ದಾರ್ಶನಿಕರ ಬದುಕು ದಾರಿ ದೀಪವಾಗಲಿ: ಪ್ರೊ. ಬಸವರಾಜ ಎಸ್. ಬೆಣ್ಣಿ


ಕೊಪ್ಪಳ,   ಸ್ವಸ್ಥ, ಸಧೃಢ ಸಮಾಜ ನಿರ್ಮಾಣ ಮಾಡುವಲ್ಲಿ ದಾರ್ಶನಿಕರ ಬದುಕು ದಾರಿದೀಪವಾಗಲಿ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಕೊಪ್ಪಳ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಬಸವರಾಜ ಎಸ್. ಬೆಣ್ಣಿ ಅಭಿಪ್ರಾಯಪಟ್ಟರು.
ನಗರದ ಸ್ನಾತಕೋತ್ತರ ಕೇಂದ್ರದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬುದ್ಧ, ಬಸವ, ಕನಕದಾಸ, ಪುರಂದರದಾಸ, ಼಼ಶಿಶುನಾಳ ಶರೀಫ್‌ರಂತಹ ಅತ್ಯುನ್ನತ ದಾರ್ಶನಿಕರನ್ನು ಜಗತ್ತಿಗೆ ಪರಿಚಯಿಸಿದ ಕಿರ್ತಿ ಹಾಗೂ ಹೆಮ್ಮೆ ಭಾರತದ್ದು. ಸಮಾಜ ಸುಧಾರಣೆ, ಪುನರ್ ನಿರ್ಮಾಣ ಮಾಡುವಲ್ಲಿ ದಾರ್ಶನಿಕರ ಕೊಡುಗೆ ಅಪಾರ. ಕನಕದಾಸರು ತಮ್ಮ ಕಿರ್ತನೆಗಳ ಮುಖೇನ ಪ್ರತಿ ಹಂತದಲ್ಲೂ ಸಮಾಜ ಮತ್ತು ಸಮುದಾಯಗಳ ಲೋಪಗಳನ್ನು ತಿದ್ದಲು ಶ್ರಮಿಸಿದರು, ಅವರ ನಿಸ್ವಾರ್ಥ ಬದುಕು ಪ್ರೇರಣದಾಯಿಯಾಗಿದೆ. ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಗಳನ್ನು ಬಲ್ಲಿರಾ? ಬೀಸುವ ಗಾಳಿ, ಹರಿಯುವ ನೀರು, ಸುಡುವ ಬೆಂಕಿ ಯಾವ ಕುಲವೆಂದು ಹೇಳಬಲ್ಲಿರಾ ಎಂದು ಸಮಾಜವನ್ನು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಅಸ್ಥಿರ ಬದುಕಿನಲ್ಲಿ ಕುಲ, ಜಾತಿ ಪದ್ದತಿಗಳ ಜಟಿಲತೆಗಳನ್ನು ಬಿಡಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಚಾಂದ ಬಾಷಾ ಮಾತನಾಡಿ, ಜಯಂತಿ ಆಚರಣೆಗಳನ್ನು ಸಾಂಕೇತಿಕವಾಗಿ ಆಚರಿಸುವ ಬದಲು ಕನಕದಾಸರು ಮತ್ತು ಮುಂತಾದ ದಾರ್ಶನಿಕರ ಬದುಕನ್ನು ಅಳವಡಿಸಿಕೊಳ್ಳುವ, ಅನುಷ್ಠಾನಕ್ಕೆ ತರುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಬೋಧಕ ಸಿಬ್ಬಂದಿಯಾದ ಡಾ. ಪ್ರಕಾಶ ಯಳವಟ್ಟಿ, ಡಾ. ಸಾದು ಸೂರ್ಯಕಾಂತ, ಪಾಂಡುರAಗ ಆರ್., ಶ್ರೀಕಾಂತ್. ಕೆ ಹಾಗೂ ಬೋಧಕೇತರ ಸಿಬ್ಬಂದಿ ಹಾಜರಿದ್ದರು ಎಂದು ಪ್ರಕಟಣೆ ತಿಳಿಸಿದೆ.

Please follow and like us:
error