ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಬಾಲಿವುಡ್  ನಟ ಅಮಿತಾಬ್ ಬಚ್ಚನ್ ಆಯ್ಕೆ

ಅಮಿತಾಬ್ ಬಚ್ಚನ್ ಗೆ ‘ದಾದಾ ಸಾಹೇಬ್ ಫಾಲ್ಕೆ’ ಪುರಸ್ಕಾರ

ಹೊಸದಿಲ್ಲಿ, ಸೆ.24: ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಬಾಲಿವುಡ್  ನಟ ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದಾರೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

“2 ತಲೆಮಾರುಗಳ ಮನರಂಜಿಸಿದ ಅಮಿತಾಬ್ ಬಚ್ಚನ್ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಇಡೀ ದೇಶ ಮತ್ತು ಅಂತಾರಾಷ್ಟ್ರೀಯ ಸಮುದಾಯ ಸಂತಸಗೊಂಡಿದೆ. ನನ್ನ ಹೃದಯಪೂರ್ವಕ ಅಭಿನಂದನೆಗಳು” ಎಂದು ಜಾವಡೇಕರ್ ಟ್ವೀಟ್ ಮಾಡಿದ್ದಾರೆ.

Please follow and like us:
error

Related posts