ದೇಶದಲ್ಲಿ ಸೋಮವಾರ ಕನಿಷ್ಠ ಮಟ್ಟಕ್ಕೆ ಇಳಿದ ಹೊಸ ಕೊರೋನ ಪ್ರಕರಣ

ಕೋವಿಡ್19ಇಂಡಿಯಾ.ಓಆರ್‌ಜಿ ಅಂಕಿಅಂಶಗಳ ಪ್ರಕಾರ ಅಕ್ಟೋಬರ್ 25ರಂದು 9,39,309 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ವಾರದ ಇತರ ದಿನಗಳಿಗೆ ಹೋಲಿಸಿದರೆ ಇದು ಕಡಿಮೆ. ಹಿಂದಿನ ಎರಡು ದಿನಗಳಲ್ಲಿ ತಲಾ 14 ಲಕ್ಷ ಪರೀಕ್ಷೆ ನಡೆದಿತ್ತು. ಉಳಿದ ದಿನಗಳಲ್ಲಿ ಪ್ರತಿದಿನ 10 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ನಡೆದಿತ್ತು.

KannadaNet NEWS  ದೇಶದಲ್ಲಿ ಸೋಮವಾರ 36,604 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಇದು 101 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ. ಜುಲೈ 17ರಂದು 35,065 ಪ್ರಕರಣಗಳು ದಾಖಲಾಗಿದ್ದವು. ಹಲವು ರಾಜ್ಯಗಳಲ್ಲಿ ಕನಿಷ್ಠ ಪ್ರಕರಣಗಳು ಬೆಳಕಿಗೆ ಬಂದಿರುವುದು ಈ ಇಳಿಕೆಗೆ ಕಾರಣ.

ದೇಶದಲ್ಲಿ ಸೆಪ್ಟಂಬರ್ 17ರಂದು ಗರಿಷ್ಠಮಟ್ಟ ತಲುಪಿದ್ದ ಮಾರಕ ಸಾಂಕ್ರಾಮಿಕ ರೋಗದ ಪ್ರಮಾಣ ಇಳಿಮುಖವಾಗುತ್ತಿರುವುದರ ಸ್ಪಷ್ಟ ಸೂಚನೆ ಇದಾಗಿದೆ.
ಸಾಮಾನ್ಯವಾಗಿ ರವಿವಾರ ಪರೀಕ್ಷೆ ನಡೆಸುವ ಸಂಖ್ಯೆ ಕಡಿಮೆಯಾಗಿದ್ದರಿಂದ ಸೋಮವಾರ ಕಡಿಮೆ ಪ್ರಕರಣಗಳು ವರದಿಯಾಗುತ್ತವೆ. ಕೋವಿಡ್19ಇಂಡಿಯಾ.ಓಆರ್‌ಜಿ ಅಂಕಿಅಂಶಗಳ ಪ್ರಕಾರ ಅಕ್ಟೋಬರ್ 25ರಂದು 9,39,309 ಮಾದರಿಗಳ ಪರೀಕ್ಷೆ ನಡೆಸಲಾಗಿತ್ತು. ವಾರದ ಇತರ ದಿನಗಳಿಗೆ ಹೋಲಿಸಿದರೆ ಇದು ಕಡಿಮೆ. ಹಿಂದಿನ ಎರಡು ದಿನಗಳಲ್ಲಿ ತಲಾ 14 ಲಕ್ಷ ಪರೀಕ್ಷೆ ನಡೆದಿತ್ತು. ಉಳಿದ ದಿನಗಳಲ್ಲಿ ಪ್ರತಿದಿನ 10 ಲಕ್ಷಕ್ಕಿಂತ ಹೆಚ್ಚು ಪರೀಕ್ಷೆ ನಡೆದಿತ್ತು.
ಈ ಹಿಂದಿನ ರವಿವಾರಗಳಲ್ಲೂ ಕಡಿಮೆ ಸಂಖ್ಯೆಯ ಪರೀಕ್ಷೆ ನಡೆದರೂ, ಸೋಮವಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿತ್ತು. ಉದಾಹರಣೆಗೆ ಹಿಂದಿನ ನಾಲ್ಕು ವಾರಗಳ ಪೈಕಿ ಎರಡು ಬಾರಿ ರವಿವಾರ ಒಂಭತ್ತು ಲಕ್ಷಕ್ಕಿಂತ ಕಡಿಮೆ ಪರೀಕ್ಷೆ ನಡೆದರೂ, ಸೋಮವಾರ ಪ್ರಕರಣಗಳ ಸಂಖ್ಯೆ ಅಧಿಕ ಇತ್ತು.

ಬಹುತೇಕ ರಾಜ್ಯವಾರು ಪ್ರಕರಣಗಳ ಪಟ್ಟಿಯಲ್ಲಿ ಸದಾ ಅಗ್ರಸ್ಥಾನ ಕಾಪಾಡಿಕೊಂಡು ಬಂದಿದ್ದ ಮಹಾರಾಷ್ಟ್ರದಲ್ಲಿ ಸೋಮವಾರ 3,645 ಪ್ರಕರಣಗಳು ಪತ್ತೆಯಾಗಿದ್ದು, ಕೇರಳ (4,287) ಮತ್ತು ಬಂಗಾಳ (4,121)ದಲ್ಲಿ ಇದಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ.
ಮಹಾರಾಷ್ಟ್ರದ 3645 ಪ್ರಕರಣಗಳು 125 ದಿನಗಳಲ್ಲೇ ಕನಿಷ್ಠವಾಗಿದ್ದು, 84 ಮಂದಿ ಸೋಮವಾರ ಸಾವನ್ನಪ್ಪಿದ್ದಾರೆ. ಇದು 146 ದಿನಗಳಲ್ಲೇ ಕನಿಷ್ಠ ಸಂಖ್ಯೆಯಾಗಿದೆ.

Please follow and like us:
error