fbpx

ತೆರಿಗೆ ಹಣದ ಪಾಲನ್ನು ಧೈರ್ಯದಿಂದ ಪ್ರಧಾನಿ ಬಳಿ ಕೇಳಿ, ದೈರ್ಯವಿಲ್ಲದೇ ಇದ್ದರೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ- ಸಿದ್ದರಾಮಯ್ಯ

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡಲು ಸಂಗ್ರಹ ಮಾಡಿದ್ದ ಸೆಸ್ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿದೆ ಎಂದು ಸಿಎಜಿ ನೀಡಿರುವ ವರದಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಬಗೆದಿರುವ ಜಿಎಸ್‌ಟಿ ದ್ರೋಹಕ್ಕೆ ಪುರಾವೆಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿದ್ದಾರೆ.

ಯಾವುದೇ ನಿರ್ದಿಷ್ಠ ಉದ್ದೇಶಕ್ಕೆ ಸಂಗ್ರಹಿಸಲಾಗುವ ಸೆಸ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸುವುದು ಕಾನೂನು ಉಲ್ಲಂಘನೆಯಾಗಿದೆ. ಜಿಎಸ್‌ಟಿ ಪರಿಹಾರ ಕಾಯ್ದೆಯ ಪ್ರಕಾರ ಜಿಎಸ್‌ಟಿಯಿಂದ ರಾಜ್ಯಗಳಿಗಾಗುವ ನಷ್ಟಕ್ಕೆ ಪರಿಹಾರ ನೀಡಲು ಸಂಗ್ರಹಿಸಲಾಗುವ ಸೆಸ್ ಮೊತ್ತವನ್ನು ಪ್ರತ್ಯೇಕ ಖಾತೆಯಲ್ಲಿ ಠೇವಣಿ ಮಾಡಬೇಕಾಗುತ್ತದೆ. ಇದರಲ್ಲಿ ವ್ಯಯವಾಗದೆ ಉಳಿದಿರುವ ಹಣವನ್ನು ಮುಂದಿನ ವರ್ಷಕ್ಕೆ ವರ್ಗಾಯಿಸುವ ಅವಕಾಶ ಕೂಡಾ ಇದೆ. ಆದರೆ ಮೋದಿ ಸರ್ಕಾರ ಅದನ್ನು consolidated fundಗೆ ವರ್ಗಾಯಿಸಿ ಕಾಯ್ದೆಯ ಉಲ್ಲಂಘನೆ ಮಾಡಿದೆ.

ಕರ್ನಾಟಕ ರಾಜ್ಯಕ್ಕೆ 2021ರ ಅಂತ್ಯದ ವೇಳಗೆ ನೀಡಬೇಕಾಗಿರುವ ರೂ.30,000 ಕೋಟಿ ಪರಿಹಾರವನ್ನು ನಿರಾಕರಿಸಿ, ಆರ್‌ಬಿಐ ಇಂದ ಸಾಲ ಎತ್ತಲು ಹೇಳಿರುವ ಕೇಂದ್ರ ಸರ್ಕಾರ ಕಾನೂನುಬದ್ಧವಾಗಿ ಪರಿಹಾರ ನೀಡಲಿಕ್ಕಾಗಿಯೇ ಸಂಗ್ರಹಿಸಲಾಗಿರುವ ಸೆಸ್ ದುಡ್ಡನ್ನು ಖಾಲಿಯಾಗಿರುವ ತನ್ನ ಖಜಾನೆಯನ್ನು ತುಂಬಲು ದುರುಪಯೋಗ ಮಾಡಿಕೊಂಡಿದೆ. ಜಿಎಸ್ ಟಿ ಪರಿಹಾರಕ್ಕಾಗಿ 2017-18 ಮತ್ತು 2018-19ರಲ್ಲಿ ಕ್ರಮವಾಗಿ ರೂ.56,146 ಕೋಟಿ ಮತ್ತು 54,275 ಕೋಟಿ ಸೆಸ್ ಮೊತ್ತ ವರ್ಗಾವಣೆಯಾಗಿದೆ. ಉಳಿಕೆ ಸೆಸ್ ಮೊತ್ತವನ್ನು ದುರುಪಯೋಗ ಮಾಡಿಕೊಂಡಿರುವ ಕೇಂದ್ರ ಸರ್ಕಾರದ ಈ ಅಕ್ರಮದ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮಕ್ಕೆ ಮುಂದಾಗಬೇಕು.

ಮುಖ್ಯಮಂತ್ರಿಯವರೇ, ಅಧಿಕಾರ ಬರುತ್ತೆ, ಹೋಗುತ್ತೆ, ನಿಮಗೆ ಮತ್ತು ನಿಮ್ಮ ಪಕ್ಷದ 25 ಸಂಸದರಿಗೆ ರಾಜ್ಯದ ಜನತೆ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ನಮ್ಮ ಜನರ ತೆರಿಗೆ ಹಣದ ಪಾಲನ್ನು ಧೈರ್ಯದಿಂದ ಪ್ರಧಾನಿ ಬಳಿ ಕೇಳಿ. ನಿಮಗೆ ಧೈರ್ಯವಿಲ್ಲದೆ ಇದ್ದರೆ ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ.

 

Please follow and like us:
error
error: Content is protected !!