ತಬ್ಲಿಘಿ ಜಮಾತ್, ನಿಜಾಮುದ್ದೀನ್ ಮತ್ತು ಕೊರೋ ನ ವೈರಸ್ -ಬಾನು ಮುಷ್ತಾಕ್

ಆರಂಭದಲ್ಲಿಯೇ ನಾನು ಹೇಳಿಕೊಳ್ಳಬೇಕಾದ ವಿಷಯವೊಂದಿದೆ. ಅದೇನೆಂದರೆ ನನಗೆ ತಬ್ಲಿಘಿ ಜಮಾತ್ ನ ಬಗ್ಗೆ ಅದರ ಕಾರ್ಯವೈಖರಿ ಮತ್ತು ಸಿದ್ಧಾಂತಗಳ ಬಗ್ಗೆ ನನಗೆ ನನ್ನದೇ ಆದ ನೂರಾರು ತಕರಾರುಗಳಿವೆ. ತಬ್ಲಿಘಿ ಜಮಾತ್ ಎಂಬುದು ಪ್ರಸ್ತುತ ಸಮುದಾಯದೊಳಗೆ ಪ್ರವಾದಿ ಕಾಲದಲ್ಲಿ ಆಚರಣೆಯಲ್ಲಿದ್ದ ಇಸ್ಲಾಂನ ನೈಜ ಆಚರಣೆ ಮತ್ತು ಮೌಲ್ಯಗಳನ್ನು ಮುಸ್ಲಿಮರ ನಡುವೆ ಪ್ರಚಾರ ಮಾಡಿ ಅವರುಗಳನ್ನು ಕೆಡುಕಿನಿಂದ ದೂರಮಾಡಿ ಉತ್ತಮ ಮುಸ್ಲಿಂ ಮತ್ತು ಉತ್ತಮ ನಾಗರಿಕನನ್ನಾಗಿ ಮಾಡಲು ಶ್ರಮಿಸುತ್ತಿರುವ ಸಂಘಟನೆಯಾಗಿದೆ. ಸದರಿ ಸಂಘಟನೆಯ ಬೆಂಬಲಿಗರು ದಕ್ಷಿಣ ಏಷ್ಯಾದಲ್ಲಿ ಸುಮಾರು ಒಂದುವರೆ ಕೋಟಿಯಿಂದ 2:30 ಕೋಟಿಯವರೆಗೆ ಇದು 180ರಿಂದ 200 ದೇಶಗಳಲ್ಲಿ ಹರಡಿರುವ ರು ಎಂಬ ಅಂದಾಜು ಇದೆ. ಇಪ್ಪತ್ತನೆಯ ಶತಮಾನದ ಅತ್ಯಂತ ಪ್ರಬಲ ಧಾರ್ಮಿಕ ಸಂಘಟನೆ ಎಂದು ಪರಿಗಣಿತ ವಾಗಿದೆ. ಸದರಿ ಸಂಘಟನೆಯು ಸಾವಿರ ಒಂಬೈನೂರ 27ರಲ್ಲಿ ಮಹಮ್ಮದ್ ಇಲಿಯಾಸ್ ಅಲ್ ಕಂಧಲಾವಿ ಎಂಬುವವರಿಂದ ಆರಂಭವಾಯಿತು. ಸಮಾಜದ ಅತ್ಯಂತ ಕೆಳಸ್ತರದ ಜನರ ನಡುವೆ ಕೆಲಸ ಹಮ್ಮಿಕೊಂಡಿರುವ ಈ ಸಂಘಟನೆ ಸಮುದಾಯದ ಜನರ ನಡುವೆ ಆಧ್ಯಾತ್ಮಿಕ ಚಿಂತನೆ ಮತ್ತು ಬದಲಾವಣೆಯನ್ನು ತರಲು ಶ್ರಮಿಸುತ್ತಿದೆ.
