ಜಿಲ್ಲಾ ಸಂಯೋಜಕರಾಗಿ ನೇಮಕ

ಕೊಪ್ಪಳ : ಫೆ ೦೭, ನಗರದ ಕಾಂಗ್ರೆಸ್ ಮುಖಂಡ ಎಸ್.ಬಿ.ಮಾಲಿಪಾಟೀಲ್ ರವರನ್ನು ಕೆಪಿಸಿಸಿ ರಾಜೀವ್‌ಗಾಂಧಿ ಪಂಚಾಯತ್ ರಾಜ್ಯ ಸಂಘಟನೆಯ ಕೊಪ್ಪಳ ಜಿಲ್ಲಾ ಸಂಯೋಜಕರನ್ನಾಗಿ ನೇಮಿಸಿ ಆದೇಶ ನೀಡಿದ್ದಾರೆ.
ಇತ್ತೀಚೆಗೆ ಜರುಗಿದ ಕಾಂಗ್ರೆಸ್‌ನ ಗಾಂಧಿಭವನ ಪಾದಯಾತ್ರೆ ಸಮಾರೋಪದಲ್ಲಿ ಪಂಚಾಯತ್ ರಾಜ್ಯ ಸಂಘಟನೆ ರಾಜ್ಯ ಸಂಚಾಲಕ ಎಂ.ಎ.ರಂಗಸ್ವಾಮಿ ಆದೇಶ ನೀಡಿ ಕಾಂಗ್ರೆಸ್ ಪಕ್ಷದ ನಿಯಮಗಳಿಗೆ ಅನುಸಾರ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ತಿಳಿಸಿದ್ದಾರೆ. ಎಸ್.ಬಿ.ಮಾಲಿಪಾಟೀಲ್‌ರವರು ಎನ್‌ಎಸ್‌ಯುಐನ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.