ಜೆಎನ್ ಯು ಮೇಲಿನ ಗೂಂಡಾ ದಾಳಿ ಖಂಡಿಸಿ ಪ್ರತಿಭಟನೆ: ದೀಪಿಕಾ ಪಡುಕೋಣೆ ಭಾಗಿ

ಹೊಸದಿಲ್ಲಿ: ಜೆಎನ್ ಯು ಮೇಲೆ ನಡೆದ ಗೂಂಡಾ ದಾಳಿಯನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಭಾಗವಹಿಸಿದ್ದಾರೆ.

ಕ್ಯಾಂಪಸ್ ನೊಳಗೆ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬೆಂಬಲ ಸೂಚಿಸಲು ಮತ್ತು ಘಟನೆಯನ್ನು ಖಂಡಿಸಲು ದೀಪಿಕಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

ಇದಕ್ಕೂ ಮೊದಲು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ , ದೀಪಿಕಾ ಪಡುಕೋಣೆ” ಸಾಮಾಜಿಕವಾಗಿ ನಾವ್ಯಾರೂ ಭೀತಿಗೊಂಡಿಲ್ಲ ಎನ್ನುವುದು ಹೆಮ್ಮೆಯ ವಿಚಾರ. ಜನ ಬೀದಿಗಿಳಿದಿರುವುದು ಒಳ್ಳೆಯ ವಿಚಾರ. ಜನ ತಮ್ಮ ಅಭಿಪ್ರಾಯವನ್ನು ಗಟ್ಟಿಧ್ವನಿಯಲ್ಲಿ ಬೀದಿಯಲ್ಲಾಗಲೀ, ಮನೆಯಿಂದಾಗಲೀ, ವ್ಯಕ್ತಪಡಿಸಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ. ಅವರ ಬಗ್ಗೆ ಹೆಮ್ಮೆ ಎನಿಸುತ್ತಿದೆ” ಎಂದು ಹೇಳಿದ್ದರು.

Please follow and like us:
error