fbpx

ಡಿ.ಕೆ.ಶಿವಕುಮಾರ ಮೇಲೆ ಸಿ.ಬಿ.ಐ ದಾಳಿ ಖಂಡನೆ


ಕೊಪ್ಪಳ ಅ.೦೬: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಸಂಸದ ಡಿ.ಕೆ.ಸುರೇಶ ಅವರ ನಿವಾಸದ ಮೇಲೆ, ರಾಜ್ಯದ ಎರಡು ಕ್ಷೇತ್ರಗಳಾದ ಶಿರಾ ಮತ್ತು ರಾಜರಾಜೇಶ್ವರಿ ನಗರದ ಉಪಚುನಾವಣೆಯ ಸಂದರ್ಭದಲ್ಲಿ ದುರದ್ದೇಶಪೂರಿತ ದ್ವೇಷರಾಜಕಾರಣದ ಮೂಲಕ ದಾಳಿ ನಡೆಸಿರುವುದು ಅತ್ಯಂತ ವಿಷಾದನೀಯ ಸಂಗತಿ ಹಾಗೂ ಎ.ಜೆ(ಅಟಾರ್ನಿ ಜನರಲ್) ಅವರು ಬೇಡವೆಂದರು ಕೇಳದೆ ಮುಖ್ಯಮಂತ್ರಿಗಳು ಅನುಮತಿ ನೀಡಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದ್ವೇಷದ ರಾಜಕಾರಣ ಮಾಡುತ್ತಿವೆ. ಈ ಧೋರಣೆ ಮುಂದಿನ ದಿನಾಮಾನಗಳಲ್ಲಿ ಮುಂದುವರೆದರೆ ರಾಜ್ಯದ್ಯಂತ ಉಗ್ರವಾದ ಹೋರಾಟ ಮಾಡಲಾಗುವುದು ಹಾಗೂ ದ್ವೇಷದ ರಾಜಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಖಂಡನೀಯ ಎಂದು ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ ಅಭಿಮಾನಿಗಳ ಸಂಘ(ರಿ) ಕೊಪ್ಪಳ ಜಿಲ್ಲಾಧ್ಯಕ್ಷರಾದ ಹುಲಗಪ್ಪ.ಪಿ.ವೆಂಕಟಗಿರಿ ತಿಳಿಸಿದ್ದಾರೆ.

Please follow and like us:
error
error: Content is protected !!