ಟೈಗರ್ ಸಲ್ಮಾನ್ ಖಾನ್ : ದೇಶಭಕ್ತಿ ಮತ್ತು ಭಯೋತ್ಪಾದನೆ !

-ರಾಹುಲ ಬೆಳಗಲಿ

ಸಲ್ಮಾನ್ ಖಾನ್ ಬಗ್ಗೆ ನನ್ನದೆ ಆದ ಕೆಲವಷ್ಟು ತಕರಾರುಗಳಿವೆ. ಇದು ಇತ್ತೀಚಿನದ್ದಲ್ಲ, ಕಾಲೇಜು ದಿನಗಳಿಂದಲೂ. ಗೆಳೆಯ ರವಿ ಜೊತೆ ಸಲ್ಮಾನ್ ವಿಷಯದಲ್ಲಿ ಅದೆಷ್ಟು ಜಗಳವಾಡಿದ್ದೇನೋ ಗೊತ್ತಿಲ್ಲ. ಶಾರುಖ್ ವಿಷಯದಲ್ಲಿ ಆತ ನನ್ನೊಂದಿಗೆ ಜಗಳವಾಡಿದ್ದು ಕಡಿಮೆಯೇನಿಲ್ಲ. ಆದರೆ ವರ್ಷಗಳ ಹಿಂದೆ ‘ಭಜರಂಗಿ ಭಾಯಜಾನ್’ ನೋಡಿದಾಗ ಮತ್ತು ವರ್ಷದ ಮೊದಲ ದಿನ “ಟೈಗರ್ ಜಿಂದಾ ಹೈ” ನೋಡಿದಾಗ, ಸಲ್ಮಾನ್ ಬಗ್ಗೆ ತಕರಾರಿನಲ್ಲಿ ಕೊಂಚ ರಿಯಾಯಿತಿಕೊಡಬೇಕು ಅನ್ನಿಸಿತು.

ಹಾಗಂತ ಸಲ್ಮಾನಗೆ ನಾನು ಮನಸೋಇಚ್ಛೆ ಹೊಗಳುತ್ತಿಲ್ಲ. ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಸಲ್ಮಾನ್ ಬಗ್ಗೆ ಹಲವು ಆರೋಪಗಳಿವೆ. ಕ್ರಿಮಿನಲ್ ಪ್ರಕರಣಗಳೂ ಸಹ ಇವೆ. ಈ ಕಾರಣದಿಂದ ಆತನ ಬಗ್ಗೆ ಕೆಲವರು ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಅದರ ಅರಿವು ನನಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿತ್ರಗಳ ಆಯ್ಕೆಗೆ ಸಂಬಂಧಿಸಿದಂತೆ ಆತನಲ್ಲಿ ಸೂಕ್ಷ್ಮ ಬದಲಾವಣೆ ಗಮನಿಸಿದ್ದೇನೆ. ವಿಶೇಷವಾಗಿ ಭಜರಂಗಿ ಮತ್ತು ಟೈಗರ್ ಜಿಂದಾ ಹೈ ನೋಡಿದ ಬಳಿಕ.

ವರ್ಷಗಳ ಹಿಂದೆ ಚಿತ್ರಗಳು ಮತ್ತು ಪಾತ್ರಗಳ ಆಯ್ಕೆಗೆ ಸಂಬಂಧಿಸಿದಂತೆ ಸಲ್ಮಾನ್ ವಿಫಲ ಆಗುತ್ತಿರುವ, ಗಾಂಭೀರ್ಯತೆ ಕಳೆದುಕೊಳ್ಳುತ್ತಿರುವ ವಿಷಯ ಸುಲಭವಾಗಿ ಗೊತ್ತಾಗುತಿತ್ತು. ಆತ ಅಭಿನಯಿಸಿದ ಪಾತ್ರಗಳನ್ನು ನೋಡಲು ಕಿರಿಕಿರಿ ಅನ್ನಿಸುತಿತ್ತು. ಆದರೆ ಭಜರಂಗಿ ಮತ್ತು ಟೈಗರ್ ನೋಡಿದ ಬಳಿಕ ಸಲ್ಮಾನ್ ಕೊಂಚ ಗಂಭೀರ, mature ಪಾತ್ರ ಅಭಿನಯಿಸುತ್ತಿದ್ದಾರೆ ಅನ್ನಿಸುತ್ತಿದೆ.

