ಜಾನಪದ ಅಕಾಡೆಮಿ ಪ್ರಶಸ್ತಿಗೆ ಮುಮ್ತಾಜ್ ಬಿರಾದಾರ್ ಆಯ್ಕೆ

ಬೆಂಗಳೂರು: ಕರ್ನಾಟಕ ಜಾನಪದ ಅಕಾಡಮಿ ನೀಡುವ 2018ನೇ ಸಾಲಿನ ವಿಚಾರ ವಿಮರ್ಶೆ ಸಂಶೋಧನ ವಿಭಾಗದ ಪುಸ್ತಕ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕಿ, ಸಾಹಿತಿ ಲೇಖಕಿ ಡಾ.ಮುಮ್ತಾಜ್ ಬಿರಾದಾರ್ ಅವರ ಕೃತಿ ಆಯ್ಕೆಯಾಗಿದೆ. ಜಾನಪದ ಸಾಹಿತ್ಯದಲ್ಲಿ ತವರು ಮನೆ ಪುಸ್ತಕವನ್ನ ಕರ್ನಾಟಕ ಜಾನಪದ ಅಕಾಡೆಮಿ ಆಯ್ಕೆ ಮಾಡಿದೆ. ಪ್ರಶಸ್ತಿಯೂ 25,000 ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ‌. ಫೆಬ್ರುವರಿ 7 ರಂದು ಚಾಮರಾಜ ನಗರದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ..
ಅಭಿನಂದನೆ:
ಡಾ. ಮುಮ್ತಾಜ ಬಿರಾದಾರ್ ಅವರ ಕೃತಿ ಕರ್ನಾಟಕ ಜಾನಪದ ಅಕಾಡಿಮೆ ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಕಲಬುರ್ಗಿಯ ಹಿರಿಯ ಪತ್ರಕರ್ತ ಅಪ್ಪಾರಾವ್ ಬಿರಾದಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

Please follow and like us:
error