ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ,ಕೆಂಪುಕೋಟೆ ಹತ್ತಿದವರು ಭಯೋತ್ಪಾದಕರು: ಬಿ.ಸಿ‌.ಪಾಟೀಲ

 

-ಕಾಂಗ್ರೆಸ್‌ನವರು ಖಲಿಸ್ತಾನಿ, ಪಾಕಿಸ್ತಾನಿ, ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ

-ಬಾಂಬೆ ಟೀಮೂ ಇಲ್ಲ, ಬೆಂಗಳೂರು ಟೀಮೂ ಇಲ್ಲ, ನಮ್ದು ಇರೊದೊಂದೇ ಬಿಜೆಪಿ ಟೀಮ್.

ಕೊಪ್ಪಳ : ದೆಹಲಿಯಲ್ಲಿ ನಡೆಯುತ್ತಿರುವುದು ರೈತರ ಹೋರಾಟವಲ್ಲ, ಭಯೋತ್ಪಾದಕಕರ ರೀತಿಯಲ್ಲಿ ಭಯೋತ್ಪಾದನೆ ಮಾಡಿದಂತಹ ಭಯಾನಕ ಕೃತ್ಯ ಎಂದು ಸಚಿವ ಬಿ.ಸಿ ಪಾಟೀಲ್  ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಅವರು ಕೊಪ್ಪಳದಲ್ಲಿ ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿ, ರೈತರು ಈ ರೀತಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದು, ಇತಿಹಾಸದಲ್ಲಿಯೇ ಇಲ್ಲ.ಇದರ ಹಿಂದೆ ಭಯೋತ್ಪಾದಕರು, ಖಲಿಸ್ತಾನ್, ಕಾಂಗ್ರೇಸನವರು ಇದ್ದಾರೆ. ಮೋದಿಯವರ ಜನಪ್ರಿಯತೆ ಹಾಗೂ ಕೇಂದ್ರ ಸರ್ಕಾರವನ್ನು ಕೆಡವಲು ಆಗುವುದಿಲ್ಲ ಎಂದು ತಿಳಿದು, ಭಯೋತ್ಪಾದಕರಿಗೆ ರೈತರ ಪಟ್ಟ ಹಾಕಿ ದೆಹಲಿಯಲ್ಲಿ ಕೃತ್ಯ ನಡೆಸಲಾಗಿದೆ ಎಂದರು.

ಇನ್ನು ನನ್ನ ಈ ಮಾತುಗಳಿಗೂ ಈಗಲೂ ಬದ್ಧನಾಗಿದ್ದು, ಸಂವಿಧಾನದಲ್ಲಿ ಹಾಗೂ ದೇಶದ ಹಿರಿಮೆಯಲ್ಲಿ ಕೆಂಪು ಕೋಟೆಗೆ ತನ್ನದೇ ಆದ ಗೌರವ ಇದೆ. ಕೆಂಪು ಕೋಟೆಯ ಮೇಲೆ ಭಾರತದ ಧ್ವಜ ಬಿಟ್ಟು, ಬೇರೆ ಧ್ವಜಗಳಿಗೂ ಕನಸಿನಲ್ಲೂ ಅವಕಾಶವಿಲ್ಲ. ಇಂತಹ ಸಂಧರ್ಭದಲ್ಲಿ ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಿಸ್ತಾರೆ ಅಂದ್ರೆ ಅವರನ್ನು ಭಯೋತ್ಪಾದಕರೆನ್ನದೇ ಮತ್ತೇನೆಂದು ಕರೆಯಬೇಕು. ಇವರಿಲ್ಲೇರಿಗೂ ಪಾಕಿಸ್ತಾನ ಹಾಗೂ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಇದೆ ಎಂದು ವಾಗ್ದಾಳಿ ನಡೆಸಿದರು.

ಹೆಚ್.ಕೆ ಪಾಟೀಲ್ರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ..?

