ದುರ್ಗಾ ದೇವತೆ ಬಗ್ಗೆ ಅವಮಾನಕರ ಪದ ಬಳಕೆ

ವಿವಾದಕ್ಕೆ ಕಾರಣವಾದ ದಿಲ್ಲಿ ವಿವಿ ಸಹಾಯಕ ಅಧ್ಯಾಪಕನ ಫೇಸ್ಬುಕ್ ಪೋಸ್ಟ್

ಹೊಸದಿಲ್ಲಿ, ಸೆ. 24: ದಿಲ್ಲಿ ವಿಶ್ವವಿದ್ಯಾಲಯದ ಸಹಾಯಕ ಅಧ್ಯಾಪಕ ತನ್ನ ಫೇಸ್‌ಬುಕ್ ಖಾತೆಯಲ್ಲಿ ದುರ್ಗಾ ದೇವತೆ ಬಗ್ಗೆ ಅವಮಾನಕರ ಹಾಗೂ ಅಶ್ಲೀಲ ಪದ ಬಳಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

ಪ್ರೊಫೆಸರ್ ಕೇದಾರ್ ಕುಮಾರ್ ತನ್ನ ಫೇಸ್‌ಬುಕ್ ಖಾತೆಯಲ್ಲಿ, ಭಾರತೀಯ ಪುರಾಣದಲ್ಲಿ ದುರ್ಗಾ ಅತೀ ಹೆಚ್ಚು ಮಾದಕ ಸಾಧಕಿ……ಎಂದು ಹೇಳಿರುವುದಾಗಿ ವರದಿಯಾಗಿದೆ.

ಸೆಪ್ಟಂಬರ್ 22ರಂದು ಸುಮಾರು 6.43ರ ಹೊತ್ತಿಗೆ ಕೇದಾರ್ ಈ ವಿವಾದಾತ್ಮಕ ಪೋಸ್ಟ್ ಅನ್ನು ಅಪ್‌ಲೋಡ್ ಮಾಡಿದ್ದು, ಅನಂತರ ಡಿಲೀಟ್ ಮಾಡಿದ್ದ. ಈ ಬಗ್ಗೆ ಬಿಜೆಪಿ ಅಂಗಸಂಸ್ಥೆಯಾದ ಎನ್‌ಡಿಟಿಎಫ್ ಲೋಧಿ ಕಾಲನಿ ಪೊಲೀಸ್ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಿಸಿದೆ. ಈ ಪೋಸ್ಟ್ ಅನ್ನು ತೀವ್ರವಾಗಿ ಟೀಕಿಸಿರುವ ಎಬಿವಿಪಿ ಹಾಗೂ ಎನ್‌ಎಸ್‌ಯುಐ ದಿಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಪ್ರೊಫೆಸರ್ ಕೇದಾರ್ ಕುಮಾರ್ ಮಂಡಲ್ ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.