ಟೈಗರ್ ಜಿಂದಾ ಹೈ ಚಲನಚಿತ್ರದ ಪೋಸ್ಟರ್ ನೋಡಿದರೆ, ಅದೊಂದು ಸಾಮಾನ್ಯ ಕಮರ್ಷಿಯಲ್ ಚಿತ್ರ ಅನ್ನಿಸಬಹುದು. ಚಿತ್ರ ನೋಡುವವರೆಗೆ ನನಗೂ ಅದೇ ಭಾವನೆಯಿತ್ತು. ಆದರೆ ಸಿನಿಮಾ ನೋಡಿದ ಬಳಿಕ ನನಗೆ ಹಚ್ಚು ಕಾಡಿದ್ದು, ಚಿತ್ರದ ಪ್ರತಿಯೊಂದು ದೃಶ್ಯದಲ್ಲಿ ಕಾಣಸಿಗುವ ಇಸ್ಲಾಮಿಕ್ ದೇಶಗಳ ಪರಿಸ್ಥಿತಿ ಮತ್ತು ಅಲ್ಲಿನ ಜನರು ಅನುಭವಿಸುತ್ತಿರುವ ನರಕಯಾತನೆ. ಕ್ರೌರ್ಯ, ಧಾಮರ್ಿಕ ಮೂಲಭೂತವಾದ, ಮಾನವ ಬಾಂಬ್, ಸಿಡಿಮದ್ದು-ಗುಂಡುಗಳಿಂದ ಕಂಗೆಟ್ಟ ಜನಜೀವನ, ಕಟ್ಟಡದ ಅವಶೇಷಗಳು, ಉಗ್ರರು ನೀಡುವ ಚಿತ್ರಹಿಂಸೆ ಮತ್ತು ಸಣ್ಣಪುಟ್ಟ ನೆಪವೊಡ್ಡಿ ಅವರು ಪ್ರಾಣ ತೆಗೆದುಕೊಳ್ಳುವ ಪರಿ.

ಬಾಲಿವುಡ್ನಲ್ಲಿ ಈ ಚಿತ್ರ ನಿರ್ಮಿತವಾದರೂ ಹಾಲಿವುಡ್ ಚಿತ್ರಗಳ ಮಾದರಿಯಲ್ಲೇ ಸಿದ್ಧವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೆಲ ಕಡೆ ಅತಿರಂಜನೀಯ ಅನ್ನಿಸಬಹುದು ಮತ್ತು ಕಲ್ಪನೆಗೂ ನಿಲುಕದಿರಬಹುದು. ಆದರೆ ಪ್ರತಿಯೊಂದು ದೃಶ್ಯವೂ ಕುತೂಹಲ ಕೆರಳಿಸುತ್ತದೆ. ಸಾಹಸಮಯ ದೃಶ್ಯಗಳು ರೋಮಾಂಚನ ಉಂಟು ಮಾಡುತ್ತದೆ.

ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನೆಯನ್ನು ಸಮರ್ಥವಾಗಿ ಎದುರಿಸಿ, ಅದನ್ನು ಬಗ್ಗುಬಡಿಯುವ ಸಂದೇಶವೂ ಇದರಲ್ಲಿದೆ. ಭಯೋತ್ಪಾದನೆ ತಮ್ಮ ಮೊದಲು ಶತ್ರುವೆಂದು RAW ಮತ್ತು ISI ಜೊತೆಗೂಡಿ ಜಂಟಿ ಕಾಯರ್ಾಚರಣೆ ನಡೆಸುವುದು, ಶುಶ್ರೂಷಕಿಯರನ್ನು ಭಯೋತ್ಪಾದಕರ ಜಾಲದಿಂದ ಪಾರು ಮಾಡುವುದು, ಗುಂಡೇಟಿಗೆ ಸಾಯುವ ಸ್ಥಿತಿಯಲ್ಲಿರುವ ಭಾರತೀಯ ತನ್ನ ರಾಷ್ಟ್ರಧ್ವಜವನ್ನು ಪಾಕಿಸ್ತಾನಿ ಕೈಯಲ್ಲಿ ನೀಡುವುದು, ಪಾಕಿಸ್ತಾನಿ ಭಾರತದೇಶದ ಧ್ವಜವನ್ನು ಹೆಮ್ಮೆಯಿಂದ ಹಾರಿಸುವುದು, ಅದರೊಂದಿಗೆ ಪಾಕಿಸ್ತಾನ್ ಧ್ವಜವೂ ಸಮವಾಗಿ ಎತ್ತರಕ್ಕೆ ಹಾರುವುದು
ಮನಸ್ಸಿಗೆ ಖುಷಿ ಕೊಡುತ್ತದೆ. ದೇಶಭಕ್ತಿಯ ಭಾವನಾತ್ಮಕತೆಯ ತಳಹದಿ ಮೇಲೆ ಭಾರತ-ಪಾಕಿಸ್ತಾನ್ ಪುನಃ ಒಂದಾಗಿಬಿಟ್ಟರೆ, ಯಾರೂ ಸಹ ತಮ್ಮ ವಿರುದ್ಧ ಸೆಣಸಲಾರರು ಮತ್ತು ಕಣ್ಣೆತ್ತಿ ನೋಡಲಾರರು ಎಂಬ ಸಂದೇಶವೂ ನೀಡುತ್ತದೆ. ಸೌಹಾರ್ದ ಮತ್ತು ಸಹಬಾಳ್ವೆಯ ಭಾವ ಮೂಡಿಸುತ್ತದೆ.

