ತೆಲಗು ನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ಸಾವು

ಹೈದ್ರಾಬಾದ್ : ತೆಲಗು ಚಿತ್ರರಂಗದ ಖ್ಯಾತ ಖಳನಟ, ಹಾಸ್ಯನಟ ಜಯಪ್ರಕಾಶ್ ರೆಡ್ಡಿ ಹೃದಯಾಘಾತದಿಂದ ಸಾವನ್ನಪ್ಪಿದ್ಧಾರೆ. ನೂರಾರು ಚಿತ್ರಗಳಲ್ಲಿ ನಟಿಸಿದ್ದ ಅವರು ಅಪಾರ ಅಭಿಮಾನಿ ಬಳವನ್ನು ಹೊಂದಿದ್ದರು.

ಜಯಪ್ರಕಾಶ್ ರೆಡ್ಡಿಯವರ ಸಾವಿಗೆ ಇಡೀ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.  ಈ ಕುರಿತು ಪ್ರಕಾಶ್ ರೈ ಟ್ವೀಟ್ ಮಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದು ಹೀಗೆ

 

ಸಹ ನಟ ಜಯಪ್ರಕಾಶ್ ರೆಡ್ಡಿ ಅವರ ಹಠಾತ್ ಸಾವು ನನಗೆ ತೀವ್ರ ಆಘಾತವನ್ನುಂಟು ಮಾಡಿತು. ನಟನೆ ಅವನ ಜೀವನ. ಅವರು ಬೆಳ್ಳಿ ಪರದೆಯಲ್ಲಿ ಮತ್ತು ರಂಗ ನಾಟಕಗಳಲ್ಲಿ ನಿರ್ವಹಿಸಿದ ಪಾತ್ರಗಳಿಗೆ ಜೀವ ತುಂಬಿದ ನಟ. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಹಾನುಭೂತಿಯನ್ನು ಅರ್ಪಿಸುತ್ತೇನೆ.

Please follow and like us:
error