ಜಾತ್ಯತೀತ ಮತಗಳ ವಿಭಜನೆ ತಡೆಯಬೇಕು : ಆದಿಲ್ ಪಟೇಲ್

ಕೊಪ್ಪಳ, ಏ. ೨೦: ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸಂವಿಧಾನದ ಉಳಿವಿಗಾಗಿ ಜಾತ್ಯತೀತ ಮತಗಳು ವಿಭಜನೆಯನ್ನು ತಡೆಯುವುದಕ್ಕೋಸ್ಕರ ಕರ್ನಾಟಕದಲ್ಲಿ ವೆಲ್ಫೇರ್ ಫಾರ್ಟಿಯು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವುದಿಲ್ಲ ಎಂದು ಪಕ್ಷದ ರಾಜ್ಯ ಚುನಾವಣಾ ಸಮೀತಿ ನಿರ್ಧರಿಸಿದೆ ಜಾತ್ಯತೀತ ಅಭ್ಯರ್ಥಿಗಳನ್ನು ಬೆಂಬಲಿಸಬೇಕೆಂದು ತಿರ್ಮಾನಿಸಿದೆ ಎಂದು ವೆಲ್ಪೇರ್ ಪಾರ್ಟಿಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅದಿಲ್ ಪಟೇಲ್ ಅವರು ಹೇಳಿದರು.
ಅವರು ಕೊಪ್ಪಳ ಜಿಲ್ಲೆಯಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾವು ಮೈತ್ರಿ ಸರ್ಕಾರದ ಅಭ್ಯರ್ಥಿಯಾದ ರಾಜಶೇಖರ್ ಹಿಟ್ನಾಳ್ ಅವರಿಗೆ ಪಾರ್ಟಿಯ ಬೆಂಬಲ ಘೋಷಣ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡುತ್ತಾ ರಾಜ್ಯ ಸಮೀತಿಯ ತೀರ್ಮಾನದಂತೆ ವೆಲ್ಫೇರ್ ಫಾರ್ಟಿ ಕೊಫ್ಪಳ ಜಿಲ್ಲಾ ಸಮಿತಿ ಮೈತ್ರಿ ಸರ್ಕಾರದ ಅಭ್ಯರ್ಥಿಯಾದ ತಮ್ಮನ್ನು ಸಂಪೂರ್ಣ ವಾಗಿ ಬೆಂಬಲಿಸಿದೆ. ನಮ್ಮ ಪಾರ್ಟಿಯು ದೇಶದ ಎಲ್ಲಾ ರಾಜ್ಯಗಳಲ್ಲಿ ಕಾರ್ಯಪ್ರವೃತ್ತವಾಗಿದೆ ಆಯ ರಾಜ್ಯದ ಜಾತ್ಯತೀತ ಪಕ್ಷಗಳಿಗೆ ನಮ್ಮ ಪಾರ್ಟಿಯು ಬೆಂಬಲ ಘೋಷಿಸಿದೆ, ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ವೆಲ್ಪೇರ್ ಫಾರ್ಟಿ ಕೊಪ್ಪಳ ಲೊಕಸಭಾ ಕ್ಷೆತ್ರದ ಸವಾಂಗಿಣ ಅಭಿವೃದ್ಧಿ ಬಯಸುತ್ತದೆ. ತಾವುಗಳು ಗೆದ್ದು ಬಂದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಕ್ಷೇತ್ರದ ಈ ಬೇಡಿಕೆಗಳನ್ನು ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅನುಷ್ಠಾನದ ಗುರಿ ಸಾದಿಸಬೇಕು, ಈ ಬೇಡಿಕೆಗಳು ರಾಜ್ಯ ಮತ್ತು ಕೇಂದ್ರ ಎರಡು ಸರ್ಕಾರಕ್ಕೆ ಸಂಬಂದಿಸಿವೆ.
ಶಿಕ್ಷಣ
ಸರ್ಕಾರಿ ಮೆಡಿಕಲ್ ಕಾಲೇಜಿನ ತಾಂತ್ರೀಕ ಅಡೆತಡೆಗಳನ್ನು ಸರಿಪಡಿಸುವುದು. ಕೊಪ್ಪಳದಲ್ಲಿ ಹೋಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವುದು. ಸರ್ಕಾರಿ ಮೆಡಿಕಲ್ ಕಾಲೇಜನಲ್ಲಿ ಆರ್ಯುವೇದ ಮತ್ತು ಯುನಾನಿ ಕಾಲೇಜಗಳ ವಿಭಾಗಳನ್ನು ಸ್ಥಾಪಿಸುವುದು. ಸರ್ಕಾರಿ ನರ್ಸಿಂಗ ಕಾಲೇಜು, ಲಾ ಕಾಲೇಜು, ಡಿ.ಪಾರ್ಮೆಸಿ, ಸಿಪಾರ್ಮೇಸಿ ಜಿ.ಟಿ.ಟಿ.ಐ ಕೋರ್‍ಸ್, ಕೌಶಲ್ಯ ಟ್ರೇನಿಂಗ್ ಆಕ್ಯಾಡೆಮಿ,ಸ್ಥಾಪಿಸುವುದು.