ಸದರಿ ಸಂಘಟನೆಯ ಯಾವುದೇ ರಾಜಕೀಯ ಸಿದ್ಧಾಂತಕ್ಕೆ ಬದ್ಧವಾಗಿಲ್ಲ ರಾಜಕಾರಣವನ್ನು,ಚರ್ಚಿಸುವುದಿಲ್ಲ. ಮತ್ತು ಇಸ್ಲಾಮೀ ನ್ಯಾಯ ವ್ಯವಸ್ಥೆಯ ಬಗ್ಗೆ ಕೂಡ ಮಾತನಾಡುವುದಿಲ್ಲ. ತತ್ವಗಳನ್ನು ಹೊರಡಿಸುವುದು ಇಲ್ಲ. ಇದೊಂದು ಮಿಷನರಿ ಸಂಸ್ಥೆಯಾಗಿದ್ದು ಕ್ರೌರ್ಯ ಮತ್ತು ಹಿಂಸೆಯನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ತನ್ನ ಕೆಲಸದ ಸಲುವಾಗಿ ಯಾವುದೇ ಮಾಧ್ಯಮವನ್ನು ಅವಲಂಬಿಸದೆ ವ್ಯಕ್ತಿಯಿಂದ ವ್ಯಕ್ತಿಗೆ ವೈಯಕ್ತಿಕ ಸಂಪರ್ಕದಿಂದ ಧ್ಯೇಯ ಧೋರಣೆಗಳನ್ನು ವಿಸ್ತರಿಸುವ ಸದ್ರಿ ಸಂಸ್ಥೆಯು ಸ್ಥಳೀಯವಾಗಿ ಹುಟ್ಟಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿದೆ.
“ಪ್ರಯಾಣ “ಎಂಬುದು ಈ ಸಂಸ್ಥೆಯ ಬಹುಮುಖ್ಯ ಕಾರ್ಯಸೂಚಿ. ಮರ್ಕಜ್ ಎಂಬುದರ ಅರ್ಥ ಕೇಂದ್ರ ಅಥವಾ ಸೆಂಟರ್ ಎಂದು. ಈ ಕೇಂದ್ರ ಅಥವಾ ಸೆಂಟರ್ ಯಾವುದೇ ಊರಿನ ಒಂದು ಮಸೀದಿ ಆಗಿರುತ್ತದೆ. ಈ ಸಂಘಟನೆಯ ಬೆಂಬಲಿಗರು ತಿಂಗಳಿನಲ್ಲಿ ಹತ್ತು ದಿನ ಅಥವಾ 40 ದಿನ ಅಥವಾ ಒಂದು ವರ್ಷದಲ್ಲಿ 120 ನಿರಂತರ ದಿನಗಳು ಅಥವಾ ದಿನಗಳ ಪ್ರಯಾಣ ಮತ್ತು ಶಿಸ್ತು ಬದ್ಧ ಜೀವನವನ್ನು ಅಳವಡಿಸಿಕೊಳ್ಳುತ್ತಾರೆಅಳವಡಿಸಿಕೊಳ್ಳುತ್ತಾರೆ. ನಮಾಜ್, ಧಾರ್ಮಿಕ ವಿಧಿವಿಧಾನಗಳ ಬದುಕು ಮತ್ತು ನೈತಿಕ ಮೌಲ್ಯಗಳ ಪುನರುತ್ಥಾನವು ಈ ಪ್ರಯಾಣ ಮತ್ತು ಶಿಬಿರದ ಮುಖ್ಯ ಉದ್ದೇಶವಾಗಿದೆ. ಈ ಸಂಸ್ಥೆಯು ಆಯೋಜನೆ ಮಾಡುವ ವಾರ್ಷಿಕ ಧಾರ್ಮಿಕ ಶಿಬಿರವನ್ನು ಇಜ್ತೆಮಾ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಈ ಇಸ್ತೆಮಾ ಮೂರು ದಿನಗಳ ಕಾಲ ಆಯೋಜನೆ ಮಾಡಲಾಗುತ್ತದ. ಕೊನೆಯ ದಿನ ಸುದೀರ್ಘವಾದ ಮತ್ತು ಭಕ್ತಿಪೂರಿತ ಹಾಗೂ ಭಾವುಕ ಪ್ರಾರ್ಥನೆಯೊಂದಿಗೆ ಆ ಸಭೆ ಕೊನೆಗೊಳ್ಳುತ್ತದೆ . ಈ ಪ್ರಾರ್ಥನಾ ಸಭೆಗೆ ದರಾ ಶಿಬಿರಾರ್ಥಿಗಳು ತಂಡೋಪತಂಡವಾಗಿ ಭಾಗವಹಿಸುತ್ತಾರೆಭಾಗವಹಿಸುತ್ತಾರೆ. 2018ರಲ್ಲಿ ಅವರಂಗಾಬಾದ ನಲ್ಲಿ ನಡೆದ ಸದರಿ ಇಜ್ತೆಮಾ ಅಥವಾ ಪ್ರಾರ್ಥನಾ ಸಭೆಯಲ್ಲಿ ಇಡೀ ಪ್ರಪಂಚದಾದ್ಯಂತ ಜನರು ಸೇರಿದಂತೆ 40 ಲಕ್ಷ ಜನ ಸೇರಿದ್ದರುಸೇರಿದ್ದರು
