : ಮಾರ್ಚ್ 25ರ ತನಕ ಎಲ್ಲ ಪ್ರಯಾಣಿಕ ರೈಲುಗಳು ಬಂದ್ ಆಗಲಿವೆ. ಮಾರ್ಚ್ 25ರಂದು ಮತ್ತೊಮ್ಮೆ ಸಭೆ ಸೇರಲಿರುವ ರೈಲ್ವೆ ಮಂಡಳಿಯು ರೈಲು ಬಂದ್ ಮುಂದುವರಿಸಬೇಕೇ, ಬೇಡವೇ ಎಂದು ನಿರ್ಧರಿಸಲಿದೆ ಎಂದು ರೈಲ್ವೇಸ್ ಸಚಿವಾಲಯದ ಮೂಲಗಳು ತಿಳಿಸಿವೆ.

ಈವರೆಗೆ 400 ಮೇಲ್/ಎಕ್ಸ್‌ಪ್ರೆಸ್ ರೈಲುಗಳು ತನ್ನ ಪ್ರಯಾಣ ಮುಂದುವರಿಸಿದ್ದು, ಈ ರೈಲುಗಳು ಗಮ್ಯಸ್ಥಳ ತಲುಪಿದ ಬಳಿಕ ಬೇರೆ ಯಾವುದೇ ರೈಲುಗಳು ಯಾವುದೇ ರೈಲ್ವೆ ನಿಲ್ದಾಣದಿಂದ ಹೊರಡುವುದಿಲ್ಲ. ಹೆಚ್ಚು ಪ್ರಯಾಣಿಕರು ಒಂದೇ ಕಡೆ ನಿಲ್ಲಲು ಅವಕಾಶ ಇಲ್ಲದ ಕಾರಣ ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು ಖಾಲಿಯಾಗಿವೆ.

Please follow and like us:
error