– ಶಿವಪುರ ಗ್ರಾಮದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ತುಂಗಾಭದ್ರಾ ನದಿ ಪವಿತ್ರ ಪುಷ್ಕರ ಸ್ನಾನ ಪೂಜೆ ಸಲ್ಲಿಸಿದ ಮುಖಂಡರು
ಕೊಪ್ಪಳ :
ತುಂಗಭದ್ರ ನದಿ ಪವಿತ್ರ ಪುಸ್ಕರ ಸ್ನಾನ ಕಾರ್ಯಕ್ರಮದಂಗವಾಗಿ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ನದಿ ಸ್ನಾನಗಟ್ಟಗಳಲ್ಲಿ ತುಂಗಭದ್ರ ನದಿ ಪವಿತ್ರ ಪುಷ್ಕರ ಸ್ನಾನ ನವಂಬರ್ 21 ರಿಂದ ಡಿಸಂಬರ್ 1 ರವರೆಗೆ ನಡೆಯಲಿದೆ ಎಂದು ಕೆಡಿಪಿ ಸದಸ್ಯರು, ಹಾಗು ಫಾರಿನ್ ಇನ್ವೆಸ್ಟರಸ್ ಕೌನ್ಸಿಲ್ ನಿರ್ದೇಶಕರಾದ ಅಮರೇಶ ಕರಡಿ ಹೇಳಿದರು.
ತುಂಗಭದ್ರ ನದಿ ಪವಿತ್ರ ಪುಸ್ಕರ ಸ್ನಾನ ಕಾರ್ಯಕ್ರಮದಂಗವಾಗಿ ಶುಕ್ರವಾರದಂದು ಶಿವಪುರ ಗ್ರಾಮದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ತುಂಗಾಭದ್ರಾ ನದಿ ಪವಿತ್ರ ಪುಷ್ಕರ ಸ್ನಾನ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾಡಿನ ಒಳಿತಿಗಾಗಿ, ಈ ಭಾಗದ ಜನರ ಕಲ್ಯಾಣ, ಶ್ರೇಯೋಭಿವೃದ್ಧಿಗಾಗಿ ತುಂಗಭದ್ರ ನದಿ ಪವಿತ್ರ ಪುಷ್ಕರ ಸ್ನಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು.
ಜಿಲ್ಲೆಯ ಪವಿತ್ರ ಸ್ಥಳಗಳಾದ ಹುಲಗಿ, ಶ್ರೀ ಹುಲಿಗೆಮ್ಮ ದೇವಸ್ಥಾನ, ಮಾರ್ಕಂಡೇಶ್ವರ ದೇವಸ್ಥಾನ ಶಿವಪುರ, ವಿರೂಪಾಪುರ ಗಡ್ಡಿ, ಆನೆಗೊಂದಿ ಚಿಂತಮಣಿ ಮಠ, ಆನೆಗೊಂದಿ ನವ ಬೃಂದಾವನ, ಚಿಕ್ಕಜಂತಕಲ್ ಆಂಜನೇಯ ಸ್ವಾಮಿ, ಮಸ್ಟೂರು ಆಂಜನೇಯ ಸ್ವಾಮಿ, ಬೆನ್ನೂರು ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಗಳಲ್ಲಿ ಪೂಜೆ ಕಾರ್ಯಗಳು ಜರುಗಲಿವೆ ಎಂದರು.
ಶಿವಪುರ ಗ್ರಾಮದ ಶ್ರೀ ಮಾರ್ಕಂಡೇಶ್ವರ ದೇವಸ್ಥಾನ ತುಂಗಾಭದ್ರಾ ನದಿ ಪವಿತ್ರ ಪುಷ್ಕರ ಸ್ನಾನ ಪೂಜೆ ಕಾರ್ಯಕ್ರಮದಲ್ಲಿ ಅಂಬರೀಶ ಕರಡಿ ಅವರೊಂದಿಗೆ ಶಿವಪುರ ಗ್ರಾಮದ ಗುರುಹಿರಿಯರು, ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸದಸ್ಯ ಪಾಲಕ್ಷಪ್ಪ ಗುಂಗಾಡಿ, ಗಣ್ಯರಾದ ರಾಮರಾವ್ ಚನ್ನಾಪುರ, ಶ್ರೀನಿವಾಸರಾವ್, ಪ್ರದೀಪ್ ಹಿಟ್ನಾಳ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
—