ದೆಹಲಿಯಲ್ಲಿ ನಡೆಯುತ್ತಿರುವ ಭಯೋತ್ಪಾದಕರ ಕೃತ್ಯಕ್ಕೆ ರೈತರ ಬಣ್ಣ ಕಟ್ಟುತ್ತಿರುವ ಹೆಚ್.ಕೆ ಪಾಟೀಲರು ಯಾವತ್ತಾದ್ರೂ ಬೇಸಾಯ ಮಾಡಿದ್ದಾರಾ, ಅಥವಾ ಹೊಲದಲ್ಲಿ ಒಂದು ಹನಿ ಸುರಿಸಿ ಬಿತ್ತನೆ ಮಾಡಿದ್ದಾರಾ ಮೊದಲು ಹೇಳಲಿ.‌ಇಂತಹ ಕೃತ್ಯಕ್ಕೆ ಬೆಂಬಲಿಸುವ ಅವರು, ಮತ್ತು ಕಾಂಗ್ರೆಸ್ ಪಕ್ಷ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ನಿಜವಾದ ರೈತರು ಯಾರೂ ಸಹ ಪ್ರತಿಭಟನೆ ಮಾಡ್ತಾ ಇಲ್ಲ. ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾ ಇರೋ ಎಲ್ಲಾರು ಭಯೋತ್ಪಾದಕರು ಎಂದರು.

ಆನಂದ ಸಿಂಗ್‌ಗೆ ಅಸಮಾಧಾನ ನಿಜ

ಕೊಪ್ಪಳ: ಅರಣ್ಯ ಖಾತೆಯಲ್ಲಿ ಕೆಲಸ ಮಾಡಿದ್ದ ಆನಂದ ಸಿಂಗ್ ಅವರಿಗೆ ಖಾತೆ ಬದಲಾವಣೆಯಿಂದ ಒಂದಿಷ್ಟು ಅಸಮಾಧಾನವಾಗಿರಬಹುದು. ನಾಳೆ ಸಿಎಂ ಭೇಟಿ ಮಾಡುವುದಾಗಿ ಆನಂದ ಸಿಂಗ್ ನನಗೆ ಹೇಳಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಅವರು ಕೊಪ್ಪಳದ ಜಿಲ್ಲಾ‌ ಕ್ರೀಡಾಂಗಣದಲ್ಲಿ 72 ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು.

ನಮ್ಮಲ್ಲಿ ಯಾವುದೇ ಟೀಂ ಇಲ್ಲ, ನಾವೆಲ್ಲ ಬಿಜೆಪಿ ಟೀಂ ಅಷ್ಟೆ ಅಂದ್ರು.ಸಚಿವರ ಖಾತೆ ಬದಲಾವಣೆ ಮಾಡೋದು ಸಿಎಂ ಅವರ ವಿವೇಚನೆಗೆ ಬಿಟ್ಟ ವಿಚಾರ.
ಸಿಎಂ ಅವರು ಹಿರಿಯ ಮುತ್ಸದ್ಧಿ, ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುತ್ತಾರೆ ಎಂದರು.
ಇನ್ನು ಎಚ್‌. ವಿಶ್ವನಾಥ್​ ಅವರನ್ನು ವಿಧಾನ ಪರಿಷತ್​ಗೆ ಸರ್ಕಾರ ನಾಮನಿರ್ದೇಶನ ಮಾಡಿರುವುದರಿಂದ ಅವರಿಗೆ ಸಚಿವ ಸ್ಥಾನ ನೀಡಲು ಬರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಅವರು ಸಚಿವರಾಗಿಲ್ಲ ಎಂದರು. ಇನ್ನು ನನ್ನ ಲೆಟರ್ ಪ್ಯಾಡ್ ದುರ್ಬಳಕೆ ವಿಚಾರ ಹಳೆಯದು. ಈಗ ನನಗೆ ಯಾವ ಪಿಎ ಅಗತ್ಯವಿಲ್ಲ. ಪಿಎ ಇಟ್ಕೊಂಡು ಸಚಿವಗಿರಿ ಮಾಡುವಂತಹದ್ದು ಏನೂ ಇಲ್ಲ ಎಂದು ಸಚಿವ ಬಿ ಸಿ ಪಾಟೀಲ್ ಇದೇ ಸಂದರ್ಭದಲ್ಲಿ ಹೇಳಿದ್ರು.
ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ, ಮರಳು ದಂಧೆ ನಡೆಸುತ್ತಾರೋ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೇನೆ. ಅದು ಯಾವುದೇ ಅಕ್ರಮ ಚಟುವಟಿಕೆಯಾಗಿರಬಹುದು. ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಆದೇಶ ಮಾಡಿದ್ದೇನೆ ಎಂದು ಖಡಕ್​ ಎಚ್ಚರಿಕೆ ರವಾನಿಸಿದರು.

Please follow and like us:
error