ಎಸ್ಸೆಸ್ಸೆಲ್ಸಿ ಪರೀಕ್ಷೆಯ ದಿನಾಂಕವನ್ನು ಕರ್ನಾಟಕ ರಾಜ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದ್ದಾರೆ. ಜೂನ್ 14, 2021ರಿಂದ ಜೂನ್ 25, 2021ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಫೆಬ್ರವರಿ ೧ನೇ ತಾರೀಕಿನಿಂದ 6ನೇ ತರಗತಿಯಿಂದ ಪ್ರಥಮ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಲಿದೆ ಎನ್ನಲಾಗಿದೆ.
ಆರೋಗ್ಯ ಸಚಿವರ ಜೊತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಲಾಗಿದೆ. ಚರ್ಚೆಯ, ಆಧಾರದಲ್ಲಿ ಕೆಳಕಂಡ ನಿರ್ಣಯ ತೆಗೆದುಕೊಳ್ಳಲಾಗಿದೆ.
01.02.2021 ರಿಂದ 9,10,11 ಹಾಗೂ 12ನೇ ತರಗತಿಗಳು ಪೂರ್ಣ ದಿನ ನಡೆಯಲಿವೆ.
6-8 ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ಮುಂದುವರೆಯಲಿವೆ.
ಮುಂದಿನ ಫೆಬ್ರುವರಿ 2021ರಲ್ಲಿ ತಾಂತ್ರಿಕ ಸಲಹಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಉಳಿದ ತರಗತಿಗಳನ್ನ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ.
ಆಫ್ ಲೈನ್/ಆನ್ ಲೈನ್ ಆಯ್ಕೆ ಮುಂದುವರೆಯಲಿದೆ. ಹಾಜರಾತಿ ಕಡ್ಡಾಯವಲ್ಲ.
varthabharati
Please follow and like us: