ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘಕ್ಕೆ ಚುನಾವಣೆ : ವೇಳಾ ಪಟ್ಟಿ ಪ್ರಕಟ

ಕೊಪ್ಪಳ : ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರ ೫ ವರ್ಷಗಳ ಅವಧಿ ಪೂರ್ಣಗೊಂಡಿದ್ದು ಅದಕ್ಕೆ ಚುನಾವಣಾಧಿಕಾರಿಗಳು ಚುನಾವಣೆ ಘೋಷಿಸಿ ಆದೇಶ ಹೊರಡಿಸಿದ್ದಾರೆ. ಆಡಳಿತ ಮಂಡಳಿಯ ಸದಸ್ಯರ ಒಟ್ಟು ೧೫ ಸ್ಥಾನಗಳಿದ್ದು, ಅವುಗಳಿಗೆ ನವೆಂಬರ್ ೫ ರಂದು ಚುನಾವಣೆ ನಡೆಯಲಿದೆ.ಚುನಾವಣೆಯಲ್ಲಿ ಸ್ವರ್ಧಿಸಬಯಸುವ ಅಭ್ಯರ್ಥಿಗಳು ಅಕ್ಟೋಬರ್ ೨೧ರಿಂದ೨೮ ರವರೆಗೆ ಪ್ರತಿ ದಿನ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ನಾಮ ಪತ್ರಗಳನ್ನು ಚುನಾವಣಾಧಿಕಾರಿಗೆ ಸಲ್ಲಿಸಬಹುದು.

ಅ.೨೯ ರಂದು ನಾಮ ಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂದೆ ತೆಗೆದುಕೊಳ್ಳಲು ಕೊನೆಯ ದಿನ ಅ.೩೦. ಅಗತ್ಯಬಿದ್ದರೆ ಮತದಾನ ನವೆಂಬರ ೫ ರಂದು ಬೆಳಿಗ್ಗೆ ೯ ರಿಂದ ಸಾಯಂಕಾಲ ೪ ಗಂಟೆಯವರೆ ನಡೆಯಲಿದೆ.ಅದೇ ದಿನ ಮತದಾನ ಕೊನೆಗೊಂಡ ನಂತರ ಮತ ಎಣಿಕೆ ಕಾರ್ಯ ನಡೆಯಲಿದ್ದು ಚುನಾವಣಾಧಿಕಾರಿಗಳು ಅದೇ ದಿನ ಫಲಿತಾಂಶ ಘೋಷಿಸಲಿದ್ದಾರೆ. ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವ ಉಮೆದುವಾರರು ರೂ ೨೦೦೦ ಮತ್ತು ಕಾಯ್ದಿರಿಸಿದ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ರೂ ೧೦೦೦ ಗಳನ್ನು ಸಂದಾಯ ಮಾಡಿ ರಸೀದಿಯನ್ನು ನಾಮ ಪತ್ರದೊಂದಿಗೆ ಲಗತಿಸತಕ್ಕದ್ದು. ಪ.ಜಾ ಮತ್ತು ಪ.ಪಂಗಡದ ಅಭ್ಯರ್ಥಿಗಳು ಸಂಬಂಧಿಸಿದ ಪ್ರಾಧಿಕಾರ ದಿಂದ ಪಡೆದ ಜಾತಿ ಪ್ರಮಾಣ ಪತ್ರವನ್ನು ನಾಮ ಪತ್ರದೊಂದಿಗೆ ಸಲಿಸತಕ್ಕದು. ಹಿಂದುಳಿದ ವರ್ಗ ಎ ಮತ್ತು ಬಿ ಅಭ್ಯರ್ಥಿಗಳು ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದ ಇತ್ತೀಚಿನ ಜಾತಿ ಪ್ರಮಾಣ ಪತ್ರವನ್ನು ನಾಮ ಪತ್ರದೊಂದಿಗೆ ಲಗತ್ತಿಸತ್ತಕ್ಕದು. ಪ್ರತಿಯೊಬ್ಬ ಉಮೇದುದಾರರ ನಾಮ ಪತ್ರಕ್ಕೆ ಮತದಾನದ ಅರ್ಹತೆ ಪಡೆದ ಒಬ್ಬ ಸೂಚಕರು ಸಹಿ ಮಾಡತಕ್ಕದ್ದು. ಮತದಾನದ ಅರ್ಹತೆ ಪಡೆದ ಒಬ್ಬ ಮತದಾರನು ಗರಿಷ್ಟ ಒಂದು ನಾಮ ಪತ್ರಕ್ಕೆ ಮಾತ್ರ ಸೂಚಕರಾಗಿ ಸಹಿ ಮಾಡಬಹುದು. ನಿಗದಿ ಪಡಿಸಿದ ಅವಧಿಯ ನಂತರ ಬರುವ ನಾಮ ಪತ್ರವನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ವಿವರಗಳನ್ನು ಸಂಘದ ಕಚೇರಿಯಿಂದ ಪಡೆದುಕೊಳ್ಳಬಹುದೆಂದು ಸಂಘದ ಚುನಾವಣಾಧಿಕಾರಿ ಬಸಪ್ಪ ಗಾಳಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Please follow and like us:
error