ಮಹಿಳೆಯರು ಕೂಡ ತಮ್ಮ ಪುರುಷ ಸಂಬಂಧಿಗಳ ಜೊತೆಯಲ್ಲಿ ಸದರಿ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಅವರ ಭಾಗವಹಿಸುವಿಕೆಯ ಬಗ್ಗೆ ತೀವ್ರ ವಿರೋಧವಿದ್ದು ಮೌಲನ ಇಲಿಯಾಸ್ ರವರು ಆಕ್ಷೇಪಗಳನ್ನು ನಿವಾರಿಸಿ ಮಹಿಳೆಯರ ಮೊದಲ ಜಮಾತ್ ಅನ್ನು ದೆಹಲಿಯ ನಿಜಾಮುದ್ದೀನ್ನಲ್ಲಿ ಆಯೋಜನೆ ಮಾಡಿದ್ದರುಮಾಡಿದ್ದರು. ಅತ್ಯಂತ ಕಟ್ಟುನಿಟ್ಟಿನ ಹಿಜಾಬ್ ಆಚರಣೆ, ಪುರುಷರಿಂದ ಪ್ರತ್ಯೇಕವಾಗಿ ಇರುವುದು ಮೊದಲಾದ ನಿರ್ಬಂಧಗಳು ಅವರ ಮೇಲೆ ಇದೆಇದೆ.
ಹೀಗೆ ಲಕ್ಷಾಂತರ ಮಂದಿ ಸದರಿ ಸಭೆಗಳ ಸಲುವಾಗಿ ಒಟ್ಟು ಗೂಡಿದರೂ ಮೇಲ್ಕಂಡ ಸಂಸ್ಥೆಯವರು ಸರ್ಕಾರದ ನೆರವನ್ನು ಯೋಚಿಸುವುದಿಲ್ಲ. ಬದಲಿಗೆ ಊರ ಹೊರಗಿನ ವಿಶಾಲವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಆ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ನಗರಸಭೆ ಅಥವಾ ಪುರಸಭೆ ಗಳಿಂದ ಪೂರ್ವಾನುಮತಿ ಯನ್ನು ಪಡೆಯುತ್ತಾರೆ. ನೀರಿನ ವ್ಯವಸ್ಥೆ ಇಲ್ಲದೆ ಇದ್ದ ಪಕ್ಷದಲ್ಲಿ ಅವರಲ್ಲಿಯೇ ಉಳ್ಳವರು ದಾನಿಗಳ ಆಗುತ್ತಾರೆ. ದಾನಿಗಳ ನೆರವಿನಿಂದ ಹಲವಾರು ಬೋರ್ವೆಲ್ ಗಳನ್ನು ನೀರಿನ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಅಗತ್ಯಕ್ಕೆತಕ್ಕಂತೆ ನೂರಾರು ಶೌಚಾಲಯಗಳನ್ನು ನಿರ್ಮಾಣ ಮಾಡುತ್ತಾರೆ. ನೀರು ನೈರ್ಮಲ್ಯ ಶುಚಿತ್ವ ಮತ್ತು ಆಹಾರ ವ್ಯವಸ್ಥೆಯನ್ನು ಯೋಜನಾಬದ್ಧವಾಗಿ ರೂಪಿಸುತ್ತಾರೆ. ವಿದ್ಯಾರ್ಥಿಗಳ ಪೈಕಿ ಅನೇಕರು ಅಡಿಗೆ ಕೆಲಸ ಶೌಚ ಗ್ರಹದ ಸ್ವಚ್ಛತೆ ಮೊದಲಾದ ಕೆಲಸಗಳನ್ನು ನಿರ್ವಹಿಸುತ್ತಾರೆ. ಮತ್ತು ಅಲ್ಲಿ ಸಿದ್ಧ ಸಾಲುಗಳಿಂದ ಶಿಬಿರಾರ್ಥಿಗಳು ತಮ್ಮ ಅನ್ನವನ್ನು ತಾವು ಕಾಸುಕೊಟ್ಟು ಕೊಂಡುಕೊಳ್ಳುತ್ತಾರೆ. ಇದು ತಬ್ಲಿಘಿ ಜಮಾತ್ ನ ಸ್ಥೂಲ ಪರಿಚಯ
ಅಂತಹದೇ ದೆಹಲಿಯ ಒಂದು ಶಿಬಿರವನ್ನುನಿಜಾಮುದ್ದೀನ್ ಕೇಂದ್ರದಲ್ಲಿ ಮಾರ್ಚ್ 13 ರಿಂದ 15 ರವರೆಗೆ ಆಯೋಜನೆ ಮಾಡಲಾಗಿತ್ತು .
