ಡೆಂಗ್ಯೂ ವಿರೋಧಿ ಮಾಸಾಚರಣೆ


ಕೊಪ್ಪಳ: ತಾಲೂಕಿನ ಗಬ್ಬೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲ್ಲಿ ಆರೋಗ್ಯ ಇಲಾಖೆ ವತಿಯಿಂದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮ ನಡೆಯಿತು. ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ಭೀಮೇಶ್, ಕಿರಿಯ ಆರೋಗ್ಯ ಸಹಾಯಕರಾದ ಎಸ್.ಆರ್.ಕಂಠಿಮಠ, ಶ್ವೇತಾ, ಮುಖ್ಯೋಪಾದ್ಯಾಯ ಅಶೋಕ, ಶಿಕ್ಷಕರಾದ ಮೈಲಾರಪ್ಪ ಉಂಕಿ, ಹರೀಶ, ಮುಖಂಡರಾದ ಸತ್ಯಪ್ಪ ಹರಿಜನ, ಕುಬೇರ ಮಜ್ಜಿಗಿ, ಲಕ್ಷ್ಮಣ ಕುರಿ ಇತರರು ಇದ್ದರು.