ಜೀವನದಿ ಕಾವೇರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಾಗೀನ ಅರ್ಪಣೆ

ರಾಜ್ಯದ ಜನತೆಯ ಪರವಾಗಿ, ಸಂಪ್ರದಾಯದಂತೆ ಜೀವನದಿ, ಜೀವನಾಡಿ ಕಾವೇರಿ ಮಾತೆಗೆ ಇಂದು ಪೂಜೆ ಸಲ್ಲಿಸಿ ನಂತರ ಕೃಷ್ಣರಾಜಸಾಗರ, ಕಬಿನಿ ಜಲಾಶಯಗಳಲ್ಲಿ ಕಾವೇರಿ ಮಾತೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಬಾಗಿನ ಅರ್ಪಿಸಿದರು. ರಾಜ್ಯದಲ್ಲಿ ಜೀವಜಲ ಸದಾ ತುಂಬಿರಲಿ, ಮಳೆ ಬೆಳೆಗಳು ಸಮೃದ್ಧವಾಗಿರಲಿ, ನಾಡು ಹಸಿರಾಗಿದ್ದು, ರೈತರ ಬಾಳು ಸದಾ ಹಸನಾಗಿರಲಿ ಎಂದು ಪ್ರಾರ್ಥನೆ ಮಾಡಿದರು.

ಜೀವನಾಡಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ತುಂಬಿರುವ ಕೆ.ಆರ್.ಎಸ್ ಜಲಾಶಯದಲ್ಲಿ ಬಾಗಿನ ಅರ್ಪಿಸಿದರು. ಜಿಲ್ಲಾ ಉಸ್ತುವಾರಿ ಹಾಗು ಸಹಕಾರ ಸಚಿವರು, ಮಂಡ್ಯ ಸಂಸತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error