ಡಾ.ಬಿ.ಆರ್.ಅಂಬೇಡ್ಕರವರ ಬಗ್ಗೆ ಹಗುರ ಮಾತು ಮುಖ್ಯ ಶಿಕ್ಷಕ ಸೇವೆಯಿಂದ ಅಮಾನತು

ವಿಜಯಪುರ : ವಿಜಯಪುರ ಜಿಲ್ಲಾ ಸಿಂದಗಿ ತಾಲೂಕ ಮಾಡಬಾಳ ಶಾಲೆಯ ಮುಖ್ಯ ಶಿಕ್ಷಕನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇಂದು ಬೆಳಿಗ್ಗೆ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಅಂಬೇಡ್ಕರವರ ಫೋಟೋ ಯಾಕೆ ಇಟ್ಟಿಲ್ಲ ಎಂದು ಸ್ಥಳಿಯರು ಪ್ರಶ್ನೆ ಮಾಡಿದ್ದಕ್ಕೆ ಉಡಾಪೆಯಾಗಿ ಮಾತನಾಡಿದ್ದ ಮುಖ್ಯ ಶಿಕ್ಷಕ ಎಸ್. ಎಸ್. ಮೋಕಾಶಿ ವಿಡಿಯೋ ರಾಜ್ಯಾದ್ಯಂತ ವೈರಲ್ ಆಗಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ  ವಿಜಯಪುರದ  ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮುಖ್ಯ ಶಿಕ್ಷಕ ಎಸ್. ಎಸ್. ಮೋಕಾಶಿಯನ್ನು ಸೇವೆಯಿಂದ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Please follow and like us:
error