ಕೊಪ್ಪಳ: ಕೊಪ್ಪಳ ಗವಿಮಠದಜಾತ್ರೆಯ ಅಂಗವಾಗಿ ಶ್ರೀಗವಿಸಿದ್ಧೇಶ್ವರ ಆಯುರ್ವೆದ ಮಹಾ ವಿದ್ಯಾಲಯದಲ್ಲಿ ಪ್ರತಿ ವರ್ಷದಂತೆ ಕೊಪ್ಪಳ ಜಿಲ್ಲಾ ಭಾರತೀಯ ರೆಡ್ಕ್ರಾಸ್ ಸಂಸ್ಥೆ ವತಿಯಿಂದರಕ್ತದಾನ ಶಿಬಿರ ಹಾಗೂ ನೇತ್ರದಾನ ಹೆಸರು ನೊಂದಣಿಕಾರ್ಯನಡೆಯುತ್ತದೆ.ಯುವಕರು, ಹೆಣ್ಣುಮಕ್ಕಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಜಾತ್ರೆಗೆ ಬಂದ ಭಕ್ತರುಇಂತಹಕೋವಿಡ್ ೧೯ ಹಿನ್ನೆಲೆಯ ಸಂದರ್ಭದಲ್ಲೂಅತ್ಯಂತಉತ್ಸುಕರಾಗಿ , ಸ್ವಯಂ ಪ್ರೇರಿತರಾಗಿ ಆಗಮಿಸಿದ ಭಕ್ತರುಜಾತ್ರಾ ಮಹೋತ್ಸವದಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವುದರ ಮೂಲಕ ಸಂಕಷ್ಟದಲ್ಲಿರುವ ರೋಗಿಗಳಿಗೆ ಜೀವದಾನ ಮಾಡುವಲ್ಲಿ ಮಾನವೀಯತೆ ಮೆರೆದರು. ಈ ಶಿಬಿರದಲ್ಲಿ ಜಾತ್ರೆಗೆ ಬಂದ ಭಕ್ತರು ಸ್ವಯಂಪ್ರೇರಿತರಾಗಿರಕ್ತದಾನ ಮಾಡಿದರು. ಈ ಶಿಬಿರವು ಇಂದು ದಿನಾಂಕ ೩೦-೦೧-೨೦೨೧ ರಿಂದ ೦೧-೦೨-೨೦೨೧ ನೇ ತಾರೀಖಿನವರೆಗೆ ಬೆಳಿಗ್ಗೆ ೯ ರಿಂದ ಸಂಜೆ ೫ ರವರೆಗೆಜರುಗಲಿದೆ. ಮೊದಲ ದಿನವಾದ ನಿನ್ನೆ ೧೨೨ಯುನಿಟ್ರಕ್ತ ಹಾಗೂ ನೇತ್ರದಾನಕ್ಕೆ ೨೦ ಜನ ಭಕ್ತರು ಹೆಸರು ನೊಂದಾಯಿಸಿಕೊಂಡಿದ್ದರೆ, ಇಂದು ೧೪೦ಯೂನಿಟ್ರಕ್ತ,ನೇತ್ರದಾನಕ್ಕೆ ೧೫ಜನ ಭಕ್ತರು ಹೆಸರು ನೊಂದಾಯಿಸಿಕೊಂಡಿದ್ದರೆ ಎಂದುರೆಡ್ಕ್ರಾಸ್ ಸಂಸ್ಥೆಯ ಡಾ ಶ್ರೀನಿವಾಸ್ ಹ್ಯಾಟಿ ತಿಳಿಸಿದ್ದಾರೆ.
ಜಾತ್ರೆಯಲ್ಲಿ ರಕ್ತದಾನ ಶಿಬಿರ ಹಾಗೂ ನೇತ್ರದಾನಕ್ಕೆ ಹೆಸರು ನೊಂದಣಿ
Please follow and like us: