ದೇಶದಲ್ಲಿ ಪ್ರತಿಯೊಬ್ಬ ನಾಗರಿಕನು ಕೋವಿಡ್ ವಿರುದ್ಧ ಸೈನಿಕನಂತೆ ಹೋರಾಡುತ್ತಿದ್ದಾರೆ : ಪ್ರಧಾನಿ ಮೋದಿ

ಮನ್ ಕಿ ಬಾತ್ ನಲ್ಲಿ ಶ್ಲಾಘನೆ

ಹೊಸದಿಲ್ಲಿ : ” ಭಾರತದಂತಹ ವಿಶಾಲ ದೇಶವು ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ, ಬಡತನದ ವಿರುದ್ಧ ನಿರ್ಣಾಯಕ ಯುದ್ಧವನ್ನು ನಡೆಸುತ್ತಿದೆ, ನಾವು ಅದೃಷ್ಟವಂತರು. ಇದೀಗ  ದೇಶದಲ್ಲಿ ಪ್ರತಿಯೊಬ್ಬ ನಾಗರಿಕನು  ಮಹಾಮಾರಿ ಕೋವಿಡ್-19 ವಿರುದ್ಧ ಸೈನಿಕನಂತೆ  ಹೋರಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಕೊರೋನ ವೈರಸ್ ಸೋಂಕು  ವಿರುದ್ಧ ಜನರು  ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಶ್ಲಾಘಿಸಿದ್ದಾರೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮೊದಲ ಹಂತವನ್ನು ಘೋಷಿಸಿದ ನಾಲ್ಕು ದಿನಗಳ ನಂತರ ಮಾರ್ಚ್ 29 ರಂದು ತಮ್ಮ ಕೊನೆಯ ‘ಮನ್ ಕಿ ಬಾತ್’ ಭಾಷಣದಲ್ಲಿ, ಲಾಕ್ ಡೌನ್ ವಿಧಿಸಿದ್ದಕ್ಕಾಗಿ ಪ್ರಧಾನಿ ರಾಷ್ಟ್ರದ ಜನರಲ್ಲಿ  ಕ್ಷಮೆಯಾಚಿಸಿದ್ದರು. ಆದರೆ ಈ ನಿರ್ಧಾರವನ್ನು ಸಮರ್ಥಿಸಿಕೊಂಡರು, ‘ಈ ಯುದ್ಧವನ್ನು ಗೆಲ್ಲಬೇಕಾಗಿದೆ ಎಂದು ಹೇಳಿದರು.

“ನಿಮ್ಮ ಜೀವನದಲ್ಲಿ, ವಿಶೇಷವಾಗಿ ಬಡ ಜನರಿಗೆ ತೊಂದರೆಗಳನ್ನುಂಟು ಮಾಡಿದ ಈ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಿಮ್ಮಲ್ಲಿ ಕೆಲವರು ನನ್ನ ಮೇಲೆ ಕೋಪಗೊಳ್ಳುತ್ತಾರೆಂದು ನನಗೆ ತಿಳಿದಿದೆ. ಆದರೆ ಈ ಯುದ್ಧವನ್ನು ಗೆಲ್ಲಲು ಈ ಕಠಿಣ ಕ್ರಮಗಳು ಅನಿವಾರ್ಯ ”ಎಂದು ಅವರು ಹೇಳಿದ್ದಾರೆ.

ರವಿವಾರ ಬೆಳಗ್ಗೆ ಬಿಡುಗಡೆಯಾದ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಭಾರತದ ಕೊರೋನ ವೈರಸ್  ಸೋಂಕಿತರ ಸಂಖ್ಯೆ  26,496 ಆಗಿದ್ದು, ಇದರಲ್ಲಿ 19,868 ಸಕ್ರಿಯ ಪ್ರಕರಣಗಳಾಗಿದೆ ಮತ್ತು ಮೃತಪಟ್ಟವರ ಸಂಖ್ಯೆ  824ಕ್ಕೆ ಏರಿದೆ.

Please follow and like us:
error