ಇತ್ತ ದೇಶದ ಪರಿಸ್ಥಿತಿ ಹೇಗಿತ್ತೆಂದರೆ ಮಾರ್ಚ್ 13ರಂದು ನಮ್ಮ ದೇಶದ ಆರೋಗ್ಯ ಸಚಿವರು ಕೋರೋನ ವೈರಸ್” ಆರೋಗ್ಯದ ತುರ್ತು ಪರಿಸ್ಥಿತಿ ಅಲ್ಲ” ಎಂಬ ಹೇಳಿಕೆಯನ್ನು ನೀಡಿದರು. ಆಗ ದೇಶದಲ್ಲಿ ಕೋವಿಡ್-19 ನಿಂದ ಬಳಲುತ್ತಿದ್ದ 81 ಪ್ರಕರಣಗಳು ದಾಖಲಾಗಿದ್ದವು. ಮಾರ್ಚ್ 16ರಂದು ದೆಹಲಿಯ ಮುಖ್ಯಮಂತ್ರಿಗಳಾದ ಅರವಿಂದ ಕೇಜ್ರಿವಾಲ್ ರವರು ಸಾಮಾಜಿಕ ಧಾರ್ಮಿಕ ರಾಜಕೀಯ ಹಾಗೂ ಸಾಂಸ್ಕೃತಿಕ ಸಭೆಗಳಲ್ಲಿ 50 ಜನರಿಂದ ಹೆಚ್ಚು ಜನರು ಎಂಬ ಆದೇಶವನ್ನು ಜಾರಿಗೊಳಿಸಿದರು. ಪ್ರಧಾನಮಂತ್ರಿ ಮೋದಿ ಅವರ ಮೊದಲ ಘೋಷಣೆಯು ಮಾರ್ಚ್ 19ರಂದು ನೀಡಲಾಗಿತ್ತು ಒಂದು ದಿನದ ಜನತಾ ಕರ್ಫ್ಯೂ ನಾ ಕರೆ ನೀಡಲಾಗಿತ್ತು. ತಕ್ಷಣವೇ ಮರ್ಕಸ್ ಅಥವಾ ಕೇಂದ್ರವು ತಮ್ಮ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಸ್ಥಗಿತಗೊಳಿಸಿತು. ಈ ಗೊಂದಲದಲ್ಲಿ ಮಾರ್ಚ್ 21ರಂದು ರೈಲ್ವೆ ಸೇವೆಯನ್ನು ಕೂಡ ಸ್ಥಗಿತಗೊಳಿಸಿದ್ದರಿಂದ ಶಿಬಿರಾರ್ಥಿಗಳೆಲ್ಲಾಕೇಂದ್ರದಲ್ಲಿಯೇ ಉಳಿಯುವಂತಾಯಿತು. ಮಾರ್ಚ್ 23 ರ ಬೆಳಗಿನಿಂದ ಮಾರ್ಚ್ 31ರವರೆಗೆ ದೆಹಲಿ ಲಾಕ್ಡೌನ್ ಆದೇಶ ಹೊರ ಬಿದ್ದಿತು. ಆದರೂ ಕೂಡ 1500 ಜನರು ಸಿಕ್ಕಸಿಕ್ಕ ವಾಹನಗಳಲ್ಲಿ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು. ಮಾರ್ಚ್ 24 ರ ಮಂಗಳವಾರ ಸಂಜೆ 8 ಗಂಟೆ ವೇಳೆಗೆ ಮೋದಿಯವರು ತಮ್ಮ ಮತ್ತೊಂದು ಭಾಷಣದಲ್ಲಿ ಇಡೀ ದೇಶವ್ಯಾಪಿ 21 ದಿನಗಳ ಲಾಕ್ ಡೌನನ್ನು ಘೋಷಿಸಿದರು. ಮುಂದೇನು ದಾರಿ ಕಾಣದೆ ಅಳಿದುಳಿದ ಶಿಬಿರಾರ್ಥಿಗಳನ್ನು ವೈದ್ಯಕೀಯ ಮುನ್ನೆಚ್ಚರಿಕೆ ಯೊಂದಿಗೆ ಉಳಿಸಿಕೊಳ್ಳಬೇಕಾದ ಜವಾಬುದಾರಿ ಮರ್ಕಸ್ ಅಥವಾ ಕೇಂದ್ರದ ಮೇಲೆ ಬಿತ್ತು. ಅದರ ದಿನಾಂಕ 24 ಮಾರ್ಚ್ ನಲ್ಲೆ ನಿಜಾಮುದ್ದೀನ್ ಠಾಣೆಯಿಂದ ಮರ್ಕಜ್ ಕೇಂದ್ರಕ್ಕೆ ಒಂದು ನೋಟಿಸ್ ಜಾರಿಯಾಯಿತು. ವಸ್ತುಸ್ಥಿತಿಯನ್ನು