ಜೆಡಿಎಸ್ ಪಕ್ಷ ಸಂಘಟನೆಗೆ ಮುಂದಾಗಿ – ವೆಂಕಟರಾವ್ ನಾಡಗೌಡ್ರು

 

ಕೊಪ್ಪಳ :  ಪಕ್ಷ ಭೂತ ಮಟ್ಟದ ಸಂಘಟನೆ ಆಗಬೇಕಿದೆ ಪ್ರತಿ ಭೂತನಲ್ಲಿ ಕನಿಷ್ಠ ೧೦ ಜನ ಸದಸ್ಯರಿರುವಂತೆ ಅದರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿಮಾಡಿ ಸಂಘಟನೆಯನ್ನು ಚುರುಕುಗೊಳಿಸಬೇಕಿದೆ. ಮುಂಬರುವ ಚುನಾವಣೆಯಗಳಲ್ಲಿ ನಮ್ಮ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿ ಮತ್ತೇ ಹೆಚ್.ಡಿ. ಕುಮಾರಣ್ಣನವರನ್ನ ಮುಖ್ಯಮಂತ್ರಿಯನ್ನಾಗಿ ಮಾಡುವುದರಿಂದ ರಾಜ್ಯಕ್ಕೆ ಒಳ್ಳೆಯ ಜನಪರ ಕೆಲಸಗಳು ಆಗಲಿವೆ ನಗರದ ಮಾಹಾಂತಯ್ಯನಮಠ ಕಲ್ಯಾಣ ಮಂಟಪ್ಪದಲ್ಲಿ ಜಿಲ್ಲಾ ಜನತಾದಳ ಜಾತ್ಯಾತೀತ ಪಕ್ಷ ಸಂಘನೆ ಸಭೆಯ ಕಾರ್ಯಕ್ರಮವನ್ನು ಮಾಜಿ ಸಚಿವರು ಶಾಸಕರಾದ ವೆಂಕಟರಾವ್ ನಾಡಗೌಡ್ರು ಉದ್ಘಾಟಿಸಿ ಮಾತನಾಡಿ, ಕೊಪ್ಪಳ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಚಾಲನೆ ನೀಡಿದರು

ಮುಂಬರುವ ಚುನಾವಣೆಗಳಿಗೆ ಸ್ಪರ್ಧೇ ಮಾಡಲು ಬಯಸುವವರು ಪತ್ರದ ಮೂಲಕ ವೀಕ್ಷಕರ ಗಮನಕ್ಕೆ ತರಬೇಕು ಅದನ್ನು ನಾವುಗಳು ರಾಜಾಧ್ಯಕ್ಷರು ಹಾಗೂ ಕುಮಾರಣ್ಣನವರ ಗಮನಕ್ಕೆ ತಂದು ಚರ್ಚಿಸಿ ಸೂಕ್ತ ತಿರ್ಮಾನವನ್ನು ತಗೆದುಕೊಳ್ಳುತ್ತೇವೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ವೀಕ್ಷಕರು ಮತ್ತು ಶಾಸಕರಾದ ರಾಜಾವೆಂಕಟಪ್ಪ ನಾಯಕ ಮಾತನಾಡಿ, ರಾಜಕೀಯದಲ್ಲಿ ಸೋಲು ಗೆಲವು ಸರ್ವೆ ಸಾಮಾನ್ಯ ಈ ಹಿಂದೆ ನಾನು ಎರಡು ಭಾರಿ ಸೋಲನ್ನು ಅನುಭವಿಸಿ ಮೂರನೇ ಭಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಕಾರಣ ಸೋತೆನೆಂದು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ ದಿನನಿತ್ಯ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಅವರ ಕೆಲಸ ಕಾರ್ಯಾಗಳನ್ನು ಮಾಡುತ್ತಾ ನಿರಂತರ ಸಂಪರ್ಕವನ್ನು ಹೊಂದಿ ಈ ಸ್ಥಾನಕ್ಕೆ ಬಂದಿದ್ದೇನೆ. ಈಗಾಗಿ ನೀವುಗಳು ಸೋತೆನೆಂದು ಮನೆಯಲ್ಲಿ ಕೂಡದೇ ನಿತ್ಯವೂ ಜನರ ಸಂಪರ್ಕದಲ್ಲಿದ್ದು, ಅವರ ಕೆಲಸ ಕಾರ್ಯಗಳಲ್ಲಿ ಭಾಗಿಯಾದಲ್ಲಿ ಮಾತ್ರ ಶಾಸಕರಾಗಲು ಸಾಧ್ಯ ಎಂದರು.
ನಂತರ ಮಾಜಿ ಸಚಿವ ಎಮ್.ಎನ್, ನಭೀ, ವೀಕ್ಷಕರಾದ ತಿಮ್ಮಯ್ಯ ಪೂರ್ಲೇ, ಕರಿಯಮ್ಮ ನಾಯಕ ಮಾತನಾಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ವೀರೇಶ ಮಾಹಂತ್ಯನಮಠ, ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ರಾಜ್ಯಕಾರ್ಯದರ್ಶಿ ಕೆ.ಎಂ, ಸೈಯದ್, ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ, ನಗರಸಭೆ ಸದಸ್ಯ ಚನ್ನಪ್ಪ ಕೊಟ್ಯಾಳ, ಮುಖಂಡರಾದ ವೀರನಗೌಡ ಬಳೂಟಗಿ, ಅಶೋಕ ಉಮಳೂಟಗಿ, ಮಂಜುನಾಥ, ಸುವರ್ಣ ತಾವರಗೇರಾ, ಬುಲೇಟಗೌಡ್ರು, ಬಾಲಪ್ಪ, ವಿಜಯಸ್ವಾಮಿ, ಬೀರಪ್ಪ, ಮಹೆಮೂದ್ ಹುಸೇನ್, ಅಯ್ಯೂಬ್ ಅಡ್ಡೆವಾಲೆ, ದೇವೇಂದ್ರಗೌಡ ಜಿರ್ಲಿ, ಮಲ್ಲಿಕಾರ್ಜುನಗೌಡ, ಬಸವರಾಜ ನಾಯಕ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

 

 

Please follow and like us:
error