ದಿಗ್ಗಜ ಸಂಗೀತಗಾರರನ್ನು ಕಳೆದುಕೊಂಡು ಕೊಪ್ಪಳ ಸಂಗೀತ ಲೋಕ ಮಂಕಾಗಿದೆ -DYSP ರುದ್ರೇಶ ಉಜ್ಜನಕೊಪ್ಪ

ಭಾಗ್ಯನಗರದಲ್ಲಿ ಸಂಗೀತ ನೃತ್ಯೋತ್ಸವ

Koppal    ಉಜ್ಜನಕೊಪ್ಪ ಪಂ||ದಿ|| ಗೋವಿಂದರಾಜ ಬೊಮ್ಮಲಾಪುರ ಹಾಗೂ ಪಂ||ದಿ|| ಅಂಬಣ್ಣ ಕೊಪ್ಪರದರಂತಹ ದಿಗ್ಗಜ ಸಂಗೀತಗಾರರನ್ನು ಕಳೆದುಕೊಂಡು ಕೊಪ್ಪಳ ಸಂಗೀತ ಮಂಕಾಗಿದೆ   ಎಂದು ಡಿ.ವೈ.ಎಸ್.ಪಿ ರುದ್ರೇಶ ಉಜ್ಜನಿಕೊಪ್ಪ ಹೇಳಿದರು.

ಸ್ವರ ಸೌರಭ ಸಂಗೀತ ಮತ್ತು ಲಲಿತಾಕಲಾ ಸಂಸ್ಥೆ(ರಿ) ಭಾಗ್ಯನಗರ ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಗುರುವಾರ ಸಂಜೆ ಭಾಗ್ಯನಗರದ ಶ್ರೀಮತಿ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ಪಂ||ದಿ|| ಗೋವಿಂದರಾಜ ಬೊಮ್ಮಲಾಪುರ ಹಾಗೂ ಪಂ||ದಿ|| ಅಂಬಣ್ಣ ಕೊಪ್ಪರದ ಸ್ವರ ಶ್ರದ್ಧಾಂಜಲಿ ಪ್ರಯುಕ್ತ ‘ಸಂಗೀತ ನೃತ್ಯೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾತನಾಡಿದ ಡಿ.ವೈ.ಎಸ್.ಪಿ ರುದ್ರೇಶ  ಉಜ್ಜನಿಕೊಪ್ಪ ಈರ್ವರ ಕೊಡುಗೆ ಸಂಗೀತ ಕ್ಷೇತ್ರದಲ್ಲಿ ಗಣನೀಯ ಅಂತಹ ಕಲಾವಿದರು ಮತ್ತೆ ಮತ್ತೆ ಹುಟ್ಟಿ ಬರಬೇಕು. ಅವರಿಗೆ ಸ್ವರ ಶ್ರದ್ಧಾಂಜಲಿ ಅರ್ಪಿಸುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವೀರಪ್ಪ ಶ್ಯಾವಿ, ಮುಖ್ಯ ಅತಿಥಿಗಳಾಗಿ ದಾನಪ್ಪ ಕವಲೂರು, ಶಂಕರ ಬಿನ್ನಾಳ, ನಾರಾಯಣಸಾ ಮೇಘರಾಜ, ಕನಕರಾಜ ರೂಡಿಗಿ, ಹೇಮಾವತಿ ಅಂಬಣ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತ ಇಲಾಖೆಯ ನಿವೃತ್ತ ಬೆರಳಚ್ಚುದಾರರಾದ ರಾಜೇಂದ್ರಬಾಬು ಜ್ಞಾನಮೋಠೆಯವರು ಕಲಾವಿದರಿಗೆ ಮಾಡಿದ ಸೇವೆಯನ್ನು ಗುರುತಿಸಿ ಹಾಗೂ ಛಾಯಾಗ್ರಾಹಕರಾಗಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯುತ್ತಿರುವ ಯುವ ಛಾಯಾಗ್ರಾಹಕ ವಿಜಯ ಬಳ್ಳಾರಿಯವರನ್ನು ಸನ್ಮಾನಿಸಲಾಯಿತು.
ಸ್ವರ ಶ್ರದ್ಧಾಂಜಲಿಯ ಕಾರ್ಯಕ್ರಮದಲ್ಲಿ ಮೂಡಿ ಬಂದ ರುದ್ರೇಶ ಉಜ್ಜನಕೊಪ್ಪರವರ ತತ್ವಪದಗಳು, ಗಣೇಶ ರಾಯಬಾಗಿಯವರ ವಚನ ಸಂಗೀತ, ರಾಮಚಂದ್ರಪ್ಪ ಉಪ್ಪಾರವರ ಸುಗಮ ಸಂಗೀತ, ಪಂಚಾಕ್ಷರಕುಮಾರ ಬೊಮ್ಮಲಾಪುರರ ದಾಸವಾಣಿ, ವಿಜಯಲಕ್ಷ್ಮೀ ನಾಗರಾಜ ಭಾವಗೀತೆಗಳು, ರಾಘವೇಂದ್ರ ಗಂಗಾವತಿಯವರ ತಬಲಾ ಸೋಲೋ, ಆರತಿ ಮೇಟಿ, ಕೀರ್ತಿ ಮೇಟಿ ಹಾಗೂ ರವಿ ಗುತ್ತೂರರಿಂದ ಸಮೂಹ ಗೀತೆಗಳು ಹಾಗೂ ಅಪರ್ಣಾ ಹೆಗಡೆಯಿಂದ ಮೂಡಿ ಬಂದ ಭರತನಾಟ್ಯ ಸೇರಿದ್ದ ಜನರ ಮನಸೊರೆಗೊಂಡವು.
ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಬಾನ್ಸುರಿಯಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ, ಸುರೇಶ ಹಡಪದ, ರಿಧಂ ಪ್ಯಾಡ್‌ನಲ್ಲಿ ವೆಂಕಟೇಶ ಹೊಸಮನಿ ಹಾಗೂ ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಇದ್ದರು. ಕಾರ್ಯಕ್ರಮವನ್ನು ಮಾರುತಿ ದೊಡ್ಡಮನಿಯವರು ನಿರೂಪಿಸಿ ವಂದಿಸಿದರು.

Please follow and like us:
error