ಜಾನಪದ ಕಲಾವಿದರಿಂದ ಲೋಕೋತ್ಸವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ


ಕೊಪ್ಪಳ ಡಿ: ಕರ್ನಾಟಕ ಜಾನಪದ ಪರಂಪರೆಯ ಸಂರಕ್ಷಣೆ, ಸಂವರ್ಧನೆ, ಪ್ರಸಾರ ಕಾರ್ಯದಲ್ಲಿ ನಿರತವಾಗಿರುವ ಕರ್ನಾಟಕ ಜಾನಪದ ಪರಿಷತ್ತು. ೨೦೨೧ರ ಫೇಬ್ರವರಿಯಲ್ಲಿ ಜಾನಪದಲೋಕದಲ್ಲಿ ‘ಪ್ರವಾಸಿ ಜಾನಪದ ಲೋಕೋತ್ಸವ’ ಸಂಭ್ರಮವನ್ನಾಗಿ ಆಚರಿಸಲಾಗುವುದು.
ಆ ಸಂದರ್ಭದಲ್ಲಿ ವಿವಿಧ ಜಾನಪದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ಕಲಾವಿದರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಗಾಗಿ ಕೊಪ್ಪಳ ಜಿಲ್ಲೆಯ ಅರ್ಹ ಜನಪದ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲಾವಿದರು ತಾವು ಕಾರ್ಯನಿರ್ವಹಿಸುತ್ತಿರುವ ಕಲೆ, ನೀಡಿರುವ ಕಾರ್ಯಕ್ರಮದ ವಿವರ, ಪಡೆದ ಪ್ರಶಸ್ತಿ, ಪುರಸ್ಕಾರ, ವಯಸ್ಸು ಮುಂತಾದ ವಿವರಗಳ ಸಂಕ್ಷಿಪ್ತ ಪರಿಚಯ, ಮೊಬೈಲ್ ಸಂಖ್ಯೆ ಹಾಗೂ ಪೂರ್ಣ ವಿಳಾಸದೊಂದಿಗೆ ೫೦ ವರ್ಷ ಮೇಲ್ಪಟ್ಟ ಜನಪದ ಕಲಾವಿದರು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಬಸವರಾಜ ಆಕಳವಾಡಿ ಜಿಲ್ಲಾಧ್ಯಕ್ಷರು ಕರ್ನಾಟಕ ಜಾನಪದ ಪರಿಷತ್ತು, ಸಿರಿಗಂಧ, ವರ್ಣೇಕರ್ ಬಡಾವಣೆ, ಸ್ವಾಮಿ ವಿವೇಕಾಂದ ಶಾಲೆ ಹಿಂಭಾಗ, ಕೊಪ್ಪಳ -೫೮೩೨೩೧ (ಮೊ.೯೪೮೧೩೪೭೩೦೬) ಇವರಿಗೆ ಜನವರಿ ೦೮ ರ ಒಳಗಾಗಿ ಕಳುಗಿಸಿಕೊಡುವಂತೆ ಕೋರಲಾಗಿದೆ. ಪರಿಷತ್ತಿನ ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.

Please follow and like us:
error