ಡಿಸೆಂಬರ್. 01 ರಂದು ಗಂಗಾವತಿಯಲ್ಲಿ ಜಿಲ್ಲಾ ಮಟ್ಟದ “ವಿಶ್ವ ಏಡ್ಸ್ ದಿನ”ದ ಕಾರ್ಯಕ್ರಮ : ಡಾ. ಲಿಂಗರಾಜು 

ಕೊಪ್ಪಳ, ನ.28 (ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷ ಜಿಲ್ಲಾ ಮಟ್ಟದ “ವಿಶ್ವ ಏಡ್ಸ್ ದಿನ” ಕಾರ್ಯಕ್ರಮವನ್ನು  ಗಂಗಾವತಿ ತಾಲ್ಲೂಕಿನ ಐ.ಎಮ್.ಎ. ಹಾಲ್ ನಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಲಿಂಗರಾಜು ಟಿ. ಅವರು ತಿಳಿಸಿದರು.
ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಛೇರಿ, ಕೊಪ್ಪಳ ಇವರ ವತಿಯಿಂದ “ವಿಶ್ವ ಏಡ್ಸ್ ದಿನ’’ದ ಅಂಗವಾಗಿ ಇಂದು (ನ. 28 ರಂದು)  ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದ “ವಿಶ್ವ ಏಡ್ಸ್ ದಿನ” ಕಾರ್ಯಕ್ರಮವನ್ನು ಡಿಸೆಂಬರ್. 01 ರಂದು  ಜಿಲ್ಲೆಯ ಗಂಗಾವತಿಯಲ್ಲಿ ನಡೆಯಲಿದ್ದು, ಅಂದು ಬೆಳಗ್ಗೆ 07 ಗಂಟೆಗೆ ವಾಕ್‌ಥಾನ್ (ಜಾತಾ ನಡಿಗೆ) ಹಾಗೂ ಬೆಳಗ್ಗೆ 10 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು.   ಹೆಚ್.ಐ.ವಿ ಸೋಂಕಿನ ತಡೆಗಾಗಿ “ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿಯ ಹಂಚಿಕೆ” (“ಉಟobಚಿಟ Soಟiಜಚಿಡಿiಣಥಿ & Shಚಿಡಿeಜ ಡಿesಠಿoಟಿsibiಟiಣಥಿ“) ಎಂಬುವುದು ಈ ವರ್ಷದ ಘೋಷವಾಕ್ಯವಾಗಿದೆ.  ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಮಹೇಶ್ ಎಂ.ಜಿ ಅವರು ಮಾತನಾಡಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕವು 2008ರ ಸೆಪ್ಟೆಂಬರ್. 01 ರಂದು ಜಿಲ್ಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಒಂದು ಜಿಲ್ಲಾ ಮಟ್ಟದ ಘಟಕವಾಗಿದ್ದು, ರಾಷ್ಟ್ರೀಯ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಉದ್ದೇಶಗಳನ್ನು ಈಡೇರಿಸಲು ಕಾರ್ಯನಿರ್ವಹಿಸುತ್ತಿದೆ.  ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ, ಬೆಂಗಳೂರು ಇದರ ಮಾರ್ಗದರ್ಶನದಂತೆ ಆರೋಗ್ಯ ಮತ್ತು ಇತರೆ ಇಲಾಖೆಗಳ ಸಿಬ್ಬಂದಿಗೆ ಹೆಚ್.ಐ.ವಿ./ ಏಡ್ಸ್ ಕುರಿತು ತರಬೇತಿಗಳನ್ನು ಆಯೋಜಿಸುತ್ತದೆ. ವಿವಿಧ ಇಲಾಖೆಗಳೊಂದಿಗೆ ಸಂಯೋಜನೆಯನ್ನು ಏರ್ಪಡಿಸುತ್ತದೆ ಹಾಗೂ ಜಿಲ್ಲೆಯಲ್ಲಿ ಹೆಚ್.ಐ.ವಿ./ ಏಡ್ಸ್ ಕುರಿತ ಕಾರ್ಯಕ್ರಮದ ಮೇಲ್ವಿಚಾರಣೆ ನಡೆಸುತ್ತದೆ.  ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದಿಂದ ಮಾಹಿತಿ, ಶಿಕ್ಷಣ ಮತ್ತು ಸಂವಹನ ಬೀದಿ ನಾಟಕ, ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ಅಭಿಯಾನ, ಪದವಿ ಕಾಲೇಜುಗಳಲ್ಲಿ  ರೆಡ್ ರಿಬ್ಬನ್ ಕ್ಲಬ್ ಮೂಲಕ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆಯನ್ನು ಏರ್ಪಡಿಸುವುದು, ರಕ್ತದಾನ ಶಿಬಿರ ಏರ್ಪಡಿಸುವುದು, ವಿದ್ಯಾರ್ಥಿಗಳಿಗೆ ಹೆಚ್.ಐ.ವಿ/ ಏಡ್ಸ್ ಕುರಿತು ತರಬೇತಿ ನೀಡುವುದು ಸ್ಪರ್ಧೆಗಳನ್ನು ಹಮ್ಮಿಕೊಳ್ಳುವುದು (ಪ್ರಬಂಧ ಸ್ಪರ್ಧೆ, ಪೋಸ್ಟರ್ ಮೇಕಿಂಗ್, ಕಿರು ನಾಟಕ, ಚರ್ಚಾಸ್ಪರ್ಧೆ, ಇತ್ಯಾದಿ). ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು, ಹೆಚ್.ಐ.ವಿ ಸೋಂಕನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಸೊನ್ನೆಗೆ ತರುವ ಪ್ರಯತ್ನಗಳನ್ನು ಮಾಡುತ್ತಿದೆ.  ಆದ್ದರಿಂದ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳನ್ನು ಸಂಪರ್ಕಿಸಿ ಅಲ್ಲಿರುವ ಅಧಿಕಾರಿಗಳು, ಸಿಬ್ಬಂಧಿಗಳಿಗೆ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ, ವಲಸೆ ಕಾರ್ಮಿಕರಿಗೆ ಹೆಚ್.ಐ.ವಿ./ಏಡ್ಸ್ ಕುರಿತು ಸುಮಾರು ಒಂದು ಘಂಟೆಗಳ ಕಾಲ ಉಚಿತ ತರಬೇತಿ ನೀಡುತ್ತಿದ್ದು, ತರಬೇತಿಗಳಲ್ಲಿ ಹೆಚ್.ಐ.ವಿ./ಏಡ್ಸ್ ಮೂಲಮಾಹಿತಿ, ಕಳಂಕ ತಾರತಮ್ಯ, ಜಿಲ್ಲೆಯಲ್ಲಿರುವ ಹೆಚ್.ಐ.ವಿ. ಸ್ಥಿತಿಗತಿ ಹಾಗೂ ಹೆಚ್.ಐ.ವಿ. ಸೋಂಕಿತರಿಗೆ/ಬಾಧಿತರಿಗೆ ಇರುವ ಸಾಮಾಜಿಕ ಸವಲತ್ತುಗಳ ವಿಚಾರವಾಗಿ ತರಬೇತಿಯನ್ನು ನೀಡಿ ಅವರಿಂದ ಇನ್ನೂಳಿದ ಅಧಿಕಾರಿಗಳು, ಸಿಬ್ಬಂಧಿಗಳು, ಸ್ನೇಹಿತರು ಹಾಗೂ ಅವರ ಕುಟುಂಬದವರಿಗೆ ಈ ವಿಚಾರವನ್ನು ತಿಳಿಸಲು ಅನುವು ಆಗುವಂತೆ ತರಬೇತಿಯನ್ನು ನೀಡಲಾಗುತ್ತಿದೆ. ಕಳೆದ 2019-20 ನೇ ಸಾಲಿನಲ್ಲಿ ಸ್ವ-ಸಹಾಯ ಸಂಘಗಳು, ಹೆಚ್.ಆರ್.ಜಿ., ಆಟೋ ಡ್ರೈವರ್, ಟ್ರಕ್ರ‍್ಸ್(ವಾಹನಚಾಲಕರು), ಮೈಗ್ರೇಂಟ್ಸ್ (ವಲಸಿಗರು), ವಿವಿಧ ಇಲಾಖೆಗಳ ಸಿಬ್ಬಂದಿಗಳಿಗೆ ಒಟ್ಟು 86 ಕಾರ್ಯಕ್ರಮಗಳನ್ನು ನೀಡಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
Please follow and like us:
error