ಆರೋಗ್ಯ
ಸರ್ಕಾರಿ ಆಸ್ಪತೆಗಳಲ್ಲಿ ಡಯಾಲಿಸಿಸ್ ಮತ್ತು ಹಾರ್ಟ್ ಸೆಂಟರ್ ಸ್ಥಾಪಿಸುವುದು, ಸರ್ಕಾರಿ ಅಸ್ಪತ್ರೆಗೆ ೪೦೦ಬೆಡ್‌ಗೆ ಉನ್ನತಿಕರಿಸುವುದು ಹಾಗೂ ಆಯುರ್ವೇದ ಮತ್ತು ಯುನಾನಿ ಘಟಕಗಳನ್ನು ಸ್ಥಾಪಿಸುವುದು,
ಕೊಪ್ಪಳ ಸುತ್ತ ರಿಂಗ್ ರಸ್ತೆ ನಿರ್ಮಾಣ ಮಾಡುವುದು, ಕೊಪ್ಪಳ ಮತ್ತು ಬಹದ್ದೂರ್ ಬಂಡಿಯ ಕೊಟೆಗಳನ್ನು ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡುವುದು, ಇಂಡಸ್ಟ್ರೀಲ್ ಶೇಡ್ ನಿರ್ಮಿಸುವುದು, ಎಲ್ಲಾ ಜನವಸತಿ ಪ್ರದೇಶಗಳಿಗೆ ೨೪*೭ ಶುದ್ಧ ಕುಡಿಯುವ ನೀರು ಪೂರೈಕೆ, ಬಡ್ಡಿರಹಿತ ಸಾಲ ನೀಡ ಬೇಕು ಮತ್ತು ರೈತರ ರಕ್ತ ಹಿರುತ್ತಿರುವ ಬಡ್ಡಿಕೊರರನ್ನು ನಿಯಂತ್ರಿಸಬೇಕು ಹಾಗೂ ಇನ್ನು ಆನೇಕ ಜನರಿಗೆ ಉಪಯೋಗವಾಗುಂತಹ ಯೋಜನೆಗಳು ಅನುಷ್ಠಾನ ಗೋಳಿಸಬೇಕು ಮತ್ತು ತಮ್ಮ ವಿಜಯವು ಕ್ಷೆತ್ರದ ಅಭಿವೃಧಿ, ಸಮಾಜದ ಎಲ್ಲಾ ವರ್ಗಕ್ಕೆ ಸಮ ಪಾಲು ಸಮ ಬಾಳು ಅಡಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಲಿ ಹಾಗೂ ದೇಶದ ಬಹು ಸಂಸ್ಕೃತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ ಎಂದರು.
ರಾಜಶೇಖರ್ ಹಿಟ್ನಾಳ್ ಅವರು ಮಾತನಾಡಿ ವೇಲ್ಪೆರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಘಟಕದಿಂದ ಮೈತ್ರಿ ಅಭ್ಯರ್ಥಿಯಾದ ನನಗೆ ಬೆಂಬಲ ಕೊಟ್ಟಿರುವುದು ಬಹಳ ಸಂತೋಷ ಎನಿಸುತಿದೆ, ಪಾರ್ಟಿ ಮತ್ತು ಪಾರ್ಟಿಯ ಕಾರ್ಯಕರ್ತರಿಗೆ ಹಾಗೂ ಪದಾಧಿಕಾರಿಗಳಿಗೆ ನಾನು ಅಭಾರಿಯಾಗಿದ್ದೇನೆ, ಜಿಲ್ಲೆಯಾದ್ಯಂತ ನಿಮ್ಮ ಪಾರ್ಟಿಯ ಕಾರ್ಯ ಕರ್ತರು ಮತದಾರರಿಗೆ ಹೇಳಿ ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೆನೆ ಎಂದರು. ಈ ಸಂದರ್ಭದಲ್ಲಿ ವೇಲ್ಫೆರ್ ಪಾರ್ಟಿಯ ಅಫ್ಜಲ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹ್ಮದ್ ಅಲೀಮುದ್ದಿನ್, ವಲಯ ಕಾರ್ಯದರ್ಶಿ ರಾಜನಾಯಕ, ಸಮದ್ ಚೌತಾಯಿ, ಮೌಲಾ ಹುಸೇನ್ ಹಣ್ಗಿ, ನಾಸೀರ್ ಮಾಳೆಕೊಪ್ಪ, ಬಾಷು ಸಾಬ್ ಮುಲ್ಲಾ, ಖಾಸಿಂ ಅಲಿ ರೆವಡಿ, ಕಾಂಗ್ರೇಸ್ ನ ಹೊಸಪೇಟೆ ಚುನಾವಣೆ ಉಸ್ತುವಾರಿ ಅಮ್ಜದ್ ಪಟೇಲ್, ನಗರ ಘಟಕದ ಅಧ್ಯಕ್ಷ ಕಾಟನ್ ಪಾಷ ಹಾಗೂ ಇನ್ನು ಅನೇಕ ಮುಖಂಡರು ಪಾಲ್ಗೋಂಡಿದ್ದರು.

Please follow and like us:
error