ಡೆಹಾರಡೂನ್ ಮಿಲಿಟರಿ ಶಾಲೆ 8ನೇ ತರಗತಿ ಪ್ರವೇಶ ಪರೀಕ್ಷೆ : ಅರ್ಜಿ ಆಹ್ವಾನ


ಕೊಪ್ಪಳ ಜೂ.25 : ರಾಷ್ಟಿçÃಯ ಇಂಡಿಯನ್ ಮಿಲಿಟರಿ ಡೆಹಾರಡೂನ್ ಕಾಲೇಜ್ 8ನೇ ತರಗತಿ ಪ್ರವೇಶಕ್ಕಾಗಿ ಕರ್ನಾಟಕ ರಾಜ್ಯದ ಬಾಲಕರಿಗೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.
2020ನೇ ಜನೇವರಿ ಅವಧಿವೇಶನಕ್ಕಾಗಿ ಉತ್ತರಾಖಂಡ ರಾಜ್ಯದ ಡೆಹಾರಡೂನಲ್ಲಿರುವ ರಾಷ್ಟಿçÃಯ ಇಂಡಿಯನ್ ಮಿಲಿಟರಿ ಕಾಲೇಜಿನ 8ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಗಳು ಡಿಸೆಂಬರ್. 01 ಮತ್ತು 02 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿವೆ.  ಈ ಪರೀಕೆಗಾಗಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತಿÃರ್ಣರಾಗಿರುವ ವಿದ್ಯಾರ್ಥಿಗಳು 01-01-2020 ರಂತೆ 11.5 ರಿಂದ 13 ವರ್ಷದೊಳಗಿರಬೇಕು (ಅಂದರೆ ದಿನಾಂಕ 02-07-2007 ರಿಂದ 01-01-2009 ರೊಳಗೆ ಜನಿಸಿರಬೇಕು).  ಬಾಲಕರು ಮಾತ್ರ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.  ಸಂಸ್ಥೆಯ ಮುಖ್ಯ ಗುರಿ ಯುವಕರನ್ನು ದೇಶದ ಸಶಸ್ತç ಪಡೆಗೆ ಸೇರಲು ಸಿದ್ಧಗೊಳಿಸುವುದು ಹಾಗೂ ಸರ್ವರೀತಿಯ ವಿದ್ಯಾಭ್ಯಾಸ ನೀಡುವುದು.  ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಭ್ಯಾಸ ಶುಲ್ಕ ರೂ. 42,400 ಆಗಿರುತ್ತದೆ.
ವಿವರಣೆ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನೊಳಗೊಂಡ ಅರ್ಜಿ ನಮೂನೆಯನ್ನು ಕೋರಿಕೆ ಪತ್ರದ ಮೇರೆಗೆ ನಿರ್ದೆÃಶಕ ಸೈನಿಕ ಕಲ್ಯಾಣ ಮತ್ತು ಪÅನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆ, ಬೆಂಗಳೂರು 560025, ಇಲ್ಲಿಂದ ದಿ ಕಮಾಂಡೆಂಟ್, ಆರ್.ಐ.ಎಂ.ಸಿ. ಡೆಹ್ರಾಡೂನ್ (ಪೇಯಬಲ್ ಅಟ್ ಎಸ್‌ಬಿಐ ಟೆಲ್ ಭವನ್, ಡೆಹ್ರಾಡೂನ್- ಬ್ಯಾಂಕ್ ಕೋಡ್- 01576), ಇವರ ಹೆಸರಿನಲ್ಲಿ ಸೆಳೆದ ರೂ. 600 (ಸಾಮಾನ್ಯ ಅಭ್ಯರ್ಥಿಗಳಿಗೆ) ಮತ್ತು ರೂ. 555 (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ) ಪಡೆದ ಬ್ಯಾಂಕ್ ಡಿಮಾಂಡ್ ಡ್ರಾಫ್ಟ್ ಮೂಲಕ ಕಳುಹಿಸಿ ಖುದ್ದಾಗಿ/ ರಿಜಿಸ್ರ‍್ಡ ಪೋಸ್ಟ್ ದ್ವಾರ ಪಡೆಯಬಹುದಾಗಿದೆ.  ರಿಜಿಸ್ಟರ್ಡ್ ಪೋಸ್ಟ್ ಮೂಲಕ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಮೇಲೆ ತಿಳಿಸಿದ ಬ್ಯಾಂಕ್ ಡ್ರಾಪ್ಟ್ನೊಂದಿಗೆ 11” ಉದ್ದ ಮತ್ತು 9” ಅಳತೆಯ ಸೈಜಿನ ಸ್ವವಿಳಾಸದ ಕ್ಲಾತ್ ಕೋಟೆಡ್ ಲಕೋಟೆಯ ಮೇಲೆ ರೂ. 40 ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಬೇಕು.  ಲಕೋಟೆಯ ಮೇಲೆ ಅಭ್ಯರ್ಥಿಯ ಪÇರ್ಣ ಅಂಚೆ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.
ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಆಂಗ್ಲ ಭಾಷೆಯ ಜನನ ಪ್ರಮಾಣ ಪತ್ರ, ಪಾಸ್‌ಪೆÇÃರ್ಟ್ ಸೈಜಿನ 5 ಭಾವಚಿತ್ರ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರ ನೀಡಿದ ಜಾತಿ ಪ್ರಮಾಣ ಪತ್ರದ ಧೃಢಿಕರಣ ಪ್ರತಿ (ಆಂಗ್ಲ ಭಾಷೆಯ), ಪರೀಕ್ಷಾ ಪ್ರವೇಶ ಪತ್ರವನ್ನು ತ್ವರಿತ/ ನೊಂದಾಯಿತ ಅಂಚೆದ್ವಾರ ರವಾನಿಸಲು ರೂ. 40 ರ ಅಂಚೆ ಚೀಟಿ ಅಂಟಿಸಿದ ಸ್ವವಿಳಾಸ ಲಕೋಟೆ, ಶಾಲಾ ಮುಖ್ಯೊÃಪಾಧ್ಯಯರಿಂದ ಅಭ್ಯರ್ಥಿಯ ಜನ್ಮ ದಿನಾಂಕ ಮತ್ತು ಓದುತ್ತಿರುವ ತರಗತಿ ಬಗ್ಗೆ ಪಡೆದ ಪ್ರಮಾಣ ಪತ್ರ ಮೂಲ ಪ್ರತಿ ಹಾಗೂ ರಾಜ್ಯದ ವಾಸಸ್ಥಾನ ಧೃಢಿಕರಣ ಪತ್ರ (ತಹಶಿಲ್ದಾರರಿಂದ ಪಡೆದ) ಲಗತ್ತಿಸಿ ಸೆಪ್ಟೆಂಬರ್. 30 ರೊಳಗಾಗಿ ನಿರ್ದೆÃಶಕರು, ಸೈನಿಕ ಕಲ್ಯಾಣ ಮತ್ತು ಪÅನರ್ವಸತಿ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459ಕ್ಕೆ ಅಥವಾ ಸಮೀಪದಲ್ಲಿರುವ ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಬಾಗಲಕೋಟೆಯ ಸೈನಿಕ ಕಲ್ಯಾಣ ಮತ್ತು ಪÅನರ್ವಸತಿ ಇಲಾಖೆ ಉಪನಿರ್ದೆÃಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error