ತಿಳಿಸಿ 1500 ಜನರು ಈಗಾಗಲೇ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ 1000 ವಿಭಿನ್ನ ರಾಜ್ಯ ಮತ್ತು ರಾಷ್ಟ್ರಗಳ ಜನರು ತಮ್ಮಲ್ಲಿ ಉಳಿದಿದ್ದಾರೆ ಎಂಬ ವಸ್ತುಸ್ಥಿತಿಯನ್ನು ತಿಳಿಸಿ ಸದರಿ ನೋಟೀಸಿಗೆ ಉತ್ತರಿಸ ಲಾಯಿತು. ಮಾರ್ಚ್ 25ರಂದು ಸಂಬಂಧಪಟ್ಟ ತಾಸಿಲ್ದಾರ್ ರವರು ವೈದ್ಯಕೀಯ ತಂಡದೊಂದಿಗೆ ಹಿಂದಕ್ಕೆ ಭೇಟಿನೀಡಿ ಶಿಬಿರಾರ್ಥಿಗಳ ವರದಿಯನ್ನು ತಯಾರಿಸಿ ಸದರಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಲಾಯಿತು. ಮಾರ್ಚ್ 26ರಂದು ಸಂಬಂಧಪಟ್ಟ ಸಬ್ ದಿವಿಷನಲ್ ಮ್ಯಾಜಿಸ್ಟ್ರೇಟ್ ರವರು ಸ್ಥಳ ಪರೀಕ್ಷೆ ಮಾಡಿ ಸಂಬಂಧಪಟ್ಟವರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ವೇಳೆಯನ್ನು ನಿಗದಿಪಡಿಸಿದರು. ಕೇಂದ್ರದವರು ಜಿಲ್ಲಾಧಿಕಾರಿಗಳನ್ನು ಆ ದಿನವೇ ಭೇಟಿಮಾಡಿ ವಸ್ತುಸ್ಥಿತಿಯನ್ನು ವಿವರಿಸಿ ಈಗಾಗಲೇ ತಾವು ನಿಗದಿಗೊಳಿಸಿರುವ 17 ವಾಹನಗಳನ್ನು ವಾಹನಗಳನ್ನು ನಂಬರ್ ಸಹಿತ ಲಿಸ್ಟನ್ನು ನೀಡಿ ಅವುಗಳ ಮೂಲಕ ಪ್ರಯಾಣ ಮಾಡಲು ರಹದಾರಿ ಮತ್ತು ಅನುಮತಿಯನ್ನು ನೀಡಬೇಕೆಂದು ಕೋರಿದರು. ಮಾರ್ಚ್ 27 ಮತ್ತು 28ರಂದು ಸುಮಾರು ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.ಈ ನಡುವೆ ಲಜಪತ್ ನಗರದ ರಕ್ಷಣಾಧಿಕಾರಿ ಮರ್ಕಜ್ ಕೇಂದ್ರಕ್ಕೆ ಇನ್ನೊಂದು ನೋಟೀಸನ್ನು ಜಾರಿ ಮಾಡಿ ಅವರುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ದಿನಾಂಕ 29 /3 /2020ರಂದು ಲಿಖಿತ ಉತ್ತರ ಸಲ್ಲಿಸಿದ ಮರ್ಕಸ್ ತಾನು ಯಾವುದೇ ಕಾನೂನಿನ ಆದೇಶಗಳನ್ನು ಉಲ್ಲಂಘಿಸಿಲ್ಲವೆಂತಲೂ ಸಮಜಾಯಿಷಿಯನ್ನೂ ನೀಡಿ ತಾವು ಸೂಚಿಸಿರುವ ವಾಹನಗಳಿಗೆ ಪರವಾನಿಗೆಯನ್ನು ನೀಡಬೇಕೆಂದು ಮತ್ತೊಂದು ಕೋರಿಕೆಯನ್ನು ಸಲ್ಲಿಸಿದ್ದಾರರ. ನಂತರ ಸುಮಾರು ನೂರು ಮಂದಿ ಶಂಕಿತರ ಸೋಂಕಿತರನ್ನು ದೆಹಲಿಯ ನರುಲ ಏರಿಯಾದಲ್ಲಿ ಪ್ರತ್ಯೇಕಿಸಿ ಇಡಲಾಗಿದೆ. ಸಂಪೂರ್ಣ ಸ್ಥಳವನ್ನು ಕುಲ್ಲ ಮಾಡಲಾಗಿದ್ದು ಕ್ರಿಮಿನಾಶಕವನ್ನು ಮಾಡಲಾಗಿದೆಮಾಡಲಾಗಿದೆ. ತದನಂತರ ಆ ಪೈಕಿ 24 ಜನರು ಕೋರೋನ ಸೋಂಕಿತರು ಎಂದು ದೃಢಪಟ್ಟಿದೆ.
ಆ ದಿನಗಳಲ್ಲಿ ನಮ್ಮ ದೇಶದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ನಾವು ಈಗ ಅವಲೋಕಿಸಬೇಕಿದೆ. ಮಾರ್ಚ್16ರವರೆಗೆ ಉಜ್ಜಯಿನಿಯ ಮಹಾಕಾಳೇಶ್ವರ ಮಂದಿರ ಬಂದ್ ಆಗಿರಲಿಲ್ಲ. ಮಾರ್ಚ್ 17 ರವರೆಗೂ ಶಿರಡಿಯ ಸಾಯಿಬಾಬಾ ಮಂದಿರ ತೆರೆದಿತ್ತು ಮಾರ್ಚ್ 17ರವರೆಗೆ ಶನಿ ಶಿಂಗ್ನಾಪುರ ದೇವಸ್ಥಾನ ತೆರೆದಿತ್ತು. ಮಾರ್ಚ್ 18 ರವರೆಗೆ ವೈಷ್ಣೋದೇವಿ ಮಂದಿರ ಬಂದ ಆಗಿರಲಿಲ್ಲ. ಮಾರ್ಚ್ ಇಪ್ಪತ್ತರ ತನಕ ಕಾಶಿ ವಿಶ್ವನಾಥ ಮಂದಿರ ಬಂದ್ಆಗಿರಲಿಲ್ಲ. ಮುಂಬೈಯ ತುಳಜಾಭವಾನಿ ಮಂದಿರದಲ್ಲಿ 13000 ಭಕ್ತಾದಿಗಳು ಸೇರಿದ್ದರಿಂದ ಮಾರ್ಚ್ 17ರಂದು ಸದರಿ ಮಂದಿರವನ್ನು ಬಂದು ಮಾಡಬೇಕೆಂದು ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿತ್ತುಕೈಗೊಂಡಿತ್ತು. ಅಂದರೆ ನಮ್ಮ ದೇಶದ ಧಾರ್ಮಿಕ ಚಟುವಟಿಕೆಗಳು ಎಂದಿನಂತೆ ನಡೆಯುತ್ತಿದ್ದವುನಡೆಯುತ್ತಿದ್ದವು. ಮೊಟ್ಟಮೊದಲಿನ ಕೋರೋನ ಪ್ರಕರಣವು ಜನವರಿ 30ರಂದು ಕಂಡುಬಂದಿತ್ತು. ಫೆಬ್ರವರಿ 23ರಂದು ದೆಹಲಿ ಗಲಭೆಗಳು ತಾರಕಕ್ಕೇರಿದವು. ಫೆಬ್ರುವರಿ 24 ಮತ್ತು 25 ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆದು ಮಾರ್ಚ್ ಮೂರರಂದು ಸರ್ಕಾರಿ ಅಧಿಕಾರಿಗಳು ಕರೋನಾ ಬಗ್ಗೆ ಮೊದಲ ಸಭೆಯನ್ನು ನಡೆಸಿದರು. ಮಾರ್ಚ್ 9ರಂದು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆಗೆ ವ್ಯವಸ್ಥೆಮಾಡಲಾಯಿತು. ಮಾರ್ಚ್ 11ರಂದು ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ವನ್ನು