ತುಂಗಾಭಧ್ರ ಜಲಾಶಯದ 33 ಕ್ರಸ್ಟ್‌ ಗೇಟ್ ಓಪನ್ : ಮುಳುಗಿದ ಹಂಪಿ ಸ್ಮಾರಕಗಳು

ಬಳ್ಳಾರಿ :  ತುಂಗಾಭದ್ರ ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿದೆ ಹಂಪಿ ಸೇರಿದಂತೆ ಆನೆಗೊಂದಿಯ ಸುತ್ತಮುತ್ತಲಿನ ನದಿ ಪಾತ್ರದ ಸ್ಮಾರಕಗಳು ಜಲಾವೃತಗೊಂಡಿವೆ.   ನದಿ ಪಾತ್ರದಲ್ಲಿನ ಗ್ರಾಮಗಳ ಜನರಲ್ಲಿ ಇದೀಗ ಹೈ ಅಲರ್ಟ್ ಘೋಷಿಸಲಾಗಿದೆ. ಬೋಟ್ ಹಾಗೂ  ತೆಪ್ಪಗಳನ್ನು ಹಾಕುವಂತೆ ಕಟ್ಟೆಚ್ಚರ ವಹಿಸಲಾಗಿದೆ. ವಿಪ್ಪತ್ತು ನಿರ್ವಹಣಾ ತಂಡಗಳನ್ನು ನದಿ ಪಾತ್ರದಲ್ಲಿ ನಿಯೋಜಿಸಲಾಗಿದೆ. ಸದ್ಯ ತುಂಗಾಭದ್ರ ಜಲಾಶಯದಲ್ಲಿ 1632 ಅಡಿಯಷ್ಟು ನೀರು ಸಂಗ್ರಹವಾಗಿದ್ದು  33 ಕ್ರಸ್ಟ್ ಗೇಟ್ ಗಳನ್ನು 1 ಅಡಿಯಷ್ಟು ಎತ್ತಿ ನೀರು ಬಿಡಲಾಗಿದೆ. ಸದ್ಯ 80 ಸಾವಿರ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ನದಿಗಳು ತುಂಬಿ ಹರಿಯುತ್ತಿವೆ. ಹಂಪಿ ಆನೆಗೊಂದಿ ಭಾಗದ ಸ್ಮಾರಕಗಳಲ್ಲಿ ನೀರು ನುಗ್ಗಿ ಜಲಾವೃತಗೊಂಡಿವೆ. ನೀರಿನ ರಭಸ ಹೆಚ್ಚಾಗಿರುವುದರಿಂದ ಆನೆಗೊಂದಿ, ನವಬೃಂದಾವನಕ್ಕೆ ತೆರಳಲು ಹಾಕುತ್ತಿದ್ದ ತೆಪ್ಪ ಹಾಗೂ ಬೋಟ್ ಗಳ ನಿಷೇಧ ಮಾಡಲಾಗಿದೆ. ಕ್ರಸ್ಟ್‌ ಗೇಟ್ ಗಳನ್ನು ಓಪನ್ ಮಾಡಲಾಗಿತ್ತು ಇಂದು 16 ಕ್ರಸ್ಟ್‌ ಗೇಟ್ ಗಳನ್ನು ಓಪನ್ ಮಾಡುವ ಮೂಲಕ ನದಿಗೆ ಹಾಗೂ ಕಾಲುವೆಗಳಿಗೆ 58 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗಿದೆ. ಜಲಾಶಯ ಒಳ ಹರಿವು ಹೆಚ್ಚಾದಂತೆ ನೀರನ್ನು ಬಿಡಲಾಗುತ್ತದೆ ಅಂತಾ ಟಿಬಿ ಡ್ಯಾಂ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಬಾರಿ 1 ಲಕ್ಷ 20 ಸಾವಿರ ಕ್ಯೂಸೆಕ್ಸ್ ನಷ್ಟು ಹರಿಬಿಡಲಾಗಿತ್ತು. ಸದ್ಯ 80 ಸಾವಿರ ಕ್ಯೂಸೆಕ್ಸ್ ನೀರು ನದಿಗಳಿಗೆ ಹರಿಯುತ್ತಿದೆ ಇದರಿಂದ ಕಂಪ್ಲಿ- ಗಂಗಾವತಿ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದ್ದು. ವಿರುಪಾಪೂರ ಗಡ್ಡಿ ಹಾಗೂ ಗಂಗಾವತಿಯ ಕೆಲ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗುತ್ತಿವೆ. ಜಲಾಶಯದ ಗರಿಷ್ಠ ಮಟ್ಟ 1633 ಅಡಿಯಷ್ಟಿದ್ದು, ಇಂದಿನ ಮಟ್ಟ 1632.01ಅಡಿ ಇದೆ. ಜಲಾಶಯದ  ಸಾಮರ್ಥ್ಯ 97.05 ಟಿಎಂಸಿ ಇದ್ದು. ಜಲಾಶಯದ ಒಳಹರಿವು 77927 ಕ್ಯೂಸೆಕ್ಸ್ ಹಾಗೂ ಹೊರಹರಿವು:88212 ಕ್ಯೂಸೆಕ್ಸ್ ಇದೆ.

Please follow and like us:
error