ಭಾರತ ಮತ್ತು ಪಾಕಿಸ್ತಾನ್ ನಡುವೆ ಕಾಶ್ಮೀರದಿಂದ ಆರಂಭಗೊಂಡು ಪ್ರತಿ ಹಂತದಲ್ಲೂ ಮತ್ತು ವಿಷಯದಲ್ಲೂ ಹಲವು ರೀತಿಯ ಸಮಸ್ಯೆಗಳಿವೆ. ಎಂದಿಗೂ ಬಗೆಹರಿಯಲಾರವು ಎಂಬ ಪರಿಸ್ಥಿತಿಯೂ ಇದೆ. ಆದರೆ ಟೈಗರ್ನಂತಹ ಚಿತ್ರಗಳು ಎರಡೂ ದೇಶಗಳ ನಡುವೆ ಸೌಹಾರ್ದ ಭಾವ ಮೂಡಿಸುವ ಪ್ರಯತ್ನ ಮಾಡುತ್ತಿರುವುದು ಖುಷಿ ಕೊಡುತ್ತವೆ.

52ರ ವಯಸ್ಸಿನಲ್ಲೂ ಸಲ್ಮಾನ್ ಯುವ ಸೈನಿಕನಂತೆ ಅಭಿನಯಿಸಿರುವುದು ಅಚ್ಚರಿ ಮೂಡಿಸಿದರೆ, ಕತ್ರಿನಾ ಕೈಫ್ ತಾನು ಗ್ಲಾಮರ್ ಗೊಂಬೆಯಲ್ಲ ಎಂದು ಸಾಬೀತುಪಡಿಸಿದ್ದಾರೆ. ಪರೇಶ್ರವಾಲ್, ಗಿರೀಶ್ ಕಾನರ್ಾಡರದ್ದು ಮನೋಜ್ಞ ಅಭಿನಯ.

ಸಲ್ಮಾನ್, ಕತ್ರಿನಾ ಅಭಿಮಾನಿಯಾಗಿ ಅಲ್ಲದಿದ್ದರೂ ಒಮ್ಮೆ ಈ ಚಿತ್ರ ನೋಡಬೇಕು. ಇಸ್ಲಾಮಿಕ್ ದೇಶದಲ್ಲಿನ ಪರಿಸ್ಥಿತಿ ಅರಿಯಲು, ಅಲ್ಲಿನ ಜನರು ಪಾಡು ಎಂಥದ್ದು ತಿಳಿಯಲು ಮತ್ತು ಎರಡೂ ದೇಶಗಳ ಒಂದುಗೂಡಿ ಸಮರ್ಥವಾಗಿ ಎದುರಿಸಿದರೆ, ಭಯೋತ್ಪಾದನೆಗೆ ಹೇಗೆ ತಕ್ಕ ಉತ್ತರ ನೀಡಬಹುದು ಎಂಬುದನ್ನು ಚಿಂತಿಸಲು ಈ ಚಿತ್ರ ಒಮ್ಮೆ ನೋಡಬೇಕು.


-ರಾಹುಲ ಬೆಳಗಲಿ

Please follow and like us:
error