ಸಾಂಕ್ರಮಿಕ ರೋಗ ವೆಂದು ಘೋಷಿಸಿತು. ಮಾರ್ಚ್ 11 ಮತ್ತು 12 ರಂದು ಮಧ್ಯಪ್ರದೇಶದಬಿಜೆಪಿ ಶಾಸಕರನ್ನು ಬಸ್ ನಲ್ಲಿ ರೆಸಾರ್ಟ್ಗೆ ಸಾಗಿಸಲಾಯಿತುಸಾಧಿಸಲಾಯಿತು. ಮಾರ್ಚ್ 13ರಂದು ಸರ್ಕಾರವು ಕೋರೋನಾ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲ ಎಂದು ಘೋಷಿಸಿತು. ಮಾರ್ಚ್ 14 ಮತ್ತು 15 ರಂದು ಬಿಜೆಪಿ ಪಕ್ಷವು ಮಧ್ಯಪ್ರದೇಶದ ಸರ್ಕಾರವನ್ನು ಬೀಳಿಸುವ ಕ್ರಿಯೆಯಲ್ಲಿ ಮಗ್ನವಾಗಿತ್ತು. ಮಾರ್ಚ್ 19ರಂದು ಮೊದಲ ಬಾರಿಗೆ ಪ್ರಧಾನಿಯವರು ಕೋರೋನ ಬಗ್ಗೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿ ಜನತಾ ಕರ್ಫ್ಯೂ ಗೆ ಕರೆ ನೀಡಿದರು. ಮಾರ್ಚ್ 20ರಿಂದ 21 ಮಧ್ಯಪ್ರದೇಶದ ರಾಜಕೀಯ ಚದುರಂಗದಾಟದ ಪ್ರಕ್ರಿಯೆ ಮತ್ತು ಅಲ್ಲಿ ಬಿಜೆಪಿ ಸರ್ಕಾರ ರಚನೆಯಾಯಿತು. ಮಾರ್ಚ್ 25ರಂದು ಸರ್ಕಾರವು ವಿಮಾನಯಾನ ರದ್ದುಪಡಿಸಿತು. ಮಾರ್ಚ್ 26 ರಿಂದ ಏಪ್ರಿಲ್ 16 ರವರೆಗೆ ಇಡೀ ದೇಶ ಲಾಕ್ ಡೌನ್ಗೆ ಒಳಗಾಯಿತು. ಅಂದರೆ ನಮ್ಮ ದೇಶ ಸಾಮಾಜಿಕವಾಗಿ ರಾಜಕೀಯವಾಗಿ ಸಾಂಸ್ಕೃತಿ ಕವಾಗಿ ಯಾವುದೇ ಭೀತಿಯಿಲ್ಲದೆ ಎಂದಿನಂತೆ ತನ್ನ ಸಹಜ ಸ್ಥಿತಿಯಲ್ಲಿ ಇತ್ತು. ಅಂತೆಯೇ ತಬ್ಲೀಗಿ ಜಮಾತ್ ರವರು ಕೂಡ ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಯಲ್ಲಿ ನಿರತರಾಗಿದ್ದರು. ಆದರೆ ಕೆಲವರ ಪ್ರಕಾರ ತಬ್ಲಿಘಿ ಜಮಾತ್ ನವರದ್ದು ಘೋರ ಅಪರಾಧ. ಮಾರ್ಚ್ 30ರ ತನಕ ದೇಶದ ನಡೆಯಿತುನಡೆಯಿತು. ಕನಿಕ ಕಪೂರ್ ಜೊತೆಯಲ್ಲಿ ಪಾರ್ಟಿ ಯಲ್ಲಿದ್ದ ದುಶ್ಯಂತ್ ಕೂಡ ಸದನದಲ್ಲಿ ಭಾಗವಹಿಸಿದ್ದರುಭಾಗವಹಿಸಿದ್ದರು. ಮಾರ್ಚ್ 23ರಂದು ಮಧ್ಯಪ್ರದೇಶದಲ್ಲಿ ಬಿಜೆಪಿಯ ಸರ್ಕಾರದ ಪ್ರಮಾಣವಚನ ಸ್ವೀಕಾರದ ಸಂದರ್ಭದಲ್ಲಿ 300 ಜನರು ಹಾಜರಿದ್ದರು. ಕೋರೋನ ಪಾಸಿಟಿವ್ ಇದ್ದ ಜನರು ಕೂಡ ಅಲ್ಲಿದ್ದರು. ಇದಕ್ಕೆ ಏನು ಹೇಳೋಣ?
