ಜೆಡಿಎಸ್ ಕಾಂಗ್ರೆಸ್ ಮೈತ್ರಿ ಪ್ರಚಾರ

ಕೊಪ್ಪಳ : ಏ.೨೦, ನಗರದ ವಿವಿಧ ವಾರ್ಡಗಳಲ್ಲಿ ಲೋಕಸಭಾ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಪರ ಮತಯಾಚನೆ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ವೀಕ್ಷಕ ಸಿ.ಎಂ. ನಾಗರಾಜ ಮಾತನಾಡಿ, ಕೇಂದ್ರಸರ್ಕಾರವು ಈ ಹಿಂದೆ ೨೦೧೪ರಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಯಾವೊಂದು ಕೆಲಸವನ್ನು ಸರಿಯಗಿ ಮಾಡಿರುವುದಿಲ್ಲ ಮತ್ತು ಮೋದಿಯವರು ಹೇಳಿದ ಪ್ರತಿಯೊಬ್ಬ ಬಿಪಿಎಲ್ ಕಾರ್ಡುದಾರರ ಖಾತೆಗೆ ೧೫ ಲಕ್ಷ ರೂಪಾಯಿಗಳನ್ನು ಜಮಾ ಮಾಡುತ್ತೇವೆ ಮತ್ತು ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆಯನ್ನು ಕೊಟ್ಟಿದ್ದ ಮೋದಿಯವರು ಭರವಸೆಯಾಗಿಯೇ ಉಳಿಸಿದ್ದಾರೆ ಮತ್ತು ರೈತರಿಗೆ, ಕೃಷಿ ಕಾರ್ಮಿಕರಿಗೆ ಹಿಂದುಳಿದ ವರ್ಗದವರಿಗೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಯಾವುದೇ ಕೊಡುಗೆ ನೀಡದೆ ಕಾಲ ಹರಣಮಾಡಿದ್ದಾರೆ. ಮತ್ತು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ ಎಲ್‌ಕೆ ಅಡ್ವಾನಿಯವರನ್ನು ಮರೆತು ಮೂಲೆಗುಂಪು ಮಾಡಿದ್ದಾರೆ. ಇನ್ನೂ ಬಿಜೆಪಿಗೆ ಮತ ಹಾಕುವವರನ್ನು ನೆನಪಿನಲ್ಲಿ ಇಟ್ಟು ಕೊಳ್ಳುತ್ತಾರಾ ಎಂದು ಪ್ರಶ್ನೇ ಮಾಡಿದರು.
ಹೀಗಾಗಿ ರಾಜ್ಯದಲ್ಲಿ ಮೈತ್ರಿ ಸರ್ಕಾರದ ಆಡಳಿತಕ್ಕೆ ರಾಜ್ಯದ ಜನತೆ ಬೆಂಬಲವನ್ನು ನೀಡುತ್ತಿದ್ದು ೨೮ ಕ್ಷೇತ್ರದಲ್ಲಿ ಜೆಡಿಎಸ್ ೫, ಕಾಂಗ್ರೆಸ್ ೧೪ ಒಟ್ಟಾಗಿ ೧೯ ಕ್ಷೇತ್ರದಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳರವರಿಗೆ ಜಿಲ್ಲೆಯ ಜೆಡಿಎಸ್ ಪಕ್ಷವು ಸಂಪೂರ್ಣ ಬೆಂಬಲ ನೀಡಿದೆ. ಕ್ಷೇತ್ರದಲ್ಲಿ ಸುಮಾರು ಒಂದುವರೆ ಲಕ್ಷ ಮತಗಳಿದ್ದು, ರಾಜಶೇಖರ ಹಿಟ್ನಾಳರವರು ೮೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಭಾರಿಸಲಿದ್ದಾರೆ ಎಂದು ಹಿಟ್ನಾಳ ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ, ಕಾರ್ಯಧ್ಯಕ್ಷ ವೀರೇಶ ಮಹಾಂತಯ್ಯನಮಠ, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸೈಯದ್, ವಕ್ತಾರ ಮೌನೇಶ ಎಸ್. ವಡ್ಡಟ್ಟಿ, ನಗರಸಭೆ ಸದಸ್ಯರಾದ ಅಮ್ಜದ ಪಟೇಲ್, ಚನ್ನಪ್ಪ ಕೊಟ್ಯಾಳ, ಮುಖಂಡರಾದ ಮಾನ್ವಿ ಪಾಷಾ, ಕಾಟನ ಪಾಷಾ, ಅಯೂಬ ಅಡ್ಡೇವಾಲೆ, ವೆಂಕಟೇಶ ಬೆಲ್ಲಪ್ಪ, ಶಫಿ ಗಾರ್ಮೇಂಟ್ಸ್, ಸಲೀಂ ಅಳವಂಡಿ, ಸಿ.ಎಂ. ಹಿರೇಮಠ, ಮಂಜುನಾಥ ಸೊರಟೂರು, ಭಸೀರ, ಫಯಾಜ್, ಕಲಿಲ, ಮಾರುತಿ ಕಾರಟಗಿ, ಶಿವಮೂರ್ತಿ ಗುತ್ತೂರು, ವಿಜಯಸ್ವಾಮಿ ಬಿಸರಳ್ಳಿ ಹಾಗೂ ಎಲ್ಲಾ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

Please follow and like us:
error