ಜನರು ಮದುವೆಯಾಗುತ್ತಿದ್ದಾರೆ, ರೈಲುಗಳು ತುಂಬಿ ತುಳುಕುತ್ತಿವೆ, ಆರ್ಥಿಕ ಹಿಂಜರಿತವೆಲ್ಲಿದೆ?-ಕೇಂದ್ರ ಸಚಿವ ಸುರೇಶ್ ಅಂಗಡಿ

ಹೊಸದಿಲ್ಲಿ: ಭಾರತದ ಅರ್ಥವ್ಯವಸ್ಥೆ ‘ಚೆನ್ನಾಗಿದೆ’ ಎಂದು ಹೇಳಿರುವ ಕೇಂದ್ರ ಸಚಿವ ಸುರೇಶ್ ಅಂಗಡಿ, “ವಿಮಾನ ನಿಲ್ದಾಣಗಳು, ರೈಲುಗಳು  ಭರ್ತಿಯಾಗಿರುವುದು ಹಾಗೂ ಜನರು ವಿವಾಹವಾಗುತ್ತಿರುವುದು ದೇಶದ ಆರ್ಥಿಕತೆ ಚೆನ್ನಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದಿದ್ದಾರೆ.

ಬೆಳಗಾವಿ ವಿಧಾನಸಭಾ ಸದಸ್ಯರಾಗಿರುವ ಸುರೇಶ್ ಅಂಗಡಿ ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾಗಿದ್ದಾರೆ. ದೇಶದ ಆರ್ಥಿಕ ಸಂಕಷ್ಟದಲ್ಲಿದೆ ಎಂದು ಹೇಳಿಕೊಂಡು ಕೆಲ ಜನರು ಪ್ರಧಾನಿ ನರೇಂದ್ರ ಮೋದಿಯ ವರ್ಚಸ್ಸಿಗೆ ಹಾನಿಯುಂಟು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

“ಪ್ರತಿ ಮೂರು ವರ್ಷಗಳಿಗೊಮ್ಮೆ ಅರ್ಥವ್ಯವಸ್ಥೆಯಲ್ಲಿ ಬೇಡಿಕೆಯ ಕೊರತೆ ಎದುರಾಗುತ್ತದೆ. ಇದೊಂದು ವರ್ತುಲ. ನಂತರ ಅರ್ಥವ್ಯವಸ್ಥೆ ಇನ್ನೂ ಉತ್ತಮ ನಿರ್ವಹಣೆ ತೋರುತ್ತದೆ ಎಂದ ಅವರು  ಭಾರತ 5 ಟ್ರಿಲಿಯನ್ ಆರ್ಥಿಕತೆಯಾಗುತ್ತದೆ ಎಂದರು.

ಉತ್ತರ ಪ್ರದೇಶದಲ್ಲಿ ಈಸ್ಟರ್ನ್ ಡೆಡಿಕೇಟೆಡ್ ಫ್ರೇಟ್ ಕಾರಿಡಾರಿನ ತುಂಡ್ಲಾ-ಖುರ್ಜಾ ಸೆಕ್ಷನ್  ಪರಿಶೀಲಿಸಿದ ನಂತರ ಸಚಿವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

Please follow and like us:
error