ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿರಿ: ಹನುಮಂತಪ್ಪ ಅಂಡಗಿ

 

ಕೊಪ್ಪಳ,: ಮುಂಬರುವ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಜಿಲ್ಲೆಯ ಎಲ್ಲಾ ಆಜೀವ ಸದಸ್ಯರು ನನಗೆ ಈ ಬಾರಿ ಬೆಂಬಲಿಸಿರಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಹನುಮಂತಪ್ಪ ಅಂಡಗಿ ಚಿಲವಾಡಗಿ ವಿನಂತಿಸಿದರು.

ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಹಿತ್ಯದಲ್ಲಿ ವ್ಯಕ್ತಿಗಳ ಗುಂಪು ಇರಬಾರದು ಸಾಹಿತ್ಯದ ಗುಂಪುಗಳಿರಬೇಕು ಸ್ವಾಭಿಮಾನಿ ಸಾಹಿತ್ಯದ ಬಣವಾಗಿ ಗುರುತಿಸಿ ಕೊಳ್ಳ ಬಯಸುತ್ತೇನೆ. ಎಲ್ಲರೂ ಸೇರಿ ಪ್ರಚಾರ ಮಾಡುವಂತಾಗಬೇಕು. ನಮ್ಮ ಚುನಾವಣೆ ಬೇರೆಯವರಿಗೂ ಮಾದರಿಯಾಗಬೇಕು ನಮ್ಮ ಭಾಗದವರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸಿಗುವಂತಾಗಬೇಕು. ಸಿದ್ದಯ್ಯ ಪುರಾಣಿಕರ ಪ್ರತಿಷ್ಠಾನ ನಿರ್ಮಾಣ, ಸಾಹಿತ್ಯಾಸಕ್ತರಿಗೆ ಕಸಾಪ ಭವನ ನಿರ್ಮಾಣಕ್ಕೆ ಮುಂದಾಗುತ್ತೇನೆ. ಬಣಗಳಿಂದಾಗಿ ಸೋತ ಅಭ್ಯರ್ಥಿಗಳ ಪರ ಇರುವವರಿಗೆ ಸೂಕ್ತ ಸ್ಥಾನಮಾನ ಸಿಗುವುದಿಲ್ಲ. ಅದನ್ನು ಮೀರಿ ಎಲ್ಲರನ್ನೂ ಜೊತೆ ತೆಗೆದುಕೊಂಡು ಹೋಗುತ್ತೇನೆ ಎಂದು ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ, ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಹನುಮಂತಪ್ಪ ಅಂಡಗಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹತ್ತಕ್ಕೂ ಹೆಚ್ಚು ಚುಸಾಪ ಜಿಲ್ಲಾ ಸಮ್ಮೇಳನ, ಎರಡು ರಾಜ್ಯ ಸಮ್ಮೇಳನ ಮಾಡಿದ್ದೇನೆ. ೩೦ ಸಂಪಾದಿತ ಕೃತಿಗಳು ಹಾಗೂ ೨ ಸ್ವತಂತ್ರ ಕೃತಿಗಳನ್ನು ಪ್ರಕಟಿಸಿದ್ದೇನೆ. ಜಿಲ್ಲೆಯಲ್ಲಿ ಎರಡು ಗುಂಪುಗಳಲ್ಲಿ ಸಾಹಿತಿಗಳು ಗುರುತಿಸಿಕೊಂಡಿರುವುದರಿಂದ ನೇರವಾಗಿ ಯಾರೂ ಬಂದಿಲ್ಲ. ಬಣಗಳಲ್ಲಿ ಸಾಹಿತಿಗಳು ಹಂಚಿ ಹೋಗಿದ್ದಾರೆ ಎಂದು ಹೇಳಿದರು. ಖರ್ಚು ಮಾಡುವ ಅವಶ್ಯಕತೆ ಇಲ್ಲ ಅನಿಸುತ್ತೆ. ಎಲ್ಲರೂ ನನ್ನ ಸೇವೆಯನ್ನು ಗುರುತಿಸಿ ಆಯ್ಕೆ ಮಾಡಿದರೆ ಒಳ್ಳೆಯ ಕೆಲಸ ಮಾಡುತ್ತೇನೆ ಆಯ್ಕೆ ಮಾಡಿ ಎಂದು ಮನವಿ ಮಾಡಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ರಮೇಶ ಸುರ್ವೆ ಉಪಸ್ಥಿತರಿದ್ದರು.

 

Please follow and like us:
error