ತಾಪಂ ಅಧ್ಯಕ್ಷ ಮಹಮ್ಮದ್ ರಫೀ ನೇತೃತ್ವದಲ್ಲಿ ಸರಕಾರಿ ಶಾಲೆಗೆ ಡೆಸ್ಕ್ಗಳ ವಿತರಣೆ

ಕನ್ನಡನೆಟ್ ನ್ಯೂಸ್ ಕೊಪ್ಪಳ : ಜಗಜ್ಯೋತಿ ಬಸವ ಜಯಂತಿ, ಭಾರತೀಯರ ಪವಿತ್ರ ಹಬ್ಬ ರಂಜಾನ್ ಹಬ್ಬದ ಪ್ರಯುಕ್ತ ಇಲ್ಲೋರ್ವ ತಾಲೂಕು ಪಂಚಾಯತ್ ಅಧ್ಯಕ್ಷರು, ಮಾದರಿ ಕಾರ್ಯ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಉನ್ನತಿಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಗೆ ತಾಲೂಕ ಪಂಚಾಯತ ಅಧ್ಯಕ್ಷರಾದ ಮಹಮ್ಮದ್ ರಫೀ ಹಾಗೂ ಶ್ರೀರಾಮನಗರ ಗ್ರಾಮದ ಪ್ರಮುಖರ ವೈಯಕ್ತಿಕ ಸಹಾಯದಿಂದ ಶುಕ್ರವಾರದಂದು 20 ಡೆಸ್ಕ್ಗಳನ್ನು ವಿತರಿಸಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ತಾಲೂಕ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ರಫೀ ಮಾತನಾಡಿ, ಸಂಪೂರ್ಣವಾಗಿ ಎಲ್ಲಾ ತರಗತಿ ವಿದ್ಯಾರ್ಥಿಗಳಿಗೆ ಗ್ರಾಮದ ಎಲ್ಲಾರ ಸಹಕಾರದಿಂದ ನೂರಾರು ಡೆಸ್ಕ್ ಕೊಡಿಸಬೇಕು ಎನ್ನುವ ಹಂಬಲ ಇಟ್ಟುಕೊಂಡಿದ್ದೇವು. ಆದರೆ ಲಾಕ್ಡೌನ್ ಸಲುವಾಗಿ ಸದ್ಯ ಮಟ್ಟಿಗೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಗ್ರಾಮದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತನೆ ಮಾಡುತ್ತೇವೆ ಎಂದರು.ಇನ್ನೂ ಹಬ್ಬದ ಪ್ರಯುಕ್ತ ಸಸಿ ನೆಡುವುದರ ಮೂಲಕ ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಆಚರಣೆ ಮಾಡಲಾಯಿತು. ಇದೇ ವೇಳೆ ಶಿಕ್ಷಕ ಪ್ರಭಾಕರ ರೆಡ್ಡಿ ಅವರಿಗೆ ಡೆಸ್ಕಗಳನ್ನು ಹಸ್ತಾಂತರಿಸಲಾಯಿತು… ಗ್ರಾ.ಪಂ ಸದಸ್ಯರಾದ ರಾಮಕೃಷ್ಣರಾಜು, ಮೆಹಬೂಬ್, ಹಿರಿಯ ಆರೋಗ್ಯ ಸಹಾಯಕ ಗುರುರಾಜ್, ಶರಣಬಸವರಾಜ ರೆಡ್ಡಿ, ಸುಮಂಗಲ ಹಾಗೂ ಕುಶಲ ಕಾರ್ಮಿಕರ ಸಂಘದ ಸದಸ್ಯರು ಹಾಜರಿದ್ದರು

Please follow and like us:
error