ದೇಶದ್ರೋಹಿಗಳ ಮಕ್ಕಳು,ಮೊಮ್ಮಕ್ಕಳು ಟಿಪ್ಪು ಜಯಂತಿ ವಿರೋಧಿಸುತ್ತಾರೆ- ಎಂ.ನಂಜುಂಡಸ್ವಾಮಿ

ಟಿಪ್ಪು ಸುಲ್ತಾನ್ ನೆನೆಯದಿದ್ದರೆ, ನಮ್ಮ ತಾಯ್ನಾಡನ್ನು ಮರೆತಂತೆ. ಕನ್ನಡ ನಾಡಿನ ಜನರಿಗಾಗಿ, ಕನ್ನಡ ಭಾಷೆಗಾಗಿ ಹೋರಾಡಿದ ವ್ಯಕ್ತಿ. ಕರ್ನಾಟಕದ ಎಲ್ಲಾ ಜಾತಿ ಧರ್ಮಗಳನ್ನು ಸಮಾನತೆಯಿಂದ ಕಂಡ ಮಹಾನ್ ವ್ಯಕ್ತಿ . ಅವರ ಮುತ್ತಾತರ ಕಾಲದಿಂದಲೂ ಟಿಪ್ಪುವಿನ ಕುಟುಂಬ ಕರ್ನಾಟಕದಲ್ಲಿ ಬದುಕಿದೆ. ಅವರು ಕನ್ನಡಿಗರಲ್ಲ ಅಂತ ಹೇಳೋದು ಎಷ್ಟು ಸರಿ. ಇಂತಹ ಸಾಹಸಿ ಟಿಪ್ಪುವಿನ ಜಯಂತಿ ಆಚರಣೆ ಮಾಡಬಾರದು ಎನ್ನುವುದು ಸರಿಯಲ್ಲ. ಗೋಮಾತೆ ರಕ್ಷಕ ಟಿಪ್ಪು ಸುಲ್ತಾನ್. ಎಲ್ಲಾ ಧರ್ಮದವರು ಆತನ ಆಸ್ಥಾನದಲ್ಲಿ ಇದ್ದರು. ಮೈಸೂರಿನಲ್ಲಿರುವ ಜಮೀನುಗಳು ಕೆಲವೇ ಕೆಲವರ ಕೈಯಲ್ಲಿದ್ದವು.ಅವರನ್ನು ಬಗ್ಗು ಬಡಿದು ರೈತರಿಗೆ ನೀಡಿದ ವ್ಯಕ್ತಿ.  ಅಂದು ಪಾಳೆಗಾರಿಕೆ ಮಾಡಿದ್ದ ಇಂದಿನ ಜನಾಂಗಕ್ಕೆ ಇದು ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಟಿಪ್ಪು ಸುಲ್ತಾನ್ ಹೆಸರು ಎಲ್ಲಿಯವರೆಗೂ ನಾಲಿಗೆ ಮೇಲೆ ಇರುತ್ತೋ, ಅಲ್ಲಿಯವರೆಗೆ ಅಂದು ಟಿಪ್ಪುವಿಗೆ ಹೆದರುತ್ತಿದ್ದವರ ಸಂತತಿ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹೆದುರುತ್ತಲೇ ಇರುತ್ತಾರೆ. ಏಕೆಂದರೆ ಟಿಪ್ಪುವಿನ ಹೆಸರು ತೆಗೆದುಕೊಳ್ಳುವ ವ್ಯಕ್ತಿ ಟಿಪ್ಪುವಿನಂತೆ ವೀರ ಧೀರ ಯೋಧನಾದರೆ ತಮಗೆ ಉಳಿಗಾಲವಿಲ್ಲ ಎಂದು ಅಂತ ಆತನ ಹೆಸರು ಹಾಳು ಮಾಡಲು ನೋಡುತ್ತಿದ್ದಾರೆ. ಬ್ರಿಟಿಷ್‌ರ ಮುಂದೆ ಶರಣಾಗತಿಯಾಗಲು ಬಯಸಿದವರು ದೊಡ್ಡವರು ಅನಿಸಿಕೊಳ್ಳುತ್ತಿದ್ದಾರೆ. ತನ್ನ ಸುತ್ತಮುತ್ತ ಇರುವ ದೇವಾಲಯಗಳನ್ನು ಉಳಿಸಿಕೊಂಡ ಏಕೈಕ ಮಹಾವೀರ ಟಿಪ್ಪು. ಇಂಗ್ಲೆಂಡ್ ನಲ್ಲಿ ಮೇರಿ ಮ್ಯೂಸಿಯಂ ಅಲ್ಲಿ ಟಿಪ್ಪುವಿನ ಚರಿತ್ರೆಯ ಬಗ್ಗೆ ಬರೆದಿರುವ ಪುಸ್ತಕಗಳು, ವಸ್ತುಗಳಿವೆ. ಟಿಪ್ಪು ಸುಲ್ತಾನ್‌ನ ಕನ್ನಡ ನಾಡೆ ನಿಜವಾದ ಕನ್ನಡ ನಾಡು  ಅದು ಅಷ್ಟೊಂದು ಹರಡಿಕೊಂಡಿತ್ತು. ಇಂದಿರುವ ನಾಡು ಕನ್ನಡ ನಾಡು ಅಲ್ಲ. ಇತಿಹಾಸ ಎನ್ನುವುದು ಇತಿಹಾಸ. ಅದು ಯಾರದ್ದೇ ಆಗಲಿ. ಅದರಿಂದ ಒಳ್ಳೆಯದನ್ನು ತೆಗೆದುಕೊಂಡು ಕಲಿಬೇಕು. ಕೆಟ್ಟದನ್ನ ತೆಗೆದುಕೊಂಡು ಯುದ್ಧ ಮಾಡುವುದು ಸರಿಯಲ್ಲ.

*

Please follow and like us:
error