ಜಿಂದಾಲ್ ಕಾರ್ಖಾನೆ ಎದುರು ನೌಕರನ ಏಕಾಂಗಿ ಹೋರಾಟ

 

Bellary :    ದೇಶದ  ಅತಿ ದೊಡ್ಡ ಉಕ್ಕು ಉತ್ಪಾದನೆಯ ಜಿಂದಾಲ್ ಕಾರ್ಖಾನೆಯಲ್ಲಿ ನಷ್ಟದ ನೆಪ ಹೇಳಿ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದ್ದು, ಈಗ ನನಗೆ ನ್ಯಾಯಾ ಬೇಕು ಅಂತಾ ಕಾರ್ಮಿಕನೊಬ್ಬ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾನೆ.

ಜಿಂದಾಲ್ ಕೊರೋನಾ ಸೋಂಕು ವ್ಯಾಪಕವಾಗಿ ಹರಡಲು ಕಾರಣವಾಗಿ ರಾಜ್ಯದಲ್ಲಿಯೇ ಸದ್ದು ಮಾಡಿತ್ತು. ಈಗ ಕಾರ್ಮಿಕರನ್ನು ಕೆಲಸದಿಂದ ಕೈಬಿಡುತ್ತಿದೆ. ಸಾವಿರಾರು ನೌಕರರ ಕೆಲಸಕ್ಕೆ ಕುತ್ತು ತಂದಿದೆ. ಇದರಿಂದ ಕಾರ್ಮಿಕರು ಹತಾಶೆಗೊಂಡಿದ್ದಾರೆ. ಆಕ್ರೋಶಗೊಂಡು ಪ್ರತಿಭಟನೆಗೆ ಇಳಿದಿದ್ದಾರೆ. ಇಂದು ತನ್ನ ಕೆಲಸ ಕಳೆದುಕೊಂಡ ಕಾರ್ಮಿಕನೊಬ್ಬ ನನಗೆ ನ್ಯಾಯಾ ಕೊಡಿಸಿ ಅಂತಾ ಜಿಂದಾಲ್ ಮುಖ್ಯದ್ವಾರದ ಬಳಿ ಏಕಾಂಗಿಯಾಗಿ ಪ್ರತಿಭಟನೆ ಮಾಡುತ್ತಿದ್ದಾನೆ. ಜಿಂದಾಲ್ ಕಾರ್ಖಾನೆಯಿಂದ ಏಕಾ ಏಕಿ ನೌಕರರ ಕಿಕ್ ಔಟ್ ಮಾಡುತ್ತಿದೆ. ನಷ್ಟದ ನೆಪ, ಕೆಲಸದಲ್ಲಿ ತೃಪ್ತಿಯಿಲ್ಲ ಹಾಗೂ 50  ವರ್ಷ ಮೇಲ್ಪಟ್ಟ  ನೌಕರರನ್ನು ಕಾರಣ ಹೇಳದೆ ಕೆಲಸದಿಂದ ತೆಗೆದು ಹಾಕುತ್ತಿದ್ದೆ.ಹೀಗಾಗಿ, ಕಿಚಡಿ ಪ್ರಕಾಶ್ ಎಂಬ ಜಿಂದಾಲ್ ನೌಕರ ಕಳೆದ 5 ವರ್ಷಗಳಿಂದ ಕಾರ್ಖಾನೆಯಲ್ಲಿ ಜಇ ಆಗಿ ಕೆಲಸ ಮಾಡುತ್ತಿದ್ದಾನೆ. ಏಕಾ ಏಕಿ ಕೆಲಸದಿಂದ ಕೈಬಿಟ್ಟಿರುವುದರಿಂದ ಇಂದು ಧರಣಿ ಕುಳಿತು ನ್ಯಾಯಾ ಕೇಳುತ್ತಿದ್ದಾನೆ. ಈಗಾಗ್ಲೆ ಸ್ಥಳಕ್ಕೆ  ಪೊಲೀಸರು ಮತ್ತು ಜಿಂದಾಲ್ ಸಿಬ್ಬಂದಿ ದೌಡಾಯಿಸಿದ್ದು ಕಾರ್ಮಿಕನನ್ನು ಧರಣಿ ಕೈಬಿಡುವಂತೆ  ಮನವಿ ಮಾಡುತ್ತಿದೆ.

Please follow and like us:
error