ಜಿಲ್ಲೆಯಲ್ಲಿ ಇಂದು 113 ಪಾಜಿಟಿವ್, ಇಬ್ಬರ ಸಾವು

ಕೊಪ್ಪಳ :  ಜಿಲ್ಲೆಯಲ್ಲಿ ಕರೋನಾ ತನ್ನ ಹಾವಳಿ ಮುಂದುವರೆಸಿದ್ದು ಇಂದು 113 ಪಾಜಿಟಿವ್ ಪ್ರಕರಣಗಳು ವರದಿಯಾಗಿವೆ. ಗಂಗಾವತಿ 58, ಕೊಪ್ಪಳ 32, ಕುಷ್ಟಗಿ 13 ಹಾಗೂ ಯಲಬುರ್ಗಾದಲ್ಲಿ 10 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಇವರೆಗೆ 9334 ಪಾಜಿಟಿವ್ ಪ್ರಕರಣಗಳು ವರದಿಯಾದಂತಾಗಿದೆ.  ಇಂದು ಇಬ್ಬರು ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ಇದುವರೆಗೆ ಸಾವನ್ನಪ್ಪಿದ್ದವರ  ಸಂಖ್ಯೆ 214 ತಲುಪಿದೆ. ಇಂದು 200 ಜನರನ್ನು ಡಿಸ್ಚಾರ್ಜ ಮಾಡಲಾಗಿದ್ದು ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 7426 ಜನರು ಡಿಸ್ಚಾರ್ಜ ಆಗಿದ್ದಾರೆ. 1425 ಜನ ಹೋಮ್ ಐಸೋಲೇಷನ್ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Please follow and like us:
error