ಡ್ರೋಣ್ ಮೂಲಕ ನಡುಗಡ್ಡೆಯಲ್ಲಿ ಸಿಲುಕಿದ್ದವರಿಗೆ ಔಷದಿ ವಿತರಣೆ


ರಾಯಚೂರು : ಡ್ರೋಣ್ ಮೂಲಕ ನಡುಗಡ್ಡೆಯಲ್ಲಿ ಸಿಲುಕಿದ್ದವರಿಗೆ ಔಷಧಿ ವಿತರಣೆ ಮಾಡಿದ ಲಿಂಗಸೂರು ಎಸಿ. ಕೃಷ್ಣಾ ನದಿ ತೀರದ ಕರಕಲಗಡ್ಡಿಯ ನಡುಗಡ್ಡೆಯಲ್ಲಿ ಸಿಲುಕಿದ್ದವರಿಗೆ ಔಷಧಿ ಪೂರೈಕೆ ಮಾಡಿದರು. ಲಿಂಗಸಗೂರು ಎಸಿ ರಾಜಶೇಖರ್ ಡಂಬಳ್ ನೇತೃತ್ವದಲ್ಲಿ ಡ್ರೋಣ್ ಮೂಲಕ ಔಷಧಿ ವಿತರಣೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕರಕಲಗಡ್ಡೆಯಲ್ಲಿ ನಾಲ್ಕು ಜನರು ನಡುಗಡ್ಡೆಯಲ್ಲಿ ಸಿಲುಕಿ ಪರದಾಡುತ್ತಿದ್ದಾರೆ. ನಾಲ್ವರಲ್ಲಿ ತಿಪ್ಪಣ್ಣ ಎನ್ನುವವರು ಪಾರ್ಶ್ವವಾಯು ನಿಂದ ಬಳಲುತ್ತಿದ್ಧಾರೆ. ಚಿಕಿತ್ಸೆಗಾಗಿ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಎಚ್ಚೆತ್ತುಕೊಂಡ ತಾಲೂಕಾಡಳಿತದಿಂದ ೧೫ ದಿನಕ್ಕೆ ಆಗುವಷ್ಟು ಔಷಧಿ ಪೋರೈಕೆ ಮಾಡಲಾಗಿದೆ. ಜಾನುವಾರುಗಳ ರಕ್ಷಣೆಗಾಗಿ ಹೋದವರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ರು ತಿಪ್ಪಣ್ಣ, ಮೌನೇಶ, ಗದ್ದೆಪ್ಪ ಹಾಗೂ ಮಾರುತಿ ಎನ್ನುವವರು ನಡುಗಡ್ಡೆಯಲ್ಲೇ ಸಿಲುಕಿದ್ರು ಇಂದು ಸಂಜೆ ವೇಳೆಗೆ ಊಟಕ್ಕೆ ದಿನಸಿ ತಲುಪಿಸಲು ನಿರ್ಧರಿಸಲಾಗಿದೆ.

Please follow and like us:
error