‘ಜಿನ್ನಾ ಕೋಮುವಾದಿಯೆ?’ ಪುಸ್ತಕ ಲೋಕಾರ್ಪಣೆ

ಬೆಂಗಳೂರು :   ಹಿರಿಯ ಪತ್ರಕರ್ತ  ಬರಹಗಾರ ಬಿ.ಎಂ.ಹನೀಪ್ ರ ಜಿನ್ನಾ ಕೋಮುವಾದಿಯೇ ? ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.  ಸೋಮವಾರ ಸಂಜೆ ಎಂ.ಟಿ.ಸುಭಾಶ್ಚಂದ್ರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ  ಹಿರಿಯ ಬರಹಗಾರರಾದ ಎಲ್.ಹನುಮಂತಯ್ಯ ಮತ್ತು ಮೂಡ್ನಾಕೂಡು ಚಿನ್ನಸ್ವಾಮಿ ಪುಸ್ತಕ ಲೋಕಾರ್ಪಣೆ ಮಾಡಿದರು.

 

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆತ್ಮೀಯವಾಗಿ ಬಿ.ಎಂ.ಹನೀರ್ ರು  ಬರೆದು ಮಾಹಿತಿ ಹಂಚಿಕೊಂಡಿದ್ಧಾರೆ.

ಪುಸ್ತಕ ಕೈಗೆ ಸಿಕ್ಕಿದ್ದು ಶನಿವಾರ ರಾತ್ರಿ. ಭಾನುವಾರ ಬೆಳಿಗ್ಗೆ Institution of political studies ಏರ್ಪಡಿಸಿದ್ದ ಕಮ್ಮಟದಲ್ಲಿ ನಾನು Gandhi Socialism ಕುರಿತು ಉಪನ್ಯಾಸ ಮಾಡಬೇಕಿತ್ತು. ಗೆಳೆಯ ಅಕ್ರಂ ಹಸನ್ ಒತ್ತಾಸೆಯಂತೆ ಅಲ್ಲಿ ಪುಸ್ತಕ ಬಿಡುಗಡೆಯಾಯಿತು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಯುವಕರು ಅಲ್ಲಿ ಭಾಗವಹಿಸಿದ್ದರು. ೭೦ ಪ್ರತಿಗಳು ಮಾರಾಟವಾದವು.

* * ಮುಂದಿನ ವಾರ ದಾವಣಗೆರೆ ಮತ್ತು ಮಂಗಳೂರಲ್ಲಿ ಪುಸ್ತಕ ಬಿಡುಗಡೆಯ ಎರಡು ಸಮಾರಂಭಗಳನ್ನು ಗೆಳೆಯರು ಯೋಜಿಸಿದ್ದಾರೆ. ನಾಳೆಯಿಂದ ನವಕರ್ನಾಟಕ, ಆಕೃತಿಮತ್ತು ಸಪ್ನಾ ಗಳಲ್ಲಿ ಪುಸ್ತಕ ಸಿಗಲಿದೆ.

* ಬೆಂಗಳೂರಿನ ಗೆಳೆಯ ವಹೀದ್ ಕಾಯರಕಾನ್ ೫೦ ಪ್ರತಿಗಳನ್ನು ತರಿಸಿಕೊಂಡಿದ್ದಾರೆ. ಮಂಗಳೂರು, ಸಕಲೇಶಪುರ, ಉಡುಪಿ, ಚಿಕ್ಕಮಗಳೂರು, ಭಟ್ಕಳದ ಶಿವಮೊಗ್ಗದ ಗೆಳೆಯರು ತಲಾ ೫೦ ಪ್ರತಿಗಳಿಗೆ ಆರ್ಡರ್ ಕೊಟ್ಟಿದ್ದಾರೆ.

ಪುಸ್ತಕ ಕೈಗೆ ಸಿಕ್ಕಿ ಮೂರನೇ ದಿನ ನೋಡಿದರೆ ೪೨೫ ಪ್ರತಿಗಳು ಮಾರಾಟದ ಲೆಕ್ಕದಲ್ಲಿವೆ.

* ಪ್ರತಿಗಳು ಬೇಕಾದವರು 91481 50786 ಈ ನಂಬರ್ ಗೆ G Pay ಮಾಡಿದರೆ ಎರಡು ದಿನದಲ್ಲಿ ಪುಸ್ತಕ ಮನೆಬಾಗಿಲಿಗೆ ತಲುಪಲಿದೆ.

ಪುಸ್ತಕದಲ್ಲಿ ಜಿನ್ನಾ ವ್ಯಕ್ತಿತ್ವದ ಕುರಿತ ಚಿಕಿತ್ಸಕ ನೋಟವಿದೆ. ಇತಿಹಾಸದ ಸರಿ ತಪ್ಪುಗಳ ಮರು ಓದು ಇದೆ. ಜಿನ್ನಾ, ಗಾಂಧಿ, ಸಾವರ್ಕರ್ ನಡುವಣ ಇತಿಹಾಸದ ತಿಕ್ಕಾಟದ ವಿವರಗಳಿವೆ. ಎಂ ಎನ್ ರಾಯ್, ಲೋಹಿಯಾ, ಅಂಬೇಡ್ಕರ್ ಅವರು ವ್ಯಕ್ತಪಡಿಸಿದ ಜಿನ್ನಾ ಕುರಿತ ಒಳನೋಟಗಳಿವೆ.

* ನೀವೂ G Pay ಮಾಡುತ್ತೀರಲ್ಲಾ…? ಪುಟ 108/ ಬೆಲೆ ರೂ.100

 

 

Please follow and like us:
error