ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನಲ್ಲಿ ಇದ್ದ ಬಾಲಕ‌ ಸಾವು

ರಾಯಚೂರು : ಹೊಟ್ಟೆ ನೋವು ಎಂದು ಒದ್ದಾಡಿದ್ದ ಬಾಲಕ ಸಾವನ್ನಪ್ಪಿದ್ಧಾನೆ. ರಾಯಚೂರು‌ ಜಿಲ್ಲೆ ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನ್ ಇದ್ದ ಬಾಲಕ‌ ಸಾವನ್ನಪ್ಪಿರುವ ದುರ್ದೈವಿ.  ಮಹಾರಾಷ್ಟ್ರದಿಂದ ಬಂದಿದ್ದ ಬಾಲಕ ಹಾಗೂ ಅವನ ಸೋದರ ಅತ್ತೆಯನ್ನು ಪಟ್ಟಣದ ಡಿಗ್ರಿ ಕಾಲೇಜು ಪಕ್ಕದ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು ಮೇ 16 ರಂದು ಮಹಾರಾಷ್ಟ್ರದಿಂದ ಬಂದಿದ್ದ ಬಾಲಕನ ವರದಿ ನೆಗೆಟಿವ್ ಬಂದಿತ್ತು ಇಂದಿಗೆ ಕ್ವಾರಂಟೈನ್ ನಲ್ಲಿದ್ದು 20 ದಿನಗಳಾದ್ರೂ ಇವರನ್ನು ಮನೆಗೆ ಕಳುಹಿಸಿದ್ದಿಲ್ಲ ಇದೇ ಸೋಮವಾರ ಬಾಲಕನ ಮಾದರಿ ಮತ್ತೆ ಪರೀಕ್ಷೆಗೆ ಕಳುಹಿಸಲಾಗಿದೆ. ಮೂರು ದಿನದ ಹಿಂದೆ ಮೊಳಕಾಲು ನೋವು ಎಂದು ವೈದ್ಯರು ನೀಡಿದ ಮಾತ್ರೆಗಳನ್ನು ನುಂಗಿದ್ದ ಬಾಲಕ ನಿನ್ನೆ ರಾತ್ರಿ 11 ಗಂಟೆಯಿಂದ ಹೊಟ್ಟೆ ನೋವು ತಾಳಲಾಗದೆ ಬಾಲಕ ಯಾತನೆ ಅನುಭವಿಸಿದ್ದ ಬೆಳಿಗ್ಗೆ 4 ಗಂಟೆಗೆ ಬಂದ ಆಂಬುಲೆನ್ಸ್ ನಲ್ಲಿ ರಾಯಚೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಬಾಲಕ ಸಾವು ಬಾಲಕನಿಗೆ ಹೊಟ್ಟೆ ನೋವು ಕಾಣಿಸಿಕೊಂಡಾಗಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಹಿತಿ ನೀಡಿದ್ರೂ ಸ್ಪಂದಿಸಿಲ್ಲ ಎಂದು ಮೃತ ಬಾಲಕನ ಅತ್ತೆ ಆರೋಪ ಮಾಡಿದ್ದಾರೆ.

Please follow and like us:
error