ಟಿಪ್ಪುಸುಲ್ತಾನನಿಗೆ ಭಾರತರತ್ನ ಕೊಡಿ ಅಂತಾರೆ- ಜಗದೀಶ್ ಶೆಟ್ಟರ್ 

ಸಾವರ್ಕರ ಜೊತೆ ಟಿಪ್ಪುಸುಲ್ತಾನ್ ಥಳಕು ಹಾಕಿದ ಸಚಿವ

ಕೊಪ್ಪಳ  :

ಹುಬ್ಬಳ್ಳಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಗಮನಕ್ಕೆ ತಂದು ಸೂಕ್ತ ತನಿಖೆ ಮಾಡಿಸ್ತೀವಿ ಅಂತಾ ಮಾಜಿ ಸಿಎಂ, ಸಚಿವ ಜಗದೀಶ್ ಶೆಟ್ಟರ್ ಹೇಳಿದ್ರು.. ಕೊಪ್ಪಳದಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಜೊತೆ ಇನ್ನೂ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ.. ಈ ಹಿಂದೆ ಸದನದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನುಸುಳಿದ್ದಾರೆ ಎಂದು ಗೃಹಮಂತ್ರಿಯಾಗಿದ್ದ ಜಿ.ಪರಮೇಶ್ವರ ಗಮನಕ್ಕೆ ತರಲಾಗಿತ್ತು. ಅವರ ನಿರ್ಲಕ್ಷ್ಯವೇ ಇದಕ್ಕೇಲ್ಲಾ ಕಾರಣವಾಗಿದೆ. ಈ ಬಗ್ಗೆ ತನಿಖೆ ಮಾಡಿಸ್ತೀವಿ ಎಂದ್ರು. ಇನ್ನೂ ಸ್ವಾತಂತ್ರ ಹೋರಟಗಾರ ವೀರ ಸಾವರ್ಕರ್ ವಿರುದ್ದ ಮಾತನಾಡುತ್ತಿರೋ ಸಿದ್ದರಾಮಯ್ಯ, ಕೃಷ್ಣಬೈರೆಗೌಡ, ದಿನೇಶ್ ಗುಂಡುರಾವ್ ಗೆ ನಾಚಿಕೆ-ಮಾನ ಮರ್ಯಾದೆ ಇದೇಯಾ ಎಂದು ಪ್ರಶ್ನೆಸಿದ ಶೆಟ್ಟರ್ , ವೀರ ಸಾವರ್ಕರ್ ದೇಶಕ್ಕಾಗಿ ಪ್ರಾಣವನ್ನೆ ಮುಡುಪಾಗಿಟ್ಟಿದ್ದಾರೆ. ಆದ್ರೆ ಸ್ವಾತಂತ್ರ ಹೋರಟಗಾರರನ್ನು ಬಿಟ್ಟು, ಇವರೇಲ್ಲಾ ನಾಳೆ ದೇಶ ವಿರೋದಿ ಟಿಪ್ಪುಸುಲ್ತಾನಿಗೆ ಭಾರತರತ್ನ ಕೊಡಿ ಅಂದ್ರೂ ಅಚ್ಚರಿಲ್ಲ ಎಂದ್ರು. ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ಕೊಡಬೇಕು ಎಂಬುದರಲ್ಲಿ ಎರಡು ಮಾತಿಲ್ಲ, ಆದ್ರೆ ಯುಪಿಎ 10 ವರ್ಷ ಅಧಿಕಾರದಲ್ಲಿದ್ದಾಗ ಸಿದ್ದಗಂಗಾ ಶ್ರೀಗಳಿಗೆ ಏಕೆ ಭಾರತ ರತ್ನ ಕೊಡಲಿಲ್ಲ, ಆಗ ಕಾಂಗ್ರೇಸ್ ನಾಯಕರು ಮಲಗಿಕೊಂಡಿದ್ದೀರಾ ಎಂದು ವಾಗ್ದಾಳಿ ನಡೆಸಿದ್ರು.

https://youtu.be/kf6IgmAjEqQ

 

 

Please follow and like us:
error