ಜಿ.ಪಂ. ಅಧ್ಯಕ್ಷೀಯ ಚುನಾವಣೆ : ಬಿಜೆಪಿಗೆ ಮುಖಭಂಗ

Kannadanet NEWS, ಕೊಪ್ಪಳ
ಜಿಲ್ಲಾ ಪಂಚಾಯತ್ ಅಧ್ಯಕ್ಷ‌‌ ಸ್ಥಾನಕ್ಕೆ ಸಂಬಂಧಿಸಿದಂತೆ ಕಳೆದ 6 ತಿಂಗಳಿನಿಂದ ನಡೆದ ನಾಟಕೀಯ ಬೆಳವಣಿಗೆಗೆ ಕೊನೆಗೂ ತೆರೆ ಬಿದ್ದು ಅಧ್ಯಕ್ಷರಾಗಿ ರಾಜಶೇಖರ ‌ಹಿಟ್ನಾಳ 2ನೇ‌ ಬಾರಿಗೆ ಆಯ್ಕೆ ಆಗಿದ್ದಾರೆ.
ಈ ಹಿಂದೆ‌ ಅಧ್ಯಕ್ಷರಾಗಿದ್ದ ವಿಶ್ವನಾಥ ರೆಡ್ಡಿ ವಿರುದ್ಧ ಸ್ವಪಕ್ಷೀಯರೇ ಅವಿಶ್ವಾಸ ಮಂಡಿಸಿದ್ದರಿಂದ ಸ್ಥಾನ ತೆರವಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ರಾಜಶೇಖರ ಹಿಟ್ನಾಳ ಪರ 23 ಸದಸ್ಯರು ಕೈ ಎತ್ತಿದ್ದರಿಂದ ಮತ್ತೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗಂಗಮ್ಮ ಗುಳಗಣ್ಣವರ ಪರ ಕೇವಲ 5 ಸದಸ್ಯರು ಮಾತ್ರ ಕೈ ಎತ್ತುವ ಮೂಲಕ ಮತ ಹಾಕಿದ್ದು, ಹೀನಾಯ ಸೋಲುಂಡಿದ್ದಾರೆ.
ಒಟ್ಟು 29 ಸದಸ್ಯ ಬಲದ ಕೊಪ್ಪಳ ಜಿಲ್ಲಾ ಪಂಚಾಯತ್ ನಲ್ಲಿ 16 ಸದಸ್ಯರು ಕಾಂಗ್ರೆಸ್, 11 ಬಿಜೆಪಿ ಮತ್ತು ಒಬ್ಬರು ಪಕ್ಷೇತರ‌ ಸದಸ್ಯರಿದ್ದಾರೆ.‌ ಈ ಪೈಕಿ ಇಂದು 28 ಸದಸ್ಯರು ಚುನಾವಣೆ ಸಭೆಗೆ ಹಾಜರಾಗಿದ್ದರು. ಈ ಹಿಂದಿನ ಅಧ್ಯಕ್ಷ ವಿಶ್ವನಾಥ ರೆಡ್ಡಿ ಗೈರಾಗಿದ್ದರು.
ರಾಜಶೇಖರ್ ಹಿಟ್ನಾಳ ಪರ ಕಾಂಗ್ರೆಸ್ 16, ಬಿಜೆಪಿಯ 6 ಮತ್ತು ಒಬ್ಬ ಪಕ್ಷೇತರ ಸದಸ್ಯ ಮತ ಹಾಕಿದ್ದಾರೆ.

ಗಂಗಮ್ಮ ಗುಳಗಣ್ಣವರ ತಮ್ಮ ಮತ ಸೇರಿ ಸ್ವಾತಿ ರಾಮಮೋಹನ್, ಗವಿಸಿದ್ದಪ್ಪ ಕರಡಿ, ರಾಮಣ್ಣ ಚೌಡ್ಕಿ ಮತ್ತು ಕೆ.ಮಹೇಶ ಮಾತ್ರ ಮತ ಹಾಕಿದ್ದಾರೆ. ಬಿಜೆಪಿಯನ್ನು ನೆಚ್ಚಿಕೊಂಡು ಬಂದಿದ್ದ ವಿಶ್ವನಾಥ ರೆಡ್ಡಿಗೆ ಬಚಾವ್ ಮಾಡುವುದರಲ್ಲಿ ನಾಯಕರು ವಿಫಲರಾಗಿದ್ದಾರೆ. ಡಿಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ ಕನಕಗಿರಿ ಶಾಸಕ ಬಸವರಾಜ್ ದಡೆಸೂಗೂರ್ ಹಾಕಿದ್ದ ಸವಾಲಿಗೆ ಜವಾಬ್ ನೀಡುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ

Please follow and like us:
error