ಚೀನಾ ಸೈನಿಕರೊಂದಿಗೆ ಸಂಘರ್ಷ : ಭಾರತೀಯ ಸೇನೆಯ ಅಧಿಕಾರಿ, ಇಬ್ಬರು ಯೋಧರು ಹುತಾತ್ಮ

ಹೊಸದಿಲ್ಲಿ: ಲಡಾಕ್ ನ ಗಲ್ವಾನ್ ಬಳಿ ಚೀನಾ ಸೈನಿಕರ ಜೊತೆ ನಡೆದ ಸಂಘರ್ಷದಲ್ಲಿ ಭಾರತೀಯ ಸೇನೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ಕೆಲ ವಾರಗಳಿಂದೀಚೆಗೆ ಎರಡೂ ದೇಶಗಳ ಸೈನಿಕರ ನಡುವೆ ಹೊಯ್ ಕೈ ನಡೆಯುತ್ತಿದೆ. “ನಿನ್ನೆ ಗಲ್ವಾನ್ ನಲ್ಲಿ ಹಿಂಸಾತ್ಮಕ ಸಂಘರ್ಷ ನಡೆದಿದ್ದು ಮೂವರು ಮೃತಪಟ್ಟಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಎರಡೂ ಕಡೆಯ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ” ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.

ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗಿನ “ಹಿಂಸಾತ್ಮಕ ಮುಖಾಮುಖಿ” ಯಲ್ಲಿ ಸೋಮವಾರ ರಾತ್ರಿ ಭಾರತೀಯ ಕರ್ನಲ್ ಮತ್ತು ಇಬ್ಬರು ಸೈನಿಕರು ಸಾವಿಗೀಡಾಗಿದ್ದಾರೆ,ಭಾರತ ಪ್ರತೀಕಾರ ತೀರಿಸಿಕೊಂಡಿದ್ದು, ಎರಡೂ ಕಡೆ ಸಾವುನೋವುಗಳು ಸಂಭವಿಸಿವೆ ಎಂದು ಮೂಲಗಳು ತಿಳಿಸಿವೆ. ಸೈನಿಕರು ಗುಂಡು ಹಾರಿಸಿಲ್ಲ  ಆದರೆ ಕಲ್ಲುಗಳು ಮತ್ತು ಲಾಠಿಗಳ  ದೈಹಿಕ ಹೋರಾಟದಲ್ಲಿ ಕೊಲ್ಲಲ್ಪಟ್ಟರು ಎಂದು ಸೇನಾ ಮೂಲಗಳು ತಿಳಿಸಿವೆ.

 

Please follow and like us:
error