ತಮಿಳುನಾಡು: ಭಾರೀ ಮಳೆಗೆ ಮನೆ ಕುಸಿದುಬಿದ್ದು 15 ಮಂದಿ ಸಾವು

ಕೊಯಮತ್ತೂರು, ಡಿ.2: ತಮಿಳುನಾಡಿನ ಮೆಟ್ಟುಪಾಳಯಂನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನಾಡೂರ್ ಗ್ರಾಮದಲ್ಲಿ ಮೂರು ಮನೆಗಳು ಕುಸಿದುಬಿದ್ಧ ಪರಿಣಾಮ 10 ಮಂದಿ ಮಹಿಳೆಯರು ಸೇರಿದಂತೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾರೀ ಮಳೆಯಿಂದಾಗಿ ಖಾಸಗಿ ಕಂಪೌಂಡ್ ಗೋಡೆಯು 12ಕ್ಕೂ ಅಧಿಕ ಜನರು ವಾಸಿಸುತ್ತಿದ್ದ ಮನೆಯ ಮೇಲೆ ಕುಸಿದುಬಿದ್ದಿದೆ. ಘಟನೆಯಲ್ಲಿ ಗುರು(45), ರಾಮನಾಥ(20), ಆನಂದ್ ಕುಮಾರ್(40), ಹರಿಸುಧಾ(16), ಶಿವಕಾಮಿ(45), ಒವಿಯಮ್ಮಲ್(50), ನಥಿಯಾ(30), ವೈದೇಹಿ(20), ಥಿಲಗ್‌ವತಿ(50), ಅರುಕಾನಿ(55), ರುಕ್ಮುಣಿ(40), ನಿವೆಥಾ(18), ಚಿನ್ನಮ್ಮಾಲ್(70), ಅಕ್ಷಯಾನಂದ (7)ಮೃತಪಟ್ಟವರೆಂದು ಗುರುತಿಸಲಾಗಿದೆ.

ಮೃತದೇಹಗಳನ್ನು ಮೆಟ್ಟುಪಲಂನ ಆಸ್ಪತ್ರೆಯಲ್ಲಿ ಇಡಲಾಗಿದೆ.

Please follow and like us:
error