ಜಿಲ್ಲಾ,ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳೂ ಎರಡು ಪುಟ ಜಾಹೀರಾತು ನೀಡಲು ಮನವಿ

ಬೆಂಗಳೂರು : ಕೋವಿಡ್ ತುರ್ತು ಪರಿಸ್ಥಿತಿ ಲಾಕ್ ಡೌನ್ ಅವಧಿಯಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆ ಗಳಿಗೆ ಹಾಜರಾತಿ ವಿನಾಯಿತಿ ಬದಲಿಗೆ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಾಹೀರಾತು ನೀಡಬೇಕು ಎಂದು  ಮುಖ್ಯಮಂತ್ರಿಗಳಾದ  ಬಿ.ಎಸ್.ಯಡಿಯೂರಪ್ಪ, ವಾರ್ತಾ ಸಚಿವರಾದ   ಸಿ.ಸಿ.ಪಾಟೀಲ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ   ಪ್ರಧಾನ ಕಾರ್ಯದರ್ಶಿಗಳು ಮತ್ತು  ಆಯುಕ್ತರಲ್ಲಿ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ವತಿಯಿಂದ ಮನವಿ ಮಾಡಿಕೊಳ್ಳಲಾಗಿತ್ತು. ಮತ್ತು ಈ ಕುರಿತಂತೆ ಸಂಘದ  ಅಧ್ಯಕ್ಷರಾದ ಎನ್.ಮಂಜುನಾಥ ಅವರು ಮುಖ್ಯಮಂತ್ರಿಗಳು ಮತ್ತು ವಾರ್ತಾ ಇಲಾಖೆ  ಆಯುಕ್ತರೊಂದಿಗೆ ನಿರಂತರ ಸಂಹವನ ನಡೆಸಿದ್ದರ ಫಲವಾಗಿ  ಇಂದು ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಅರ್ಧ ಪುಟ ಜಾಹೀರಾತು ಲಭ್ಯವಾಗಿದೆ.  ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಹಾಗೂ  ಆಯುಕ್ತರಿಗೆ ಸಂಘದ ವತಿಯಿಂದ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸಲಾಗಿದೆ.

ಜಾಹೀರಾತು ನೀಡಿಕೆ ಇಂದಿನ ದಿನಕ್ಕಷ್ಟೇ ಸೀಮಿತಗೊಳಿಸದೇ ಕೋವಿಡ್-19 ಸಂಕಷ್ಟ ಅವಧಿ ಮುಗಿಯುವ ವರೆಗೆ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳಿಗೆ ಪ್ರತಿ ತಿಂಗಳೂ ಎರಡು ಪುಟಗಳಷ್ಟು ಜಾಹೀರಾತು ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ವಿನಂತಿಸಲಾಗಿದೆ.  ಈ ಕುರಿತಂತೆ ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂಧನೆ ದೊರಕಿದ್ದು,  ಸಂಘದ ಅಧ್ಯಕ್ಷರಾದ ಎನ್.ಮಂಜುನಾಥ ಅವರು   ಈ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ನಿರಂತರ ಸಂಹವನ ನಡೆಸುತ್ತಿದ್ದಾರೆ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ,  ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ ತಿಳಿಸಿದ್ದಾರೆ

Please follow and like us:
error