ಕೊರೋನಾದ ಸಂದರ್ಭವನ್ನು ನಿಭಾಯಿಸಬೇಕಾದ ಎಲ್ಲಾ ಸಂಸ್ಥೆಗಳು ಎಲ್ಲಾ ಜವಾಬ್ದಾರಿಯುತ ಸರ್ಕಾರ ಸಿಬ್ಬಂದಿ ಎಲ್ಲರೂ ಆರೋಪದಿಂದ ಮುಕ್ತ. ಈ ಸಂದರ್ಭವನ್ನು ಯಾರ ಕುತ್ತಿಗೆಗೆ ನೇತು ಹಾಕಬೇಕು ಎಂಬುದೇ ಪ್ರಮುಖ ಪ್ರಶ್ನೆ ಯಾದಾಗ ತಬ್ಲಿಘಿ ಜಮಾತ್ನಂತಹ ಸಂಸ್ಥೆ ಎದುರಿಗೆ ಸಿಕ್ಕಾಗ ಅದಕ್ಕಿಂತ ಸಂತೋಷದ ವಿಷಯ ಇನ್ನೇನಿದೆ? ಈ ನಡುವೆ ಪ್ರಧಾನಮಂತ್ರಿಗಳ ತಾಕೀತು ಬೇರೆ. ಯಾರು ಎಲ್ಲಿದ್ದೀರಾ ಅಲ್ಲೇ ಉಳಿಯಿರಿ ಎಂದು. ಜಮಾತ್ ನವರು ಅಕ್ಷರಶಃ ಆದೇಶ ಪಾಲನೆ ಮಾಡಿ ಇಂದು ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಆದರೆ ಇವೆಲ್ಲವುಗಳನ್ನು ಮೌಲ್ಯಮಾಪನ ಮಾಡುವ ಕಾಲವೊಂದು ಬರಲಿದೆಬರಲಿದೆ.
ನಾನು ಮುಸ್ಲಿಂ ಸಮುದಾಯದ ವಕ್ತಾರ ಳಲ್ಲ. ಆದರೆ ಲಂಕೇಶರವರ ಗರಡಿಯಲ್ಲಿ ಪಳಗಿ ಇರುವುದರಿಂದ ಪತ್ರಿಕೋದ್ಯಮದಲ್ಲಿ ಲಂಕೇಶ್ ಕಾಲದಪೂರ್ವಜನ್ಮದ ಸ್ಮರಣೆ ಇರುವುದರಿಂದ ಒಂದು ವಸ್ತುನಿಷ್ಠ ವರದಿಯನ್ನು ನಿಮ್ಮ ಎದುರಿಗೆ ಇಟ್ಟಿದ್ದೇನೆ.
ಎಂದು ಪ್ರೀತಿಯಿಂದ
ಬಾನು ಮುಷ್ತಾಕ್

( ಸ್ನೇಹಿತರೆ ಲೇಖನ ಬರೆಯಬೇಕು ಎಂತಲೇ speech to text app ಅಲ್ಲಿ ಡಿಕ್ಟೇಶನ್ ಹೇಳಿದ್ದು ವ್ಯಾಕರಣ ಮತ್ತು ವಾಕ್ಯ ರಚನೆಯ ದೋಷಗಳು ಇವೆ ಟೈಪಿಸ್ಟ್ ನೆರವನ್ನು ಪಡೆದು ಸರಿಪಡಿಸಿ ಪೋಸ್ಟ್ ಮಾಡಲು ಸಾಧ್ಯವಾಗಲಿಲ್ಲ ಹೀಗಾಗಿ ದೋಷಗಳನ್ನು ಮನ್ನಿಸಿ ಸಾರಾಂಶವನ್ನು ಗ್ರಹಿಸಬೇಕು ಎಂದು ಕೋರಿಕೆ).,

Please follow and like us:
error